ಸಂತೋಷ್‌ಗೆ ಜಾಮೀನು, ಮೇಲ್ಮನವಿಗೆ ಪೊಲೀಸರ ನಿರ್ಧಾರ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 19 : ಮಂಗಳೂರು ವಿವಿ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟ ಆರೋಪ ಎದುರಿಸುತ್ತಿರುವ ವಿದ್ಯಾರ್ಥಿ ಸಂತೋಷ್‌ ವಿರುದ್ಧ ಪೊಲೀಸರು ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಜೆಎಂಎಫ್‌ಸಿ ಕೋರ್ಟ್ ಆರೋಪಿಗೆ ಈಗಾಗಲೇ ಜಾಮೀನು ನೀಡಿದೆ.

ಮಂಗಳೂರಿನಲ್ಲಿ ಭಾನುವಾರ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು, 'ಆರೋಪಿ ಸಂತೋಷ್‌ನನ್ನು ಹೆಚ್ಚಿನ ವಿಚಾರಣೆಗೆ ಪೊಲೀಸರ ವಶಕ್ಕೆ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ನ್ಯಾಯಾಲಯ ಪೊಲೀಸರ ಬೇಡಿಕೆ ತಿರಸ್ಕರಿಸಿ, ಆತನಿಗೆ ಜಾಮೀನು ಮಂಜೂರು ಮಾಡಿದೆ' ಎಂದು ಹೇಳಿದರು.[ವಿವಿಯ ಶೌಚಾಲಯದಲ್ಲಿ ಕ್ಯಾಮೆರಾ: ಆರೋಪಿ ಸಂತೋಷ್ ಗೆ ಜಾಮೀನು]

dakshina kannada

'ಆರೋಪಿ ಸಂತೋಷ್‌ನ ಹೆಚ್ಚಿನ ವಿಚಾರಣೆ ಅಗತ್ಯವಿದೆ. ಆದ್ದರಿಂದ, ಆತನಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು' ಎಂದು ಎಂ.ಚಂದ್ರಶೇಖರ್ ಹೇಳಿದರು.[ಶೌಚಾಲಯದಲ್ಲಿ ಮೊಬೈಲ್ ಇಟ್ಟಿದ್ದ ವಿದ್ಯಾರ್ಥಿ ಬಂಧನ]

'ಪ್ರಭಾವಿಗಳ ಒತ್ತಡಕ್ಕೆ ಮಣಿದು ಆರೋಪಿ ವಿರುದ್ಧ ಸಣ್ಣ ಪ್ರಕರಣ ದಾಖಲಿಸಲಾಗಿದೆ ಎಂದು ಟೀಕೆಗಳು ವ್ಯಕ್ತವಾಗುತ್ತಿವೆ ಎಂಬ ಟೀಕೆಗೆ ಉತ್ತರ ನೀಡಿದ ಆಯುಕ್ತರು, 'ತನಿಖಾ ತಂಡ ಕಾನೂನಿನ ಪ್ರಕಾರ ನಡೆದುಕೊಂಡಿದೆ. ಈಗ ಆರೋಪ ಮಾಡುತ್ತಿರುವವರ ಜೊತೆ ಚರ್ಚೆ ನಡೆಸಲಾಗುವುದು. ಆರೋಪವನ್ನು ಪುಷ್ಟೀಕರಿಸುವಂತಹ ಸಾಕ್ಷ್ಯಗಳನ್ನು ಒದಗಿಸಿದರೆ ಒತ್ತಡ ಹೇರಿದವರು ಮತ್ತು ಮಣಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mangaluru police commissioner said that, department will be moving the court with an appeal seeking cancellation of bail granted to the accused relating to fixing of hidden camera in ladies toilet of Mangalore University.
Please Wait while comments are loading...