ಜಿಎಸ್ಟಿ ದರದಲ್ಲಿ ಗ್ರಾಹಕರಿಗೆ ವಂಚನೆ, ಮಳಿಗೆಗಳ ವಿರುದ್ಧ ದೂರು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ನವೆಂಬರ್ 26: ಜಿಎಸ್ ಟಿ ಕೌನ್ಸಿಲ್ ನಿಂದ ನವೆಂಬರ್ 15ರಿಂದಲೇ ಆಹಾರ ಉತ್ಪನ್ನ ಹಾಗೂ ಸಾಬೂನು ಸೇರಿದಂತೆ 177 ವಸ್ತುಗಳ ಮೇಲಿನ ಜಿಎಸ್ ಟಿ ದರವನ್ನು ಶೇಕಡಾ 28 ರಿಂದ ಶೇಕಡಾ 18ಕ್ಕೆ ಇಳಿಸಲಾಗಿತ್ತು.

ಜಿಎಸ್ ಟಿ ಇಳಿಕೆ ನಂತರವೂ ತಿಂಡಿ-ತಿನಿಸುಗಳ ದರ ಏರಿಕೆಗೆ ಕೇಂದ್ರ ಗರಂ

ಆದರೆ, ರಾಜ್ಯದ ವಿವಿಧೆಡೆ ಕೆಲ ವ್ಯಾಪಾರ ಮಳಿಗೆಗಳಲ್ಲಿ ಜಿಎಸ್ ಟಿ ತೆರಿಗೆ ದರದಲ್ಲಿ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತೂಕ, ಅಳತೆ ಮತ್ತು ಕಾನೂನು ಮಾಪನ ಇಲಾಖಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಹದಿನೈದು ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ.

GST rate irregularity, complaint registered against shops

ಹಾಗೆಯೇ ಮಂಗಳೂರಿನ ಅತ್ತಾವರದ ಬಿಗ್ ಬಜಾರ್ ಮಳಿಗೆಯ ಮೇಲೆ ಕಾನೂನು ಮಾಪನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ದರ ಇಳಿಕೆ ಬದಲು ರಿಯಾಯಿತಿ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದುದು ಬಯಲಾಗಿದೆ.

ಹೀಗಾಗಿ ಬಿಗ್ ಬಜಾರ್ ವಿರುದ್ಧ ದೂರು ದಾಖಲಾಗಿದೆ. ಜೊತೆಗೆ ಹಂಪನಕಟ್ಟೆಯ ಸಿಟಿ ಸೆಂಟರ್ ಮಾಲ್ ನ ಕೆಲ ಮಳಿಗೆಗಳ ಮೇಲೂ ದಾಳಿ ನಡೆಸಲಾಯಿತು. ಒಟ್ಟು ನಾಲ್ಕು ಮಳಿಗೆಗಳ ವಿರುದ್ಧ ಕಾನೂನು ಮಾಪನ ಇಲಾಖೆ ಪ್ರಕರಣ ದಾಖಲಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
GST rate irregularity, complaint registered against shops in Mangaluru. People alleges against Big bazar, Hampanakatte City centre.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ