ಮಂಗಳೂರು : ಪಾಲಿಕೆ ಮೇಯರ್, ಆಯುಕ್ತರಿಗೆ 20 ಸಾವಿರ ರೂ. ದಂಡ

Posted By:
Subscribe to Oneindia Kannada

ಮಂಗಳೂರು, ಅ.10 : ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಹಾಗೂ ಆಯುಕ್ತ ಮಹಮದ್ ನಝೀರ್ ಅವರಿಗೆ ಹೈಕೋರ್ಟ್ ತಲಾ 20 ಸಾವಿರ ರೂ. ದಂಡ ವಿಧಿಸಿದೆ. ಮುಂದಿನ ವಿಚಾರಣೆ ವೇಳೆ ಕೋರ್ಟ್‌ಗೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ.

ಮಂಗಳೂರು: ಮತ್ತೆ ಸ್ಕಿಲ್ ಗೇಮ್ ಅಡ್ಡೆಗಳ ಮೇಲೆ ಮೇಯರ್ ದಾಳಿ

ಸಲೂನ್ ಜಪ್ತಿ ಮಾಡಿರುವುದನ್ನು ಪ್ರಶ್ನಿಸಿ ಸಲೂನ್ ಮಾಲೀಕ ಫ್ರಾನ್ಸಿಸ್ ಕಿರಣ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪಾಲಿಕೆಯ ಆಯುಕ್ತರು ಹಾಗೂ ಮೇಯರ್ ಹಾಜರಾಗಿ ಯಾವ ಆಧಾರದ ಮೇಲೆ ಜಪ್ತಿ ಮಾಡಲಾಗಿದೆ ಎಂದು ಪ್ರಮಾಣ ಪತ್ರ ಸಲ್ಲಿಸಲು ನಿರ್ದೇಶನ ನೀಡಿತ್ತು.

HC imposes Rs 20 thousand fine for Mangaluru mayor and commissioner

ಲೈಸನ್ಸ್ ಪಡೆದಿದ್ದರೂ ಸಲೂನ್ ಜಪ್ತಿ ಮಾಡಲಾಗಿದೆ ಎಂದು ಮಾಲೀಕರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು. ಕೋರ್ಟ್ ನಿರ್ದೇಶನ ನೀಡಿದರೂ ವಿಚಾರಣೆಗೆ ಹಾಜರಾಗದ ಕಾರಣ ಮೇಯರ್ ಹಾಗೂ ಆಯುಕ್ತರಿಗೆ ತಲಾ 20 ಸಾವಿರ ರೂ. ದಂಡ ವಿಧಿಸಲಾಗಿದೆ. ಮುಂದಿನ ವಿಚಾರಣೆ ವೇಳೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಮಂಗಳೂರು: ಮೇಯರ್ ಮೇಡಂ, ಜಾಹೀರಾತು ಫಲಕ ತೆರವುಗೊಳಿಸುವುದು ಯಾವಾಗ?

NO! Mangaluru-Sharjah flight for three months | OneIndia Kannada

ಈ ಕುರಿತು ಒನ್ ಇಂಡಿಯಾ ಜೊತೆ ಮಾತನಾಡಿದ ಮೇಯರ್ ಕವಿತಾ ಸನಿಲ್, 'ಮಹಾನಗರ ಪಾಲಿಕೆಯು ಸಲೂನ್ ನಡೆಸಲು ಮಾತ್ರ ಅನುಮತಿ ನೀಡಲಾಗಿದೆ. ಆದರೆ, ಮಸಾಜ್ ಪಾರ್ಲರ್ ನಡೆಸಲು ಅನುಮತಿಯನ್ನು ಕೊಟ್ಟಿಲ್ಲ. ಅನುಮತಿ ಇಲ್ಲದೆ ಮಸಾಜ್ ಪಾರ್ಲರ್ ನಡೆಸುತ್ತಿದ್ದರಿಂದ' ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka High Court imposed Rs 20,000 fine for Mangaluru mayor Kavita Sanil and Commissioner for not appering for court.
Please Wait while comments are loading...