ಜ.19ರಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮಂಗಳೂರಿಗೆ

Posted By: Ramesh
Subscribe to Oneindia Kannada

ಮಂಗಳೂರು, ಜನವರಿ. 11 : ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರು ಇದೆ ಜನವರಿ 19ರಂದು ನಗರಕ್ಕೆ ಆಗಮಿಸಲಿದ್ದಾರೆ.

13ರಿಂದ 19ರವರೆಗೆ ಕಿನ್ನಿಗೋಳಿಯ ಬಳಿ ಇರುವ ಏಳಿಂಜೆ ಲಕ್ಷ್ಮೀ ಜನಾರ್ಧನ ಮಹಾ ಗಣಪತಿ ದೇವಸ್ಥಾನದಲ್ಲಿ ನೆಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮುಲ್ಕಿ ಸಿಮಾ ಅರಸರಾದ ದುಗ್ಗುಣ ಸಾವಂತರು. ಕಟೀಲು ದೇವಳ ಅನುವಂಶಿಕ ಮೋಕ್ತಸಾರ ವಾಸುದೇವ ಅಸ್ರಣ್ಣ, ಶಿಬರೂರು ದೇವಸ್ಥಾನ ತಂತ್ರಿ ಮುತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

Hanna Hazare will attend Elinje temple feast Mangaluru on january 19th

ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ನೂತನ ಪುಷ್ಕರಾಣಿ ಭಾಗವದರ್ಶನ ನಡೆಯಲಿದೆ. 14ರ ಬೆಳಿಗ್ಗೆ ಮೃತ್ಯಂಜಯ ಹೋಮ, ಮಧ್ಯಾಹ್ನ ಮಕರ ಸಂಕ್ರಮಣ ಪ್ರಯುಕ್ತ ವಿಶೇಷ ಅನ್ನ ಸಂತರ್ಪಣೆ. ಜ.15ರ ಬೆಳಿಗ್ಗೆ ಅರ್ಥವರ್ಷಿರ್ಷ ಗಣಯಾಗ, ಬಿಂಬಶುದ್ಧಿ, ಪ್ರಾಯಶ್ಚಿತ್ತ ಮತ್ತು ಶಾಂತಿ ಹೋಮಗಳು ನೆಡೆಯಲಿವೆ.

16 ಮತ್ತು 17, ರಂದು ವಿವಿಧ ಕಾರ್ಯಕ್ರಮ ನಡೆಯಲಿದ್ದು, 19ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಣ್ಣಾ ಹಜಾರೆ ಭಾಗವಹಿಸುವರು ಎಂದು ತಿಳಿದು ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hanna Hazare will attend Elinje temple feast at Kinnigoli in Mangaluru on 19th Jan. The feast will take place for 7 days from 13th to 19th Jan, for which Hanna Hazare will be attending the feast on 19th.
Please Wait while comments are loading...