ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ, ದ್ವಾರಕನಾಥ್ ವಿರುದ್ಧ ದೂರು

Posted By:
Subscribe to Oneindia Kannada

ಬಂಟ್ವಾಳ (ದಕ್ಷಿಣ ಕನ್ನಡ), ಡಿಸೆಂಬರ್ 6: ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕರ್ನಾಟಕ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ C.S ದ್ವಾರಕನಾಥ್ ವಿರುದ್ಧ ದೂರು ದಾಖಲಾಗಿದೆ.

ಶ್ರೀರಾಮನ ಅಸ್ತಿತ್ವದ ಬಗ್ಗೆ ಸ್ಪಷ್ಟತೆಯೂ ಇಲ್ಲ, ಪುರಾವೆಯೂ ಇಲ್ಲ: ದ್ವಾರಕನಾಥ್

ಹಿಂದೂ ಸಂಘಟನೆಯ ಮುಖಂಡ ಗಣೇಶ್ ಎಂಬುವರು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದ್ವಾರಕನಾಥ್ ವಿರುದ್ಧ ದೂರು ದಾಖಲಿಸಿದ್ದಾರೆ. ಶ್ರೀರಾಮನ ಅಸ್ತಿತ್ವಕ್ಕೆ ಸರಿಯಾದ ಸ್ಪಷ್ಟತೆಯಿಲ್ಲ. ಇತಿಹಾಸದಲ್ಲಿ ಮೂವರು ಮಹಾತ್ಮರ ಸೃಷ್ಟಿಗೆ ದಾಖಲೆ ಮತ್ತು ಪುರಾವೆಗಳಿವೆ. ಆದರೆ ಶ್ರೀರಾಮ ಹುಟ್ಟಿದ್ದ ಎಂಬುದಕ್ಕೆ ಪುರಾವೆಗಳೇ ಇಲ್ಲ ಎಂದು ದ್ವಾರಕನಾಥ್ ಅವರು ಮಂಗಳವಾರ ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು

Hindu leader files FIR against rationalist CS Dwarkanath for controversial statement on Ram

ಮಂಗಳೂರಿನ ಪುರಭವನದಲ್ಲಿ ಎಸ್ ಡಿಪಿಐನಿಂದ 'ಬಾಬರಿ ಮಸೀದಿ ಧ್ವಂಸ ರಾಷ್ಟ್ರೀಯ ಅವಮಾನಕ್ಕೆ 25 ವರ್ಷ' ವಿಷಯದ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಅಧ್ಯಕ್ಷತೆ ವಹಿಸಿ ಮಾತನಾಡಿದ ದ್ವಾರಕ ನಾಥ್, ಶ್ರೀರಾಮನ ಜನ್ಮದ ಕುರಿತು ಸರಿಯಾದ ಸ್ಪಷ್ಟತೆಯಿಲ್ಲ, ಪುರಾವೆ ಅಂತೂ ಇಲ್ಲವೇ ಇಲ್ಲ ಎಂದು ಹೇಳಿದ್ದರು.

ಶ್ರೀರಾಮನ ಬಗ್ಗೆ ವಿವದಾತ್ಮಕ ಹೇಳಿಕೆ ನೀಡಿದ್ದ ದ್ವಾರಕನಾಥ್ ಅವರ ವಿರುದ್ಧ ರಾಜ್ಯಾದ್ಯಂತ ಹಿದೂ ಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಿಡಿಸಿದ್ದಾರೆ.

ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬೇರೆ ಧರ್ಮದ ಬಗ್ಗೆ ಮಾತನಾಡುತ್ತೀರಾ ಎಂದು ಪೇಜಾವರ ಶ್ರೀ ದ್ವಾರಕನಾಥ್ ಅವರಿಗೆ ಪ್ರಶ್ನಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pro-Hindu leader Ganesh has filed an FIR against rationalist CS Dwarkanath in Bantwal city police station for allegedly making controversial statement on Lord Sri Ram and trying to spread communal tension.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ