ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚೈತ್ರಾ ಕುಂದಾಪುರ ಮಾನಭಂಗಕ್ಕೆ ಯತ್ನ ಆರೋಪ: ಗುರುಪ್ರಸಾದ್ ಪೊಲೀಸರ ವಶಕ್ಕೆ

|
Google Oneindia Kannada News

ಮಂಗಳೂರು, ಅಕ್ಟೋಬರ್.31: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೋಲೀಸರು ಹಿಂದೂ ಜಾಗರಣ ವೇದಿಕೆ ಮುಖಂಡ ಗುರುಪ್ರಸಾದ್ ಪಂಜ ಅವರನ್ನು ವಶಕ್ಕೆ ಪಡೆದಿದ್ದಾರೆ.

ಗುರುಪ್ರಸಾದ್ ವಿರುದ್ಧ ಚೈತ್ರಾ ಕುಂದಾಪುರ ಮಾನಭಂಗ ಯತ್ನ ಪ್ರಕರಣ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಗುರುಪ್ರಸಾದ್ ಅವರನ್ನು ಪೊಲೀಸರು ಇಂದು ಬುಧವಾರ ವಶಕ್ಕೆ ಪಡೆದಿದ್ದಾರೆ.

ಫೇಸ್ ಬುಕ್ ನಲ್ಲಿ ಚೈತ್ರಾ ಕುಂದಾಪುರ ಹಾಗೂ ಗುರುಪ್ರಸಾದ್ ನಡುವೆ ಆರಂಭವಾಗಿದ್ದ ಫೇಸ್ ಬುಕ್ ವಾರ್ ಬೀದಿ ಜಗಳಕ್ಕೆ ಎಡೆಮಾಡಿತ್ತು. ಚೈತ್ರಾ ಕುಂದಾಪುರ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗುರುಪ್ರಸಾದ್ ಪಂಜ ಹಾಗೂ ಅತನ ಸ್ನೇಹಿತರು ಮತ್ತು ಚೈತ್ರಾ ಕುಂದಾಪುರ ತಂಡದವರ ನಡುವೆ ಮಾರಾಮಾರಿ ನಡೆದಿತ್ತು.

ಇದೆಲ್ಲಾ ಕೊಲೆ ಮಾಡಲು ನಡೆಸಿದ ವ್ಯವಸ್ಥಿತ ಷಡ್ಯಂತ್ರ:ಚೈತ್ರಾ ಕುಂದಾಪುರಇದೆಲ್ಲಾ ಕೊಲೆ ಮಾಡಲು ನಡೆಸಿದ ವ್ಯವಸ್ಥಿತ ಷಡ್ಯಂತ್ರ:ಚೈತ್ರಾ ಕುಂದಾಪುರ

ಈ ಸಂದರ್ಭದಲ್ಲಿ ಗುರುಪ್ರಸಾದ್ ಪಂಜ ಅವರ ತಲೆಗೆ ಗಂಭೀರ ಗಾಯವಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಚೈತ್ರಾ ಕುಂದಾಪುರ ನೀಡಿದ ಅತ್ಯಾಚಾರ ಯತ್ನ ದೂರಿನ ಮೇಲೆ ಸುಬ್ರಹ್ಮಣ್ಯ ಪೋಲೀಸರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುರುಪ್ರಸಾದ್ ರನ್ನು ಈಗ ವಶಕ್ಕೆ ಪಡೆದಿದ್ದಾರೆ‌.

 ಚೈತ್ರಾ ಮತ್ತು ಸಹಚರರ ಬಂಧನ

ಚೈತ್ರಾ ಮತ್ತು ಸಹಚರರ ಬಂಧನ

ಗುರುಪ್ರಸಾದ್ ಪಂಜ ಅವರ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಅಕ್ಟೋಬರ್ 25 ರಂದು ಸುಬ್ರಹ್ಮಣ್ಯ ಪೋಲೀಸರು ಚೈತ್ರಾ ಕುಂದಾಪುರ ಹಾಗೂ ಆಕೆಯ ಆರು ಮಂದಿ ಸಹಚರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

 ಚೈತ್ರಾ ಕುಂದಾಪುರ ಬೀದಿ ಹೆಣವಾಗಬೇಕು: ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ವಿವಾದಾತ್ಮಕ ಪೋಸ್ಟ್ ಪ್ರಕಟ ಚೈತ್ರಾ ಕುಂದಾಪುರ ಬೀದಿ ಹೆಣವಾಗಬೇಕು: ಮಂಗಳೂರು ಮುಸ್ಲಿಂ ಪೇಜ್ ನಲ್ಲಿ ವಿವಾದಾತ್ಮಕ ಪೋಸ್ಟ್ ಪ್ರಕಟ

 ನ. 3 ರವರೆಗೆ ನ್ಯಾಯಾಂಗ ಬಂಧನ

ನ. 3 ರವರೆಗೆ ನ್ಯಾಯಾಂಗ ಬಂಧನ

ಗುರುಪ್ರಸಾದ್ ಪಂಜ ಅವರ ಮೇಲೆ ನಡೆದ ಹಲ್ಲೆ ಪ್ರಕರಣ ವಿಚಾರಣೆ ನಡೆಸುವ ವೇಳೆ ಸುಳ್ಯ ಜೆ ಎಂ ಎಫ್ ಸಿ ನ್ಯಾಯಾಲಯ ಆರೋಪಿಗಳಿಗೆ ನವೆಂಬರ್ 3 ವರೆಗೆ ನ್ಯಾಯಾಂಗ ಬಂಧನದ ತೀರ್ಪು ನೀಡಿದೆ.

 ಬೀದಿ ಕಾಳಗವಾಗಿ ಮಾರ್ಪಟ್ಟ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವಿವಾದ ಬೀದಿ ಕಾಳಗವಾಗಿ ಮಾರ್ಪಟ್ಟ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವಿವಾದ

 ಪ್ರಕರಣ ರಾಜಿಯಲ್ಲಿ ಮುಗಿಸಲು ಯತ್ನ

ಪ್ರಕರಣ ರಾಜಿಯಲ್ಲಿ ಮುಗಿಸಲು ಯತ್ನ

ಈ ನಡುವೆ ಎರಡೂ ತಂಡಗಳು ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಸಂಘ ಪರಿವಾರದ ಮುಖಂಡರು ಮಂಗಳವಾರ ಎರಡೂ ತಂಡಗಳ ನಡುವೆ ಮಾತುಕತೆಯನ್ನೂ ನಡೆಸಿದ್ದರು. ಮಾತುಕತೆಗೆ ಆಗಮಿಸಿದ್ದ ಎರಡು ತಂಡ ವಿವಾದವನ್ನು ರಾಜಿ ಸಂಧಾನದಲ್ಲಿ ಮುಗಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದವು.

 ಗುರುಪ್ರಸಾದ್ ಪಂಜ ವಶಕ್ಕೆ

ಗುರುಪ್ರಸಾದ್ ಪಂಜ ವಶಕ್ಕೆ

ಆದರೆ ಈ ನಡುವೆ ಗುರುಪ್ರಸಾದ್ ಪಂಜ ತಂಡ ಒಂದು ದಿನದ ಅವಕಾಶವನ್ನು ನೀಡುವಂತೆ ಮನವಿಯನ್ನೂ ಮಾಡಿದ್ದರು. ಆದರೆ ಇಂದು ಪೋಲೀಸರು ಗುರುಪ್ರಸಾದ್ ಪಂಜ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

English summary
In Connection to group clash in Subrhamanya Hindu Jagarana Veedike leader Guru Prasadh Panja arrested by Subrhamanya police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X