ಹರಿನಾಥ್ ಮಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 11 : ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಮರಕಡ ವಾರ್ಡ್‌ನ ಹರಿನಾಥ್ ಆಯ್ಕೆಯಾಗಿದ್ದಾರೆ. ಬಿಜೆಪಿಗೆ ಉಪ ಮೇಯರ್ ಪಟ್ಟ ಲಭ್ಯವಾಗಿದ್ದು, ಸುಮಿತ್ರಾ ಕರಿಯ ಅವರು ಆಯ್ಕೆಯಾಗಿದ್ದಾರೆ.

ನಗರದ ಸರ್ಕಿಟ್ ಹೌಸ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಗುರುವಾರ ರಾತ್ರಿ ನಡೆದ ಸಭೆಯಲ್ಲಿ ಮೇಯರ್ ಹುದ್ದೆಗೆ ಹರಿನಾಥ್ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಶುಕ್ರವಾರ ಚುನಾವಣೆ ನಡೆದಿದ್ದು, ಮೇಯರ್ ಮತ್ತು ಉಪ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಹಂಚಿಕೊಂಡಿವೆ. [ಮೇಯರ್ ಸ್ಥಾನಕ್ಕೆ ಭಾರೀ ಪೈಪೋಟಿ]

harinath

ಉಪ ಮೇಯರ್ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ಅರ್ಹ ಸದಸ್ಯರಿರಲಿಲ್ಲ. ಬಿಜಿಪಿಯ ಸುಮಿತ್ರಾ ಕರಿಯ ಈ ಮೀಸಲಿನ ಏಕೈಕ ಸದಸ್ಯೆಯಾದ್ದರು. ಆದ್ದರಿಂದ, ಬಿಜೆಪಿಗೆ ಉಪ ಮೇಯರ್ ಪಟ್ಟ ಲಭಿಸಿತು. [ಉಡುಪಿಯಲ್ಲಿ 'ಹೆಲಿ ಟೂರಿಸಂ', ರಾಜ್ಯದಲ್ಲೇ ಪ್ರಥಮ]

ಮೇಯರ್ ಸ್ಥಾನಕ್ಕೆ ಕೆ.ಭಾಸ್ಕರ ಅವರು ಪ್ರಬಲ ಆಕಾಂಕ್ಷಿಯಾಗಿದ್ದರು. ಮುಸ್ಲಿಂ ಸಮುದಾಯಕ್ಕೆ ಅವಕಾಶ ನೀಡಬೇಕು ಎನ್ನುವ ಬೇಡಿಕೆಯೂ ಇತ್ತು. ಬಿ.ರಾಮನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಪೊರೇಟರ್‌ಗಳ ಸಭೆಯಲ್ಲಿ ಮೇಯರ್ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿತ್ತು.

ಸ್ಥಾಯಿಸಮಿತಿ ಅಧ್ಯಕ್ಷರ ಸ್ಥಾನ : ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಜೊತೆಗೆ ಸ್ಥಾಯಿ ಸಮಿತಿಗೂ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ನಗರ ಯೋಜನಾ ಸ್ಥಾಯಿ ಸಮಿತಿಗೆ ಲ್ಯಾನ್ಸಿ ಪಿಂಟೋ, ಆರೋಗ್ಯ ಸಮಿತಿಗೆ ಕವಿತಾ ಸನಿಲ್, ತೆರಿಗೆ ಹಣಕಾಸು ಸಮಿತಿಗೆ ಅಪ್ಪಿ ಹಾಗೂ ಲೆಕ್ಕ ಪತ್ರ ಸ್ಥಾಯಿ ಸಮಿತಿಗೆ ಪ್ರತಿಭಾ ಕುಳಾಯಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

29 ನೇ ಮೇಯರ್ : ಹರಿನಾಥ್ ಅವರು ಮಂಗಳೂರು ಮಹಾನಗರ ಪಾಲಿಕೆಯ 29ನೇ ಮೇಯರ್. ಕಾಂಗ್ರೆಸ್ 22 ಹಾಗೂ ಬಿಜೆಪಿಯ 4 ಮಂದಿಗೆ ಇದುವರೆಗೆ ಮೇಯರ್ ಸ್ಥಾನ ಒಲಿದಿದೆ. ಈ ಪೈಕಿ ಕಾಂಗ್ರೆಸ್ ಎಂ. ಸದಾಶಿವ ಭಂಡಾರಿ ಮತ್ತು ರಮೇಶ್ ಕೋಟ್ಯಾನ್ ತಲಾ 2 ಬಾರಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇದನ್ನು ಪ್ರತ್ಯೇಕ ಅವಧಿಯಾಗಿ ಪರಿಗಣಿಸಿದರೆ ಹರಿನಾಥ್ 31ನೇ ಮೇಯರ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Harinath five-time councillor of Marakada ward has elected as new mayor of Mangaluru City Corporation (MCC) in the elections held on Friday, March 11, 2016. Suratkal corporator Sumitra Kariya of BJP has been chosen as the deputy mayor.
Please Wait while comments are loading...