'ರಾಷ್ಟ್ರಗೀತೆ ಹಾಡುವವನು ದೇಶಪ್ರೇಮಿ, ಹಾಡದವನು ದೇಶದ್ರೋಹಿ ಎನ್ನುವುದು ಸರಿಯಲ್ಲ'

Posted By:
Subscribe to Oneindia Kannada

ಮೂಡಬಿದಿರೆ, ಡಿಸೆಂಬರ್ 01 : ಮೂಡಬಿದಿರೆಯಲ್ಲಿ ಇಂದು (ಡಿಸೆಂಬರ್ 01) ಉದ್ಘಾಟನೆಗೊಂಡ ಆಳ್ವಾಸ್ ನುಡಿಸಿರಿ-2017 ಸಾಹಿತ್ಯ ಉತ್ಸವದಲ್ಲಿ ಸಮ್ಮೇಳದ ಸರ್ವಾಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ಅವರು ಅಧ್ಯಕ್ಷರ ಭಾಷಣ ಮಾಡಿದ್ದಾರೆ.

ಬಹುತ್ವ, ದೇಶಪ್ರೇಮ, ದೇಶದ್ರೋಹ, ರಾಷ್ಟ್ರಗೀತೆ ಹೀಗೆ ಪ್ರಚಲಿತದಲ್ಲಿರುವ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಅವರು, ರಾಜ್ಯದ ರಾಜಕಾರಣದ ಸ್ಥಿತಿಯ ಬಗ್ಗೆಯೂ ವೇದಿಕೆಯಲ್ಲಿ ಚರ್ಚೆ ಮಾಡಿದ್ದಾರೆ.

14 ನೇ ಆಳ್ವಾಸ್ ನುಡಿಸಿರಿ ಸಮ್ಮೇಳನಕ್ಕೆ ಸಿದ್ದಗೊಂಡ ಮೂಡಬಿದ್ರೆ

ಕೋಮುವಾದದ ಬಗ್ಗೆಯೂ ಮಾತನಾಡಿದ ಅವರು, ಕೋಮುವಾದ ಹೋಗಲಾಡಿಸುವುದು ಸದ್ಯದ ಅವಶ್ಯಕತೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮೊಬೈಲ್ ಗಳು ಹೇಗೆ ಸಮಾಜವನ್ನು ಒಡೆಯಲು ಬಳಸಲಾಗುತ್ತಿವೆ ಎಂಬುದರ ಮೇಲೆಯೂ ಸಮ್ಮೇಳನದ ಅಧ್ಯಕ್ಷರಾದ ಅವರು ಬೆಳಕು ಚೆಲ್ಲಿದ್ದಾರೆ.

Highlights of Nagathihalli Chandrashekhar's presidential speech at 'Alvas Nudisiri 2017'

15 ಮಂದಿ ಸಾಧಕರಿಗೆ 2017ರ 'ಆಳ್ವಾಸ್ ನುಡಿಸಿರಿ' ಪುರಸ್ಕಾರ

ಭಾಷಣದಲ್ಲಿ ವಚನ ಸಾಹಿತ್ಯವನ್ನು ನೆನೆದ ಅವರು ಅದೊಂದು ಉತ್ಕೃಷ್ಟ ಸಾಹಿತ್ಯ ಪ್ರಕಾರವೆಂದು ಹೊಗಳಿದ್ದಾರೆ. ಹತ್ತು ಪುಟದ ಸುದೀರ್ಘ ಭಾಷಣ ಬರೆದುಕೊಂಡಿದ್ದ ಅವರ ಮಾತುಗಳ ಮುಖ್ಯಾಂಶ ಇಲ್ಲಿದೆ ನೋಡಿ....

* ಭಾರತದ ಬಹುತ್ವಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ.
* ಬಹುತ್ವ ಎಂಬುದು ಬಾಹ್ಯರೂಪದ ವಿವಿಧ ಬಣ್ಣಗಳಲ್ಲ. ಅದು ಸೃಷ್ಟಿಯ ಸೋಜಿಗ ಕೂಡಾ. ಅಷ್ಟೇ ಅಲ್ಲ ಸೃಷ್ಟಿ ಕ್ರಿಯೆಯ ಮೂಲಧಾತು.
* ಕರ್ನಾಟಕ ಎಂದಿಗೂ ಬಹುತ್ವವನ್ನು ಆರಾಧಿಸುತ್ತಾ, ಗೌರವಿಸುತ್ತಾ, ಅನುಸರಿಸುತ್ತಾ ಬಂದಿದೆ.
* ಬಹುತ್ವ ವಿರಾಟ್ ಸ್ವರೂಪದಲ್ಲಿ ಕಂಡುಬರುವುದು ವಚನ ಚಳುವಳಿ ಕಾಲದಲ್ಲಿ.
* ಮೋಹನ್ ಆಳ್ವಾ ಅವರು 'ನುಡಿಸಿರಿ' ಹುಟ್ಟು ಹಾಕದೇ ಇದ್ದಿದ್ದರೆ ಯಾರೂ ಕೇಳುತ್ತಿರಲಿಲ್ಲ, ಆದರೆ ಈಗ ಆಚರಿಸುತ್ತಿದ್ದಾರೆ ಈಗ ಹಲವರು 'ಏಕೆ ಆಚರಿಸುತ್ತೀರಿ' ಎಂದು ಪ್ರಶ್ನೆ ಮಾಡುತ್ತಿದ್ದಾರೆ.
* ಕ್ರಾಂತಿಕಾರಕ ವಿಷಯವನ್ನು ಭಾಷಣಕ್ಕೆ, ಬರಹಕ್ಕೆ ಸೀಮಿತಗೊಳಿಸಿಕೊಳ್ಳುವುದು ಪ್ರಸ್ತುತ ಕಂಡು ಬರುತ್ತಿರುವ ಜಾಣತನ.
* ಕರ್ನಾಟಕದ ನಾಡಗೀತೆಯಲ್ಲಿ ಬಹುತ್ವದ ಧನಿಗಳು ಹೇರಳವಾಗಿದೆ. ಇದು ಕರ್ನಾಟಕದ ಆತ್ಮಗೀತೆಯೂ ಹೌದು.
* ರಾಷ್ಟ್ರಗೀತೆಯಲ್ಲಿ ಬರುವ 'ದ್ರಾವಿಡ' ಪದ ಇಡೀಯ ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತದೆ, ಕುವೆಂಪು ಅವರು ನಾಡಗೀತೆಯಲ್ಲಿ ಇದಕ್ಕೆ ವಿಸ್ತಾರ ರೂಪ ನೀಡಿದ್ದಾರೆ.
* ರಾಷ್ಟ್ರಗೀತೆ ಹಾಡುವವನು ದೇಶಪ್ರೇಮಿ, ಹಾಡದವನು ದೇಶದ್ರೋಹಿ ಎನ್ನಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ.
* ರಾಷ್ಟ್ರಗೀತೆ ಹಾಡಿ ದೇಶಪ್ರೇಮ ಸಾಬೀತು ಮಾಡಬೇಕು ಎನ್ನುವುದು ಮೂರ್ಖತನ
* ವ್ಯಕ್ತಿಯೊಬ್ಬ ಹೇಗೆ ಸಂವಿಧಾನವನ್ನು ಗೌರವಿಸುತ್ತಾನೆ, ಹಕ್ಕು ಬಾಧ್ಯತೆಗಳನ್ನು ಅನುಸರಿಸುತ್ತಾರೆ, ಕಾನೂನಿಗೆ ಬದ್ಧನಾಗಿರುತ್ತಾನೆ, ತೆರಿಗೆ ಪಾವತಿಸುತ್ತಾನೆ ಇದೆಲ್ಲಾ ವಿಷಯಗಳ ಆಧಾರದ ಮೇಲೆ ದೇಶಪ್ರೇಮ ಅಳೆಯುವುದು ಸರಿಯಾದ ಮಾನದಂಡ.
* ಇಂದಿರಾ ಕ್ಯಾಂಟಿನ್ ನಲ್ಲಿ ತಟ್ಟೆಯಲ್ಲಿ ಜಿರಳೆ ಬಿತ್ತು, ಪ್ಲಾಸ್ಟಿಕ್ ಅಕ್ಕಿ ಸುಳ್ಳು ಸುದ್ದಿ ಹರಡಿತು, ಅಕ್ಕಿಯಲ್ಲಿ ಭ್ರಷ್ಟಾಚಾರದ ಸುದ್ದಿ ಹರಡಿತು, ಭ್ರಷ್ಟ ಅಧಿಕಾರಿಯಿಂದ ಮನೆ ಸಿಗಲಿಲ್ಲ ಎಂಬಿತ್ಯಾದಿ ವಿಷಯಗಳು ಅಭಿವೃದ್ಧಿಗೆ ಬೇಕೆಂದೆ ಹಾಕುತ್ತಿರುವ ಅಡ್ಡಗಾಲು ಎನಿಸುತ್ತವೆ.
* ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸಿದರೆ ಅದನ್ನು ನಿಷ್ಪಲವಾಗುವಂತೆ, ನಿರರ್ಥಕವಾಗುವಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಗುತ್ತಿದೆ. 'ನಾನೂ ಮಾಡೆನು, ಮಾಡಲು ಬಿಡೆನು' ಎಂಬ ನಿಲುವು ಬಹುತೇಕ ರಾಜಕೀಯ ಪಕ್ಷಗಳದ್ದು.
* ಪಕ್ಷ ಯಾವುದೇ ಇರಲಿ ಯೋಜನೆಗಳನ್ನು ಮಾನವೀಯ ನೆಲೆಯಿಂದ ನೋಡುವುದು ಮುಖ್ಯ.
* ನಾಗತಿಹಳ್ಳಿ ಸಂಸ್ಕೃತಿ ಹಬ್ಬಕ್ಕೆ 18 ವರ್ಷವಾಗಿದೆ, ಇದರಿಂದ ಸಾಕಷ್ಟು ಸುತ್ತಮುತ್ತಲಿನ ಗ್ರಾಮದ ಯುವಕರು ಪ್ರೇರೇಪಿತಗೊಂಡಿದ್ದಾರೆ.
* ಕೋಮುವಾದ ಯಾವುದೇ ಧರ್ಮದಲ್ಲಿದ್ದರೂ ಅದನ್ನು ಖಂಡಿಸಬೇಕು, ಕೆಲವು ಧರ್ಮಗಳನ್ನಷ್ಟೇ ತುಷ್ಟೀಕರಿಸುವುದು ಸರಿಯಲ್ಲ
* ಎಲ್ಲಾ ಧರ್ಮದಲ್ಲೂ ಕಡಿಮೆ ಕೆಟ್ಟವರು, ಹೆಚ್ಚು ಒಳ್ಳೆಯವರಿರುತ್ತಾರೆ, ಆದರೆ ಕೆಟ್ಟವರು ಬೇಗ ಒಗ್ಗೂಡುತ್ತಾರೆ, ಅವರ ಸಂಖ್ಯೆ ಹೆಚ್ಚಿರುವಂತೆ ತೋರಿಸಿಕೊಳ್ಳುತ್ತಾರೆ
* ಇಂದು ನಮ್ಮ ಕೈಲಿರುವ ಮೊಬೈಲ್ ಸಮಾಜದ ಒಡಕಿಗೆ ಕಾರಣವಾಗುತ್ತಿರುವ ಬಾಂಬ್ ನಂತಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
'who sings National anthem is a Nationalist, and who doesn't he is anti-national' this type of framing is wrong' said Nagathihalli Chandrashekhar in his presidential speech at Alvas Nudisiri-2017 happening in Moodigere.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ