ಕೊರಗರ ಹಾಡಿಯಲ್ಲಿ ಎಚ್.ಆಂಜನೇಯ ಹುಟ್ಟುಹಬ್ಬ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 16 : ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರ ತಮ್ಮ 61ನೇ ಹುಟ್ಟುಹಬ್ಬವನ್ನು ಹಾಡಿಯಲ್ಲಿ ಆಚರಿಸಿಕೊಂಡಿದ್ದಾರೆ. ಮುಲ್ಕಿಯ ಪಡುಪಣಂಬೂರಿನ ಕೆರೆಕಾಡು ಕೊರಗರ ಹಾಡಿಯಲ್ಲಿ ವಾಸ್ತವ್ಯ ಮಾಡುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡರು.

ಶುಕ್ರವಾರ ರಾತ್ರಿ ಹಾಡಿಗೆ ಆಗಮಿಸಿದ ಸಚಿವ ಎಚ್.ಆಂಜನೇಯ ಅವರನ್ನು ಕೊರಗರ ಸಾಂಪ್ರದಾಯಿಕ ಡೋಲು ಹಾಗೂ ಕೊಳಲು ವಾದನದೊಂದಿಗೆ ಸ್ವಾಗತಿಸಲಾಯಿತು. ಹಾಡಿಯ ಸಮೀಪದಲ್ಲಿನ ಜಾಗವನ್ನು ಹದಗೊಳಿಸಿ ವೇದಿಕೆ ಸಿದ್ಧಗೊಳಿಸಲಾಗಿದ್ದು, ಅಲ್ಲಿ ಸಚಿವರು ಕೊರಗರ ಸಾಂಪ್ರದಾಯಿಕ ಡೋಲು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. [ಸಿದ್ಧಿ ಜನಾಂಗದ ಹಾಡಿಯಲ್ಲಿ ಆಂಜನೇಯ ಹೊಸ ವರ್ಷಾಚರಣೆ]

h anjaneya

ಸಚಿವ ಆಂಜನೇಯ ಅವರು ಬೇಬಿ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು. ಸಂಪೂರ್ಣ ಹಾಡಿಯನ್ನು ಮಧುವಣಗಿತ್ತಿಯಂತೆ ಸಿಂಗಾರಗೊಳಿಸಲಾಗಿತ್ತು. ಹಾಡಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ಸ್ಥಳಾಂತರಿಸಬಹುದಾದ ಸಾಮೂಹಿಕ ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗಿತ್ತು. [ಸಾಮೂಹಿಕ ವಿವಾಹದಲ್ಲಿ ಸಚಿವರ ಪುತ್ರಿ ಮದುವೆ!]

ಸಚಿವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಅಧಿಕಾರಿಗಳು ಕೇಕ್ ಕತ್ತರಿಸುವಂತೆ ಸಚಿವರನ್ನು ಕೋರಿಕೊಂಡಾಗ ಅವರು ತಿರಸ್ಕರಿಸಿದರು. ಹಾಡಿಯ ಜನರಿಗೆ ವಿವಿಧ ಸವಲತ್ತುಗಳನ್ನು ವಿತರಿಸಿದ ಸಚಿವರು, ಕೊರಗ ಸಮುದಾಯದವರ ಅಹವಾಲು, ಬೇಡಿಕೆಗಳನ್ನು ಆಲಿಸಿ ಸಂವಾದ ನಡೆಸಿದರು.

ಜನರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, 'ರಾಜ್ಯದ ವಿವಿಧ ಜಿಲ್ಲೆಗಳ ಅರಣ್ಯದಲ್ಲಿ ವಾಸವಾಗಿರುವ ಆದಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಪೂರಕವಾಗುವಂತೆ ಅರಣ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಉನ್ನತ ಮಟ್ಟದ ಸಭೆಯನ್ನು ಶೀಘ್ರವೇ ನಡೆಸುವುದಾಗಿ' ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka social welfare minister H.Anjaneya celebrates 61st birthday at Kere Kadu Koragara Hadi at Mulki, Mangaluru on April 15th 2016.
Please Wait while comments are loading...