ಮುಸ್ಲಿಂ ಬಾಲಕನ ಪ್ರಾಣ ಉಳಿಸಿದ ಹಿಂದೂ ಯುವಕರು!

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜುಲೈ 11 : ಪ್ರತಿಯೊಂದಕ್ಕೂ ಜಾತಿಯ ವಿಷಬೀಜ ಬಿತ್ತುವ ಈ ಕಾಲದಲ್ಲಿ, ಮಾನವೀಯತೆಗೆ ಮಿಗಿಲಾದ ಧರ್ಮವಿಲ್ಲ ಎನ್ನುವುದಕ್ಕೆ ಮಂಗಳೂರಿನಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಹಿಂದೂ ಯುವಕರು ಮುಸ್ಲಿಂ ಬಾಲಕನ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ಉಜಿರೆಯ ಅತ್ತಾಜೆಯಿಂದ ಆದಂ ಎಂಬುವರ ಕುಟುಂಬ ಚಿಕ್ಕಮಗಳೂರಿಗೆ ಹೊರಟಿತ್ತು. ದಾರಿ ಮಧ್ಯೆ ಮುಂಡಾಜೆಯ ಕಿರುಸೇತುವೆ ಬಳಿ ಮೂತ್ರ ವಿಸರ್ಜನೆಗೆಂದು ರವೂಫ್ (9) ಎಂಬ ಬಾಲಕ ಕಾರಿನಿಂದ ಇಳಿದಿದ್ದಾನೆ. ಆದರೆ, ದುರಾದೃಷ್ಟವಶಾತ್‌ ಆತ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. [ಮಗನ ಶವದೊಂದಿಗೆ ರಾತ್ರಿ ಕಳೆದ ತಾಯಿ..!]

muslim boy

ಬಂಡೆಗಲ್ಲಿನ ನಡುವೆ ಸಿಲುಕಿಕೊಂಡು ನೀರಿನಿಂದ ಹೊರಬರಲಾಗದೆ ಒದ್ದಾಡುತ್ತಿದ್ದ ರವೂಫ್‌‌ನನ್ನು ರಕ್ಷಿಸಲು ದಾರಿ ತಿಳಿಯದೇ ಜನರು ಮೂಕಪ್ರೇಕ್ಷಕರಂತೆ ನಿಂತಿದ್ದರು. ಕಕ್ಕಿಂಜೆಯಿಂದ ಮಂಗಳೂರಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರವೀಣ್, ವಿಕ್ರಂ ಹಾಗೂ ಆನಂದ್ ಎಂಬ ಯುವಕರು ತಮ್ಮ ಜೀವವನ್ನು ಲೆಕ್ಕಿಸದೆ ನೀರಿಗೆ ಧುಮುಕಿ ರವೂಫ್ ರಕ್ಷಿಸಿದ್ದಾರೆ. [ಮಾನವೀಯತೆ ಮರೆತ ಜನರಿಗೆ ಏನು ಹೇಳಬೇಕು?]

ಇನ್ನೇನು ರವೂಫ್ ತುಂಬಿ ಹರಿಯುವ ನೀರಿನಲ್ಲಿ ಕೊಚ್ಚಿಕೊಂಡು ಹೋದ ಎನ್ನುವಷ್ಟರಲ್ಲಿ ಆಪತ್ಭಾಂದವರಂತೆ ಆತನನ್ನು ರಕ್ಷಿಸಿದ ಯುವಕರು ಇತರರಿಗೆ ಮಾದರಿಯಾಗಿದ್ದಾರೆ. ರವೂಫ್ ಎಂಬ ಮುಸ್ಲಿಂ ಬಾಲಕನ ಪ್ರಾಣ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟ ಯುವಕರು, ನಮ್ಮಲ್ಲಿ ಮಾನವೀಯತೆ ಇನ್ನೂ ಸತ್ತಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.[ಬಡವರಿಗಾಗಿ ಆಟೋ ಓಡಿಸುವ ಎಂಬಿಬಿಎಸ್ ವಿದ್ಯಾರ್ಥಿ]

ಈ ಯುವಕರ ಕಾರ್ಯಕ್ಕೆ ಇಡೀ ಗ್ರಾಮವೇ ತಲೆಬಾಗಿದೆ ಮತ್ತು ಯುವಕರನ್ನು ಶಾಘಿಸಿದೆ. ಯುವಕರ ಈ ಕಾರ್ಯವು ಎಲ್ಲರಿಗೂ ಮಾದರಿಯಾಗಲೆಂದು ಗ್ರಾಮದ ನಿವಾಸಿಗಳು ಇವರನ್ನು ಸನ್ಮಾನಿಸಲು ಮುಂದಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Praveen, Vikram and Anand saved the life of muslim boy who drowned in the water near Mundaje, Mangaluru. Villagers appreciated the hindu youths humanity.
Please Wait while comments are loading...