ಡಿ. 11ರಂದು ಮಂಗಳೂರಿನಲ್ಲಿ ಹರ್ಕ್ಯುಲಸ್ ಸೈಕಲ್ ಜಾಥಾ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್ 10: ಸ್ವಸ್ತಿ ಆರ್ ಎಕ್ಸ್ ಲೈಫ್ ಟ್ರಸ್ಟ್ ನಿಂದ 10ನೇ ವರ್ಷದ ಆರ್ ಎಕ್ಸ್ ಲೈಫ್ ಹರ್ಕ್ಯುಲಸ್ ಸೈಕಲ್ ಜಾಥಾ(rally) ಡಿ. 11ರಂದು ಮಂಗಳೂರು ನಗರದಲ್ಲಿ ನಡೆಯಲಿದೆ ಎಂದು ಸಂಯೋಜಕ ಗಿರಿಧರ್ ಕಾಮತ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ರಸ್ತೆ ಸುರಕ್ಷತೆ ಉದ್ದೇಶವಾಗಿಟ್ಟು, ಸುಮಾರು 22ಕಿ.ಮೀ ಜಾಥಾ ನಡೆಯಲಿದೆ. ರಾಲಿ ಬೆಳಗ್ಗೆ 6.30ಕ್ಕೆ ಲೇಡಿಹಿಲ್ ನಿಂದ ಹೊರಡಲಿದ್ದು, ಬಳಿಕ ಲೇಡಿಹಿಲ್- ಕೊಟ್ಟಾರ- ಕೂಳೂರು -ಪೇಜಾವರ ಕೂಳೂರು - ಉರ್ವಸ್ಟೋರ್- ಅಶೋಕನಗರ-ಹೊಯಿಗೆಬೈಲ್- ಬತ್ತೇರಿ ಮಾರ್ಗವಾಗಿ ಅಮೃತ ವಿದ್ಯಾಲಯಂ ಮೈದಾನದಲ್ಲಿ ಮುಕ್ತಾಯವಾಗಲಿದೆ ಎಂದರು.[ಪರಿಸರ ಸಂರಕ್ಷಣೆಗೆ ಬೆಂಗಳೂರಲ್ಲಿ ಸೈಕಲ್ ಜಾಥಾ]

Hercules Cycle Rally on Dec 11

ಹತ್ತು ವರ್ಷ ಮೇಲ್ಪಟ್ಟು, ಸೈಕಲ್ ಸವಾರಿ ಗೊತ್ತಿರುವವರು ಜಾಥಾದಲ್ಲಿ ಭಾಗವಹಿಸಬಹುದಾಗಿದೆ. ಭಾಗವಹಿಸಲಿಚ್ಚಿಸುವವರು ಮಣ್ಣಗುಡ್ಡ ಗುರ್ಜಿ ಸೆಂಟರ್ ಅಥವಾ ಪಾಂಡೇಶ್ವರ ಆರ್ ಎಕ್ಸ್ ಲೈಫ್ ನಲ್ಲಿ ಡಿ. 10ರ ರಾತ್ರಿ 9.30ರ ಒಳಗೆ ನೋಂದಾಯಿಸಿಕೊಳ್ಳಬಹುದಾಗಿದೆ. [ನೀರಿನಲ್ಲಿ ಚಲಿಸುವ ಸೈಕಲ್ ಆವಿಷ್ಕರಿಸಿದ 6ನೇ ಕ್ಲಾಸಿನ ಪೋರ!]

ಫೋಟೋ ಸ್ಪರ್ಧೆ: ಸಮೂಹ ಸವಾರಿ ಕಲ್ಪನೆಯೊಂದಿಗೆ ರಾಲಿಯ ಫೋಟೋ ಸ್ಪರ್ಧೆ ನಡೆಯಲಿದ್ದು , ಜಾಥಾ ಸಮಯದಲ್ಲಿ ಸೆರೆ ಹಿಡಿದ ಫೋಟೋವನ್ನು ಡಿ. 20ರೊಳಗಾಗಿ svastirxlife@gmail.com ಗೆ ಕಳುಹಿಸಬಹುದು. ಆಯ್ದ ಫೋಟೋಗಳಿಗೆ ಬಹುಮಾನ ನೀಡಲಾಗುತ್ತದೆ ಮಾತ್ರವಲ್ಲದೆ ಮೊದಲ ಮೂರು ವಿಜೇತರಿಗೆ ನಗದು ಬಹುಮಾನವಾಗಿ 3000, 2000, 1000 ನೀಡಲಾಗುವುದು ಎಂದು ಅವರು ತಿಳಿಸಿದರು.[ಬೆಂಗಳೂರು : ಅವಳ ಬೆಂಬಲಕ್ಕಾಗಿ ಸೈಕಲ್ ಏರಿ!]

ನಾಳೆ ರಾಜಾ ದಿನವಾಗಿರುವುದರಿಂದ ಆಸಕ್ತರು ಈ ಸ್ಪರ್ಧೆ ವೀಕ್ಷಿಸಬಹುದು. ಭಾಗವಹಿಸಲಿಚ್ಚಿಸುವವರು ಈ ನಂಬರಿಗೆ 0824-2443192 ಅಥವಾ 9986754875 ಕರೆ ಮಾಡಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Svasti RX Life Trust is organizing its 10th RX Life Hercules Annual Cycle Rally on Sunday, December 11. The theme this year will focus on educating people about road safety and maintaining decorum on the road.
Please Wait while comments are loading...