ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ಮಳೆಯ ಅಬ್ಬರ: ಇಬ್ಬರು ಬಲಿ, ಭಾರಿ ಆಸ್ತಿ ಹಾನಿ

|
Google Oneindia Kannada News

Recommended Video

ಕರಾವಳಿಯಲ್ಲಿ ಮಳೆಯ ರುದ್ರ ನರ್ತನಕ್ಕೆ ಇಬ್ಬರು ಬಲಿ | Oneindia Kannada

ಮಂಗಳೂರು, ಮೇ 29: ಕರಾವಳಿ ಜಿಲ್ಲೆಯಲ್ಲಿ ಬೀಳುತ್ತಲೇ ಇರುವ ಮಹಾ ಮಳೆಗೆ ಈವರೆಗೆ ಇಬ್ಬರು ಬಲಿಯಾಗಿದ್ದಾರೆ. ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ.

ಮನೆಯ ಗೋಡೆ ಕುಸಿದು ಮೋಹಿನಿ ಎಂಬ ವೃದ್ಧೆ ಅವಶೇಷಗಳ ನಡುವೆ ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ನಡೆಯಿತಾದರೂ ಫಲಕಾರಿಯಾಗಲಿಲ್ಲ. ಇನ್ನು ಮಗುವೊಂದು ಮಳೆಯ ನೀರಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ವರದಿ ಆಗಿತ್ತು.

Heavy rain in coastal karnataka, 2 people died

ಈಗಾಗಲೇ ಹಲವಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ಥವ್ಯವ್ಯಸ್ಥಗೊಂಡಿದ್ದು, ಹಲವಾರು ಮನೆಗಳು ಕುಸಿದು ಬಿದ್ದಿವೆ. ಕೋಟ್ಯಾಂತರ ಮೌಲ್ಯದ ಆಸ್ತಿ ಹಾನಿಯಾಗಿದೆ. ಸ್ಥಳೀಯ ಸಂಸ್ಥೆ ಮತ್ತು ಅಗ್ನಿಶಾಮಕ ದಳ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

ಭಾರೀ ಮಳೆ ಹಿನ್ನೆಲೆ: ದ.ಕ.ದಲ್ಲಿ 2 ದಿನ ಶಾಲಾ ಕಾಲೇಜುಗಳಿಗೆ ರಜೆಭಾರೀ ಮಳೆ ಹಿನ್ನೆಲೆ: ದ.ಕ.ದಲ್ಲಿ 2 ದಿನ ಶಾಲಾ ಕಾಲೇಜುಗಳಿಗೆ ರಜೆ

ಮಳೆಯ ಆರ್ಭಟದಿಂದಾಗಿ ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಂಗಳೂರು ವಿವಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದು, ಮಂಗಳೂರಿಗೆ ಬರಬೇಕಿದ್ದ ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ.

Heavy rain in coastal karnataka, 2 people died

ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಿಗಳಿಂದ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದು, ಅವಶ್ಯಕತೆ ಇದ್ದರೆ ರಕ್ಷಣಾ ಕಾರ್ಯಕ್ಕೆ ಜಲಸೇನೆಯ ನೆರವು ಪಡೆಯುವಂತೆ ಸೂಚಿಸಿದ್ದಾರೆ. ಇದೀಗ ಎನ್‌ಡಿಆರ್‌ಎಫ್‌ನ 38 ಸಿಬ್ಬಂದಿ ಮಂಗಳೂರಿಗೆ ರಕ್ಷಣಾ ಕಾರ್ಯಕ್ಕೆಂದು ಬಂದಿದ್ದಾರೆ.

ಕರಾವಳಿ ಪ್ರವಾಹ ಪರಿಸ್ಥಿತಿ ಕುರಿತು ಕೇಂದ್ರದೊಂದಿಗೆ ಬಿಎಸ್‌ವೈ ಮಾತುಕತೆಕರಾವಳಿ ಪ್ರವಾಹ ಪರಿಸ್ಥಿತಿ ಕುರಿತು ಕೇಂದ್ರದೊಂದಿಗೆ ಬಿಎಸ್‌ವೈ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಪರಿಸ್ಥಿತಿಯ ಮಾಹಿತಿ ಪಡೆದಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಅವರು ಟ್ವೀಟ್ ಮಾಡಿದ್ದರು. ಕೇಂದ್ರ ಗೃಹ ಸಚಿವಾಲಯವೂ ಈ ಬಗ್ಗೆ ಟ್ವೀಟ್ ಮಾಡಿದ್ದು, ವಿಪತ್ತು ಎದುರಿಸಲು ಸಂಪೂರ್ಣ ಕ್ರಮ ಕೈಗೊಂಡಿರುವುದಾಗಿ ಹೇಳಿದ್ದಾರೆ. ಯಡಿಯೂರಪ್ಪ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಮಂಗಳೂರಿಗೆ ಅಪ್ಪಳಿಸರುವುದು ಮುಂಗಾರು ಮಳೆ, ಆತಂಕ ಬೇಡ: ಶಶಿಕಾಂತ್ ಸೆಂಥಿಲ್ಮಂಗಳೂರಿಗೆ ಅಪ್ಪಳಿಸರುವುದು ಮುಂಗಾರು ಮಳೆ, ಆತಂಕ ಬೇಡ: ಶಶಿಕಾಂತ್ ಸೆಂಥಿಲ್

ಮೀನುಗಾರರು ಸೂಚನೆ ನೀಡುವವರೆಗೂ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದ್ದು. ಮನೆ ಕಳೆದುಕೊಂಡವರಿಗೆ, ಆಸ್ತಿ ಹಾನಿ ಮಾಡಿಕೊಂಡವರಿಗೆ ನಾಳೆ ಪರಿಹಾರ ಘೋಷಿಸುವ ಸಾಧ್ಯತೆ ಇದೆ.

English summary
Heavy rain created flood situation in coastal Karnataka. 2 people died due to rain. state and central government working to bring position to normal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X