ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಅವರನ್ನು ಭೇಟಿಯಾದ ಎಚ್.ಡಿ.ರೇವಣ್ಣ!

By Gururaj
|
Google Oneindia Kannada News

ಮಂಗಳೂರು, ಜೂನ್ 19 : ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಇಬ್ಬರು ನಾಯಕರು ಭೇಟಿಯಾಗಿದ್ದಾರೆ.

ಎಚ್.ಡಿ.ರೇವಣ್ಣ ಮಂಗಳವಾರ ಚಾರ್ಮಡಿ ಘಾಟ್ ರಸ್ತೆ ಪರಿಶೀಲನೆ ನಡೆಸಿದರು. ಮಳೆಯ ನಡುವೆಯೇ ರಸ್ತೆಯನ್ನು ವೀಕ್ಷಿಸಿದ ಅವರು ಅಧಿಕಾರಿಗಳಿಗೆ ಕಾಮಗಾರಿಗಳನ್ನು ಮುಗಿಸಬೇಕು ಎಂದು ಸೂಚನೆ ನೀಡಿದರು.

'ನನಗೂ ಸ್ವಾಭಿಮಾನ ಇದೆ': ಡಿಕೆಶಿ ಆರೋಪಕ್ಕೆ ರೇವಣ್ಣ ಗರಂ'ನನಗೂ ಸ್ವಾಭಿಮಾನ ಇದೆ': ಡಿಕೆಶಿ ಆರೋಪಕ್ಕೆ ರೇವಣ್ಣ ಗರಂ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮಸ್ಥಳದ ಶಾಂತಿವನದಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ರಸ್ತೆ ವೀಕ್ಷಣೆ ಬಳಿಕ ರೇವಣ್ಣ ಅವರು ಧರ್ಮಸ್ಥಳಕ್ಕೆ ಆಗಮಿಸಿ, ಸಿದ್ದರಾಮಯ್ಯ ಅವರನ್ನು ಭೇಟಿಯಾದರು.

HD Revanna

ಮೊದಲ ಭೇಟಿ : ಸಿದ್ದರಾಮಯ್ಯ ಮತ್ತು ಎಚ್.ಡಿ.ರೇವಣ್ಣ ಪರಮಾಪ್ತರು. ಆದರೆ, ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮೊದಲ ಬಾರಿಗೆ ಇಬ್ಬರು ನಾಯಕರು ಭೇಟಿಯಾಗಿದ್ದಾರೆ. ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ರೇವಣ್ಣ, ಸಿದ್ದರಾಮಯ್ಯ ನಡುವೆ ಜಟಾಪಟಿ ನಡೆದಿತ್ತು ಎಂಬುದು ರಾಜಕೀಯ ವಯದಲ್ಲಿನ ಮಾತು.

ಕ್ಷಮಿಸಿ, ದೇವೇಗೌಡರದು ಕುಟುಂಬ ರಾಜಕಾರಣ ಅಲ್ಲವೇ ಅಲ್ಲ!ಕ್ಷಮಿಸಿ, ದೇವೇಗೌಡರದು ಕುಟುಂಬ ರಾಜಕಾರಣ ಅಲ್ಲವೇ ಅಲ್ಲ!

ಅತ್ತ ರಾಹುಲ್ ಗಾಂಧಿ ಭೇಟಿ : ಎಚ್.ಡಿ.ಕುಮಾರಸ್ವಾಮಿ ಸೋಮವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಇಂದು ಬೆಳಗ್ಗೆ ರೇವಣ್ಣ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

English summary
PWD minister H.D.Revanna on June 19, 2018 met Former Chief Minister Siddaramaiah in Shantivana Dharmasthala, Dakshina Kannada district. Siddaramaiah admitted to Shantivana for 10 days of treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X