ಮದುವೆ ದಿನವೇ ವರ ಸಾವು, ಸಂಭ್ರಮದ ಮನೆಯಲ್ಲಿ ಸೂತಕ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜುಲೈ 13 : ಮದುವೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದಾಗ ವರ ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ನಡೆದಿದೆ. ಮನೆಯಲ್ಲಿ ಆಯತಪ್ಪಿ ಬಿದ್ದ ವರನನ್ನು ಆಸ್ಪತ್ರೆಗೆ ಸೇರಿಸುವ ಮೊದಲೇ ಸಾನ್ನಪ್ಪಿದ್ದಾನೆ.

ಸುಳ್ಯ ತಾಲೂಕಿನ ಪಂಜ ಗ್ರಾಮದ ಕಂಡೂರಿನಲ್ಲಿ ಈ ಘಟನೆ ನಡೆದಿದೆ. ಸಚಿನ್ (28) ಮೃತಪಟ್ಟ ವರ, ಬುಧವಾರ ಮಧ್ಯಾಹ್ನ 12 ಗಂಟೆಗೆ ಪೈಂದೋಡಿ ದೇವಸ್ಥಾನದಲ್ಲಿ ಸಚಿನ್ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದಕ್ಕೂ ಮೊದಲು ಈ ದುರ್ಘಟನೆ ನಡೆದಿದೆ. [ಪಿಎಂ ಮೋದಿ ಪರ, ವಿರೋಧ ಚರ್ಚೆಯಲ್ಲಿ ನಿಂತು ಹೋದ ಮದುವೆ!]

Groom dies few hours before marriage at Sulya

ಹಸೆಮಣೆ ಏರಲು ಸಿದ್ಧವಾಗಿದ್ದ ಸಚಿನ್ ತನ್ನ ಮನೆಯಲ್ಲಿ ಜಾರಿಬಿದ್ದು ಮೃತಪಟ್ಟಿದ್ದಾರೆ. ಬೆಳಗ್ಗೆ ಮನೆಯಲ್ಲಿ ಶೇವಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಸಚಿನ್ ಆಯತಪ್ಪಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. [ವಿಚ್ಛೇದನ ಪ್ರಕರಣ: ಕರ್ನಾಟಕಕ್ಕೆ 4ನೇ ಸ್ಥಾನ]

ಪಂಜದ ಕಂಡೂರ ಪರಮೇಶ್ವರ ಗೌಡರ ಪುತ್ರ ಸಚಿನ್ ಹಾಗೂ ಎಡಮಂಗಲದ ಹೊನ್ನಪ್ಪಾಡಿ ಬಾಲಕೃಷ್ಣ ಗೌಡರ ಪುತ್ರಿ ಗಾಯತ್ರಿ ಅವರ ವಿವಾಹ ಇಂದು ನಡೆಯಬೇಕಿತ್ತು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಮೌನ ಮನೆ ಮಾಡಿದೆ. [4ನೇ ಮದುವೆಗೆ ಯತ್ನಿಸಿದವನಿಗೆ ಹಿಗ್ಗಾಮುಗ್ಗಾ ಗೂಸಾ!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
28 year old Sachin resident of Sulya, Mangaluru died on his wedding day. Sachin marriage scheduled on Wednesday, July 13, 2016 12 Pm.
Please Wait while comments are loading...