ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಣಕ್ಕೆ ಪೆಟ್ಟಿಲ್ಲದ ಹೊಸ ಕಂಬಳಕ್ಕೆ ಕರಾವಳಿ ಸಜ್ಜು

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಡಿ.16: ರಾಜ್ಯ ಸರಕಾರ ಕಂಬಳ ನಿಷೇಧ ಮಾಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಕಂಬಳಗಳ ಯಜಮಾನರು, ಇದೀಗ ಹೈಕೋರ್ಟ್ ನೀಡಿದ ತಡೆಯಾಜ್ಞೆಯಿಂದ ನಿರಾಳರಾಗಿದ್ದಾರೆ. ಮುಂದೆ ನಡೆಯುವ ಕಂಬಳಗಳನ್ನು ತಾವೇ ರಚಿಸಿರುವ ನಿಯಮ ಪ್ರಕಾರ ಅಹಿಂಸಾತ್ಮವಾಗಿ ನಡೆಸಲಿದ್ದಾರೆ.

ಮಂಗಳೂರು ಕಂಬಳದಲ್ಲಿ ಕೋಣಗಳನ್ನು ಓಡಿಸುವಾಗ ಮಾತ್ರ ಓಟಗಾರನ ಕೈಯಲ್ಲಿ ಒಂದು ಬೆತ್ತ, ಯಜಮಾನರ ಕೈಯಲ್ಲಿ ಗೌರವದ ಸಂಕೇತವಾಗಿ ಮಾತ್ರ ಒಂದು ಬೆತ್ತ...ಇದು, ಇನ್ನು ಮುಂದೆ ನಡೆಯುವ ಕರಾವಳಿಯ ಎಲ್ಲ ಕಂಬಳಗಳಿಗೆ ಅನ್ವಯವಾಗುವ ಹೊಸ ನಿಯಮಗಳಲ್ಲಿ ಒಂದು.

ಕಂಬಳಕ್ಕೆ ತಯಾರಿ ನಡೆದಿದೆ: ಈ ವರ್ಷ ನಡೆಯಬೇಕಾಗಿದ್ದ ಶಿರ್ವದ ನಡಿಬೆಟ್ಟು, ಸುರತ್ಕಲ್, ಬಂಗಾಡಿ ಮತ್ತು ಬಾರಾಡಿ ಬೀಡು ಕಂಬಳಗಳು ನಿಷೇಧದಿಂದ ನಡೆದಿರಲಿಲ್ಲ. ಸಿದ್ಧಕಟ್ಟೆಯ ಹೊಕ್ಕಾಡಿಗೋಳಿ ಕಂಬಳ ಮುಂದಿನ ವಾರ, ಜಿಲ್ಲಾಡಳಿತ ನಡೆಸುವ ಪಿಲಿಕುಳ ಕಂಬಳ ಡಿ.28ರಂದು ನಡೆಯಬೇಕಾಗಿದೆ. ಇದಾದ ಬಳಿಕ ಒಟ್ಟು 22 ಕಂಬಳ ಉಳಿಯುತ್ತವೆ.

HC lifts ban on Kambala, Celebrations in Coastal District Karnataka

ಇವುಗಳನ್ನು ಕಾನೂನಿನ ಚೌಕಟ್ಟಿನೊಳಗೆ ಸುಪ್ರೀಂ ಕೋರ್ಟ್ ಸಾಕು ಪ್ರಾಣಿಗಳ ಬಗ್ಗೆ ನೀಡಿರುವ ಆದೇಶದಂತೆ ಪ್ರಾಣಿಗಳ ಮೇಲಿನ ಹಿಂಸೆ ತಡೆಯುವ ಕಾಯಿದೆ ಪಾಲಿಸಿ ನಡೆಸಲು ನಿರ್ಧರಿಸಲಾಗಿದೆ. ಕೈಯಲ್ಲಿ ಬೆತ್ತ ಇಲ್ಲದೆ, ಕಂಬಳ ನಡೆಸಲು ಸಾಧ್ಯವಿಲ್ಲ. ಹೊಡೆ ಯಲು ಅಲ್ಲದಿದ್ದರೂ ಕೋಣಕ್ಕೆ ಹೆದರಿಸಲು, ನಿಯಂತ್ರ ಕರ ಮೇಲೆ ಹಾಯುವುದನ್ನು ತಪ್ಪಿಸಲು ಬೆತ್ತ ಅನಿ ವಾರ್ಯ ಎನ್ನುತ್ತಾರೆ ಕಂಬಳ ಸಮಿತಿ ಪದಾಧಿಕಾರಿಗಳು. [ಕಂಬಳ ಆಚರಣೆಗೆ ಹೈಕೋರ್ಟಿನಿಂದ ಗ್ರೀನ್ ಸಿಗ್ನಲ್]

ಕಂಬಳದಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಾ ಕೋಣಗಳಿಗೆ ಎರಡು ಕಡೆಗಳಲ್ಲಿ ಓಡಿಸುವಾಗ ಹೊರತುಪಡಿಸಿ, ಕಂಬಳದ ಕರೆಗಳ ಗಂತಿನಲ್ಲಿ, ಮಂಜೊಟ್ಟಿಯಲ್ಲಿ ಮತ್ತು ಹೊರಾಂಗಣ ಅಲ್ಲದೇ ಯಾವುದೇ ಪ್ರದೇಶದಲ್ಲಿ ಹೊಡೆಯುವುದು ಮತ್ತು ಯಾವುದೇ ರೀತಿ ಹಿಂಸಿಸುವುದನ್ನು ನಿಷೇಧಿಸಲಾಗಿದೆ.

ಕೋಣ ಓಡಿಸುವವರು ಮತ್ತು ಗಂತಿನಲ್ಲಿ ಕೋಣ ಬಿಡುವ ನಿಯಂತ್ರಕರಿಗೆ ಜತೆಗಾರರನ್ನು ನಿಗದಿಪಡಿಸಲಾಗಿದೆ. ಇದು ಹಗ್ಗ ಹಿರಿಯ ವಿಭಾಗ, ನೇಗಿಲು ಹಿರಿಯ ವಿಭಾಗ, ಹಗ್ಗ ಕಿರಿಯ ವಿಭಾಗ ಮತ್ತು ನೇಗಿಲು ಕಿರಿಯ ವಿಭಾಗಗಳ ಯಜಮಾನರಿಗೆ ಮಾತ್ರ ಅನ್ವಯವಾಗುತ್ತದೆ.

ಕೋಣ ಓಡಿಸುವ ಓಟಗಾರರಿಗೆ ಮತ್ತು ಗಂತಿನಲ್ಲಿ ಕೋಣ ಬಿಡುವವರಿಗೆ ಈ ನಾಲ್ಕು ವಿಭಾಗಗಳಲ್ಲಿ ಎರಡು ವಿಭಾಗದ ಎರಡು ಯಜಮಾನರ ಬಳಿ ಕಾರ್ಯನಿರ್ವ ಹಿಸಲು ಮಾತ್ರ ಅವಕಾಶ (ಯಜಮಾನರ ಎ ಮತ್ತು ಬಿ ಕೋಣಗಳಿದ್ದಲ್ಲಿ ಅವಕಾಶವಿದೆ). ಯಜಮಾನರು ಕರೆಗೆ ಇಳಿಯುವ ಸಂದರ್ಭದಲ್ಲಿ ತಮ್ಮ ಹೆಸರು ನೋಂದಾ ಯಿಸುವಾಗ ತಮ್ಮ ಓಟಗಾರ ಮತ್ತು ಗಂತಿನ ಕೋಣ ಬಿಡುವವರ ಹೆಸರನ್ನು ಕೂಡ ನೋಂದಾಯಿಸಬೇಕು.

Celebrations in Coastal District Karnataka

ಗಂತಿನ ಕೋಣ ತಿರುಗಿಸಿ ಬಿಡುವವರಿಗೆ ತಾವು ನಿರ್ವಹಿ ಸುವ ಎರಡು ವಿಭಾಗಗಳನ್ನು ಹೊರತುಪಡಿಸಿ ಈಗಾಗಲೇ ಸೂಚಿಸಿದ ಎರಡು ವಿಭಾಗದಲ್ಲಿ ಸಹಾಯಕ ರಾಗಿ ಮಾತ್ರ ಕೆಲಸ ನಿರ್ವಹಿಸಬಹುದು.ಗಂತಿನ ಕೋಣ ತಿರುಗಿಸಿ ಬಿಡುವವರಿಗೆ ಕನ ಹಲಗೆ ಮತ್ತು ಅಡ್ಡ ಹಲಗೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸಲು ಮುಕ್ತ ಅವಕಾಶ ಮತ್ತು ಯಾವುದೇ ನಿಬಂಧನೆಗಳಿಲ್ಲ. [ನಿಷೇಧ ತೆರವಿಗೆ ಕರ್ನಾಟಕ ಮನವಿ ಮಾಡಿಲ್ಲ]

ಕ್ಯಾಮೆರಾ ಕಣ್ಣು: ಮುಂದಿನ ಎಲ್ಲ ಕಂಬಳಗಳೂ ಸಿಸಿ ಕ್ಯಾಮೆರಾದಡಿ ನಡೆಯಲಿವೆ. ಕಂಬಳ ಮುಗಿದ ಬಳಿಕ ಕಂಬಳ ಸಮಿತಿ ಹಾಗೂ ಸಂಬಂಧಪಟ್ಟವರು ಅದನ್ನು ಸೂಕ್ಷ್ಮವಾಗಿ ವೀಕ್ಷಿಸಿ, ಕೋಣಗಳಿಗೆ ಪೆಟ್ಟು ಹೊಡೆಯಲಾಗಿಯೇ, ಹಿಂಸೆ ನೀಡಲಾಗಿದೆಯೇ ಎಂಬುದನ್ನು ಪರಿಶೀಲಿ ಸಲಿದೆ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಶಿಸ್ತು ಕ್ರಮ ಬಗ್ಗೆ ಚಿಂತಿಸಲಾಗುತ್ತದೆ ಎನ್ನುತ್ತಾರೆ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಭಾಸ್ಕರ ಕೋಟ್ಯಾನ್.

ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಪೂರಕವಾಗಿ ರಾಜ್ಯ ಸರಕಾರ ಕಂಬಳ ನಿಷೇಧಿಸಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ಆದೇಶ ಬರುತ್ತಿದ್ದಂತೆ ನಗರದಲ್ಲಿ ಸೋಮವಾರ ಕಂಬಳ ಸಮಿತಿ ಪದಾಧಿಕಾರಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

Kambala

ಕಂಬಳ ಸಮಿತಿ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್ : ಈ ಸಂದರ್ಭದಲ್ಲಿ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್ ಮಾತನಾಡಿ, ಹೈ ಕೋರ್ಟ್ ತೀರ್ಪಿನಿಂದ ತುಂಬಾ ಸಂತೋಷ ಆಗಿದೆ. ತುಳು ನಾಡಿನ ಸಾವಿರ ವರ್ಷಗಳ ಇತಿಹಾ ಸದ ಜಾನಪದ ಕ್ರೀಡೆಗೆ ಇದರಿಂದ ನ್ಯಾಯ ಸಿಕ್ಕಿದಂ ತಾಗಿದೆ. ಆದರೆ, ತೀರ್ಪಿನ ಶರತ್ತುಗಳನ್ನು ಇನ್ನಷ್ಟೇ ನೋಡಬೇಕಾಗಿದೆ ಎಂದು ಪ್ರತಿಕ್ರಿಯಿಸಿದರು. [ಕಂಬಳ ನಿಷೇಧ : ರಸ್ತೆಗಿಳಿದ ಸಿಂಗಾರಗೊಂಡ ಕೋಣಗಳು]

ಜಿಲ್ಲಾ ಕಂಬಳ ಸಮಿತಿ ಜತೆಗೆ ಕುಂದಾಪುರದ ಸಾಂಪ್ರದಾಯಿಕ ಕಂಬಳ ಸಮಿತಿ ಮತ್ತು ಉಪ್ಪಿನಂಗಡಿ ಕಂಬಳ ಸಮಿತಿ ಕೂಡಾ ಪ್ರತ್ಯೇಕವಾಗಿ ಕೋರ್ಟ್ ಮೊರೆ ಹೋಗಿತ್ತು. ಒಂದೂವರೆ ತಿಂಗಳಿಂದ ವಿವಿಧ ಹಂತದಲ್ಲಿ ಮಂಗಳೂರಿನಲ್ಲಿ ಕೋಣಗಳನ್ನು ರಸ್ತೆಗೆ ತಂದು ಡಿಸಿ ಕಚೇರಿ ಎದುರು ನಡೆಸಿದ ಬೃಹತ್ ಪ್ರತಿಭಟನೆ, ಕಂಬಳ ಪ್ರೇಮಿಗಳ ಹೋರಾಟ, ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದರು.

Kambala

ಕೇಂದ್ರದ ಕಾನೂನು ಸಚಿವರಿಗೆ ಕಂಬಳ ಸಮಿತಿ ಮನವಿ ನೀಡಿದ ಮರುದಿನದಿಂದಲೇ ಅವರು ಕಂಬಳ ನಿಷೇಧ ತೆರವಿಗೆ ಪ್ರಯತ್ನ ಮಾಡಿದ್ದಾರೆ. ರಾಜ್ಯ ಸರಕಾರದ ನಿಲುವಿನ ಬಗ್ಗೆ ಹೇಳಲು ಇಷ್ಟಪಡುವುದಿಲ್ಲ. ರಾಜ್ಯ ಕೆಲವು ಸಚಿವರು, ಶಾಸಕರು ನಿಷೇಧದ ಪರವಾಗಿದ್ದರೆ, ಇನ್ನು ಕೆಲವು ವಿರೋಧ ಇದ್ದವು. ಯಾರು ನಮ್ಮ ಪರವಾಗಿದ್ದರು ಎಂಬುದು ಸ್ವತಃ ಸಚಿವರುಗಳಿಗೆ ಗೊತ್ತಿದೆ. ನಮಗೆ ಬೆಂಬಲ ಕೊಟ್ಟವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಉಪ್ಪಿನಂಗಡಿ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಜಿಲ್ಲಾ ಕಂಬಳ ಸಮಿತಿ ಸಂಚಾಲಕ ಸೀತಾರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಕೆ.ಪೂಜಾರಿ, ಸುರತ್ಕಲ್ ಸುಬ್ರಹ್ಮಣ್ಯ ಪ್ರಭು, ಕೆ.ಗೋಪಾಲಕೃಷ್ಣ ಪ್ರಭು, ನಿರಂಜನ್ ರೈ, ಕೇಶವ ಭಂಡಾರಿ, ರಾಜೀವ ಶೆಟ್ಟಿ ಎಡ್ತೂರು, ಜಾನ್ ಸಿರಿಲ್ ಡಿಸೋಜ, ನಿರಂಜನ್ ರೈ, ಉಮೇಶ್ ಶೆಣೈ, ಪ್ರಕಾಶ್ ಕಜೆಕಾರು ಮತ್ತಿತರರು ಇದ್ದರು.

English summary
The decision of the Karnataka High Court to permit Kambala (buffalo slush race) with some conditions, was greeted with distribution of sweets and celebrations in the two coastal districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X