ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಜ್ ಹೆಸರಿನಲ್ಲಿ ಟ್ರಾವೆಲ್ ಏಜೆನ್ಸಿಯಿಂದ ಲಕ್ಷಾಂತರ ರೂ. ವಂಚನೆ

|
Google Oneindia Kannada News

ಮಂಗಳೂರು, ಆಗಸ್ಟ್ 27: ಹಜ್ ಯಾತ್ರೆಗೆ ವೀಸಾ ನೀಡುತ್ತೇವೆ ಎಂದು ಖಾಸಗಿ ಟ್ರಾವೆಲ್ಸ್ ಸಂಸ್ಥೆಯೊಂದು ಯಾತ್ರಿಗರನ್ನು ನಂಬಿಸಿ ತಲಾ 70 ಸಾವಿರ ರೂ.ನಂತೆ ಪಡೆದುಕೊಂಡು ವಂಚನೆ ನಡೆಸಿರುವ ಕೃತ್ಯ ಈಗ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಉಡುಪಿ ನಿವಾಸಿ ಎಂ.ಪಿ. ಮೊಯ್ದಿನಬ್ಬ ಎಂಬವರು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಹಜ್ ಯಾತ್ರೆ ಸುಗಮಕ್ಕೆ ಕ್ರಮ: ಸಿದ್ದರಾಮಯ್ಯ ಭರವಸೆಹಜ್ ಯಾತ್ರೆ ಸುಗಮಕ್ಕೆ ಕ್ರಮ: ಸಿದ್ದರಾಮಯ್ಯ ಭರವಸೆ

ಈ ಸಂಸ್ಥೆಯ ಮಾಲಕರು ಹಾಗೂ ಏಜೆಂಟರಿಂದ ನನಗೆ ಹಾಗೂ ಇತರ ಹಲವರಿಗೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ತೊಂದರೆಯಾಗಿದೆ. ನಾನು ಹಜ್ ಯಾತ್ರೆಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ. ನಂತರ ವಿಚಾರಿಸಿದಾಗ ನನ್ನಂತೆಯೇ ಸುಮಾರು 95 ಮಂದಿಗೆ ಇದೇ ರೀತಿ ಅನ್ಯಾಯವಾಗಿರುವುದು ತಿಳಿದು ಬಂತು. ಅಲ್ಲದೆ ಪವಿತ್ರ ಹಜ್ ಯಾತ್ರೆ ಹೆಸರಿನಲ್ಲಿ ಅವಮಾನ ಮಾಡುವ ಕೃತ್ಯವೂ ನಡೆದಿದೆ. ನಮ್ಮೆಲ್ಲರ ಪಾಸ್‌ಪೋರ್ಟ್ ಹಾಗೂ ಹಣ ಅವರ ಕೈಯ್ಯಲ್ಲಿದೆ

Haj Pilgrims Accuse Private Travel Operators of Cheating in Mangaluru

ಎಂದು ಮೊಯ್ದಿನಬ್ಬ ತಿಳಿಸಿದ್ದಾರೆ.

ಜನರನ್ನು ವಂಚಿಸುವ ಈ ಸಂಸ್ಥೆಯವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಎಂ.ಪಿ. ಮೊಯ್ದಿನಬ್ಬ ಮಂಗಳೂರು ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಇವರಿಗೆ ಭಾರತದ ಹಜ್ ಕಮಿಟಿಯ ಪದಾಧಿಕಾರಿಗಳು, ರಾಜಕೀಯ ನಾಯಕರ ಬೆಂಬಲವೂ ಇದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಮೆಕ್ಕಾದಲ್ಲಿ ಮಂಗಳೂರಿನ ಹಜ್ ಯಾತ್ರಾರ್ಥಿ ಸಾವುಮೆಕ್ಕಾದಲ್ಲಿ ಮಂಗಳೂರಿನ ಹಜ್ ಯಾತ್ರಾರ್ಥಿ ಸಾವು

2017ರ ಹಜ್ ಯಾತ್ರೆಗೆ ಸಂಬಂಧಿಸಿದಂತೆ, ಮಂಗಳೂರಿನ ಮಿಶನ್‌ಸ್ಟ್ರೀಟ್‌ನ ರೀಗಲ್ ಪ್ಲಾಝಾದಲ್ಲಿ ಕಾರ್ಯಾಚರಿಸುತ್ತಿರುವ ಶಹದಾ ಟ್ರಾವೆಲ್ಸ್ ಸಂಸ್ಥೆಯು ಕಳೆದ ಜೂನ್ ತಿಂಗಳಲ್ಲಿ ಹಜ್‌ಗೆ ಹೋಗುವವರ ವೀಸಾಗಳು ನಾನಾ ಕಾರಣಗಳಿಂದಾಗಿ ಉಳಿಕೆಯಾಗಿವೆ ಎಂದು ತಿಳಿಸಿತ್ತು. ಮೊದಲು 35,000 ರೂ. ಮತ್ತು ನಂತರ 35,000 ರೂ. ನೀಡುವಂತೆ ತಿಳಿಸಿ ಪಾಸ್‌ಪೋರ್ಟ್‌ಗಾಗಿ ಸಂಸ್ಥೆಯವರು ಒತ್ತಾಯಿಸಿದ್ದರು.

ಅದರಂತೆ ನಾನು ನನ್ನ ಪಾಸ್‌ಪೋರ್ಟ್ ಹಾಗೂ 35,000 ರೂ. ಜೂನ್ 21ರಂದು ಮತ್ತು ಆಗಸ್ಟ್ 16ರಂದು ಮತ್ತೆ 35,000 ರೂ. ಸೇರಿದಂತೆ ಒಟ್ಟು 70 ಸಾವಿರ ರೂ. ಪಾವತಿ ಮಾಡಿರುತ್ತೇನೆ. ಆ. 25ರೊಳಗೆ ವೀಸಾ ನೀಡಿ ಹಜ್ ಯಾತ್ರೆಗೆ ತಯಾರಾಗುವಂತೆ ನನಗೆ ತಿಳಿಸಲಾಗಿತ್ತು. ಆದರೆ ಆ. 21ರಿಂದ ಸಂಜೆ 7 ಗಂಟೆಯವರೆಗೆ ನಿರಂತರವಾಗಿ ನನಗೆ ಹಾಗೂ ಸುಮಾರು 95 ಮಂದಿಗೆ ಸುಳ್ಳು ಮಾಹಿತಿ ನೀಡಿದ್ದರು. ನಿನ್ನೆ 8 ಗಂಟೆಗೆ ಕರೆ ಮಾಡಿ ಎಲ್ಲಾ ವೀಸಾಗಳು ರದ್ದಾಗಿವೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ. ಈ ಮೂಲಕ ಮೋಸ ನಡೆದಿದೆ ಎಂದು ಶಾಫಿ ಎಂಬವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

English summary
Private travel tour operator agency in Mangaluru is alleged of cheating more than 95 Haj Pilgrims by eating their money. A complaint has been filed and brought to the notice of Mangaluru Police commissioner T R Suresh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X