ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಹಿಜಾಮಾ ಚಿಕಿತ್ಸೆ ಆರಂಭ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮೇ 15: ವೆನ್ಲಾಕ್ ಆಸ್ಪತ್ರೆ ಅವ್ಯವಸ್ಥೆ ಗೋಳು ಎಂದು ಕೂಗಿಕೊಳ್ಳುವ ಮಂದಿಗೆ ಇಲ್ಲಿ ಅತ್ಯುತ್ತಮ ಚಿಕಿತ್ಸಾ ಸೌಲಭ್ಯಗಳಿವೆ ಅನ್ನುವ ವಿಚಾರ ಗೊತ್ತಿಲ್ಲ. ಬ್ರಿಟಿಷರು ನಿರ್ಮಿಸಿದ್ದ ಈ ಸೇನಾ ಆಸ್ಪತ್ರೆ ಅಂದಿನ ಕಾಲದಲ್ಲಿ ಸೈನಿಕರಿಗೆ ಚಿಕಿತ್ಸೆ ನೀಡುತ್ತಿತ್ತು. ಇದೀಗ ಸಹಸ್ರಾರು ಜನರಿಗೆ ಉಚಿತ ಚಿಕಿತ್ಸೆ ನೀಡುವ ರಾಜ್ಯದ ಅತೀ ಉತ್ತಮ ಸರ್ಕಾರಿ ಆಸ್ಪತ್ರೆಯಾಗಿ ವೆನ್ಲಾಕ್ ಹೆಸರು ಮಾಡಿದೆ.

ಪ್ರತಿನಿತ್ಯ ಸಾವಿರಕ್ಕೂ ಅಧಿಕ ರೋಗಿಗಳು ಹೊರ ಮತ್ತು ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುವ ಇಲ್ಲಿ ಹೊಸ ರೀತಿಯ ವಿದೇಶಿ ಚಿಕಿತ್ಸೆಯನ್ನು ಪರಿಚಯಿಸಲಾಗಿದೆ. ಅದು 'ಹಿಜಾಮಾ' ಚಿಕಿತ್ಸೆ. ಮೂಲತಃ ಮಧ್ಯ ಪ್ರಾಚ್ಯ ದೇಶಗಳಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಹಿಜಾಮಾ ಚಿಕಿತ್ಸೆಯನ್ನು ಮಂಗಳೂರಿನಲ್ಲೂ ಮಾಡಲಾಗುತ್ತಿದೆ. ಬಡವರಿಗೆ ಕೈಗೆಟುಕುವ ದರದಲ್ಲಿ ನೀಡಲಾಗುತ್ತಿರುವ ಚಿಕಿತ್ಸೆಗೆ ಜನ ಕೂಡಾ ಪ್ರಭಾವಿತರಾಗಿದ್ದು, ತಿಂಗಳಲ್ಲಿ ಮುನ್ನೂರಕ್ಕಿಂತ ಹೆಚ್ಚು ಜನ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.[ಹೆಚ್ಚುತ್ತಿರುವ ರೋಗಿಗಳು, ವೆನ್ಲಾಕ್ ಐಸಿಯುನಲ್ಲಿ ಬೆಡ್ ಕೊರತೆ]

Hijama therapy in Venlakh hospital Mangalore

ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ರಕ್ತ ಸಂಬಂಧಿ, ಚರ್ಮ ಸಂಬಂಧಿ ಕಾಯಿಲೆಗಳಿಗೆ ಹಿಜಾಮಾ ಚಿಕಿತ್ಸೆ ರಾಮಬಾಣವಾಗಿದ್ದು, ಅರಬ್ ದೇಶಗಳಲ್ಲಿ ಹೆಚ್ಚು ಪ್ರಚಲಿತದಲ್ಲಿ ಇರುವುದರಿಂದ ಚಿಕಿತ್ಸೆಯ ಹೆಸರೂ ಅರಬ್ ಭಾಷೆಯ ಹಿಜಾಮಾ ಎಂಬ ಹೆಸರಿನಲ್ಲಿದೆ. ಕೆಟ್ಟ ರಕ್ತವನ್ನು ದೇಹದಿಂದ ಹೀರಿ ತೆಗೆಯುವ ಈ ಚಿಕಿತ್ಸಾ ವಿಧಾನದಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಮಾನಸಿಕ ನೆಮ್ಮದಿಗೆ, ಸಂಧಿ ಸೆಳೆತ, ನರಗಳ ನೋವಿಗೆ ಹಿಜಾಮಾ ಚಿಕಿತ್ಸೆ ವೇಗದ ಪರಿಹಾರ ನೀಡುತ್ತದೆ ಎಂದು ಹೇಳುತ್ತಾರೆ ಆಯುಷ್ ತಜ್ಞರಾಗಿರುವ ಸೈಯದ್ ಮಹಮ್ಮದ್.

Hijama therapy in Venlakh hospital Mangalore

ಕೇವಲ ರೋಗಿಗಳಿಗಷ್ಟೇ ಅಲ್ಲದೆ ಉತ್ತಮ ಆರೋಗ್ಯವುಳ್ಳ ವ್ಯಕ್ತಿಗಳೂ ಹಿಜಾಮಾ ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ಮಂಗಳೂರು ಸೇರಿದಂತೆ ರಾಜ್ಯದ ಕೆಲವೇ ಕೆಲವು ಕಡೆ ಹಿಜಾಮಾ ಚಿಕಿತ್ಸೆ ಲಭ್ಯವಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೀತಿಯ ಚಿಕಿತ್ಸಾ ಸೌಲಭ್ಯ ದೊರೆಯುತ್ತಿರುವುದಕ್ಕೆ ಮಂಗಳೂರಿನ ಜನರಷ್ಟೇ ಅಲ್ಲದೆ ಹೊರ ಜಿಲ್ಲೆಯ ರೋಗಿಗಳೂ ಹರ್ಷ ವ್ಯಕ್ತಪಡಿಸಿದ್ದಾರೆ. ಬೇಡದಿದ್ದರೂ ಸ್ಕ್ಯಾನಿಂಗ್, ಎಕ್ಸರೇ ಎಂದು ಹೇಳಿ ಲಕ್ಷ ಲಕ್ಷ ದುಡ್ಡು ಬಾಚುವ ಖಾಸಗಿ ಆಸ್ಪತ್ರೆಗಳ ಮಧ್ಯೆ, ಯಾವುದೇ ಖರ್ಚಿಲ್ಲದೇ ಅತ್ಯುತ್ತಮ ಚಿಕಿತ್ಸೆ ಆರಂಭಿಸಿರುವ ಸರಕಾರಿ ಆಸ್ಪತ್ರೆಯ ನಡೆ ಅಭಿನಂದನೀಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Most effective hijama therapy has started in Venlakh hospital Mangalore. More than 300 people getting hijama therapy in the hospital in a month.
Please Wait while comments are loading...