ಮಂಗಳೂರು ಹೆದ್ದಾರಿ, ಮದ್ಯದಂಗಡಿ ಎತ್ತಂಗಡಿ ಸಾಧ್ಯತೆ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಡಿಸೆಂಬರ್ 18: ಪಾನಮತ್ತ ಚಾಲಕರಿಂದ ಆಗುತ್ತಿರಿವ ಅಪಘಾತಗಳನ್ನು ತಡೆಯುವ ನಿಟ್ಟನಲ್ಲಿ ರಾಜ್ಯ /ರಾಷ್ಟೀಯ ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯ ಒಳಗಡೆ ಇರುವ ಮದ್ಯದಂಗಡಿಗಳನ್ನು ಮುಚ್ಚುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಕರಾವಳಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಬಹುತೇಕ ಬಾರ್- ವೈನ್ ಶಾಪ್ ಗಳಿಗೆ ಬಿಗ ಬೀಳುವ ಆತಂಕ ಎದುರಾಗಿದೆ.

ದಕ್ಷಿಣ ಕನ್ನಡ, ಉಡುಪಿ ಹಾಗು ಕಾಸರಗೋಡು ಜಿಲ್ಲೆಗಳಲ್ಲಿನ ಶೇ. 5೦ಕ್ಕೂ ಅಧಿಕ ಬಾರ್, ವೈನ್ ಶಾಪ್ ಮುತ್ತಿತರ ಮದ್ಯದಂಗಡಿಗಳು ಹೆದ್ದಾರಿ ಬದಿಯೇಲೇ ಇವೆ. ಅದರಲ್ಲೂ ನ್ಯಾಯಾಲಯ ನಿರ್ಬಂಧಿಸಿರುವ ಅರ್ಧ ಕಿಲೋಮೀಟರ್ ವ್ಯಾಪ್ತಿಯೊಳಗೇ ಇವೆ. ಅವುಗಳನ್ನು ತೆರವುಗೊಳಿಸುವುದೆಂದರೆ ಹೆಚ್ಚಿನ ಮದ್ಯದಂಗಡಿಗಳನ್ನು ಮುಚ್ಚಿದಂತೆಯೇ ಸರಿ.[ಸುಪ್ರೀಂ ಮದ್ಯ ಆದೇಶ, ಸರ್ಕಾರಕ್ಕೆ ತಲೆನೋವು]

bar

ಇತ್ತೀಚಿನ ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 154ವೈನ್ ಶಾಪ್ ಗಳಿವೆ. 216 ಬಾರ್ ಗಳಿವೆ . ಲಾಡ್ಜ್ ರೂಮ್ ಗಳಿಗೆ ಮದ್ಯ ಪೂರೈಕೆ ಮಾಡುವ 53 ಪರವಾನಗಿ ಇದೆ. ಸಿಪಿಲ್ 6, ಪರವಾನಿಗಿಯ ಪಂಚತಾರಾ ಹೋಟೆಲ್ 1 ಇದೆ. ಇವೆಲ್ಲವೂ ಸೇರಿದರೆ ಜಿಲ್ಲೆಯ ಒಟ್ಟು ಮದ್ಯದಂಗಡಿಗಳ ಸಂಖ್ಯೆ 424.

ಜಿಲ್ಲಾಕೇಂದ್ರ ಹೊತರುಪಡಿಸಿಯೂ ಬಹುತೇಕ ಎಲ್ಲಾ ತಾಲ್ಲೂಕು ಕೇಂದ್ರಗಳು ಹೆದ್ದಾರಿ ಹೊಂದಿವೆ. ಜಿಲ್ಲಾಕೇಂದ್ರ ಹೊರತುಪಡಿಸಿ ತಾಲೂಕು ಕೇಂದ್ರಗಳಲ್ಲೇ ಅತಿ ಹೆಚ್ಚು ಬಾರ್- ವೈನ್ ಶಾಪಗಳಿವೆ. ಪ್ರಮುಖ ಪಟ್ಟಣಗಳು ರಾಜ್ಯ ಹೆದ್ದಾರಿಗೆ ಅಂಟಿಕೊಂಡಿರುವುದರಿಂದ ಅಲ್ಲಿನ ಮದ್ಯದಂಗಡಿಗಳೂ ಎತ್ತಂಗಡಿಯಾಗುವುದು ಅನಿವಾರ್ಯ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
More than 424 wine shops in Mangaluru will have massive breakdown due to Ban of alcohol sale on highways
Please Wait while comments are loading...