ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೋಡ ಬನ್ನಿ ನವದುರ್ಗೆಯರ ನಮಿಸುವ ಮಂಗಳೂರು ದಸರಾ

|
Google Oneindia Kannada News

ಮಂಗಳೂರು, ಅಕ್ಟೋಬರ್ 13: ಕರಾವಳಿಯ ಸುಂದರ ನಗರ ಮಂಗಳೂರಿನಲ್ಲಿಗ ನವರಾತ್ರಿಯ ಸಂಭ್ರಮ ಸಡಗರ . ವರ್ಷದಿಂದ ವರ್ಷಕ್ಕೆ ಈ ನವರಾತ್ರಿಯ ವೈಭವ ಮಂಗಳೂರಿನಲ್ಲಿ ವೃದ್ದಿಸುತ್ತಲೇ ಇದೆ.

ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಅರಮನೆ ಮೆರಗು ನೀಡಿದರೆ ಮಂಗಳೂರು ದಸರಾಕ್ಕೆ ಕುದ್ರೋಳಿ ಗೋಕರ್ಣನಾಥ ದೇವಾಲಯದ ವಿಶೇಷ ನವರಾತ್ರಿ ಮೆರುಗು ನೀಡುತ್ತದೆ.

ಅನಿತಾ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಭೇಟಿ: ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಅನಿತಾ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಭೇಟಿ: ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ

ಮೈಸೂರಲ್ಲಿ ಚಾಮುಂಡೇಶ್ವರಿ ಅಗ್ರದೇವತೆಯಾದರೆ, ಮಂಗಳೂರು ದಸರಾಕ್ಕೆ ಶಾರದ ಮಾತೆಯೊಂದಿಗೆ ಶಕ್ತಿಯ ಪ್ರತೀಕವಾಗಿರುವ ನವದುರ್ಗೆಯರೇ ಆದಿ. ಇದು ದೂರದ ಮೈಸೂರು ದಸರಾದ ಮೆರಗನ್ನು ತುಳುನಾಡಿನ ಜನರಿಗೆ ಮಂಗಳೂರಿನಲ್ಲಿಯೇ ವೀಕ್ಷಿಸಲು ಅವಕಾಶ ಕಲ್ಪಿಸಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ವಿಜೃಂಭಣೆಯಿಂದ ನಡೆಯುತ್ತೆ ಮಂಗಳೂರು ದಸರಾ

ವಿಜೃಂಭಣೆಯಿಂದ ನಡೆಯುತ್ತೆ ಮಂಗಳೂರು ದಸರಾ

ಮಂಗಳೂರು ದಸರಾ ಉತ್ಸವಕ್ಕೆ ಈಗಾಗಲೇ ಚಾಲನೆ ದೊರೆತಿದೆ. ಮೈಸೂರಿನಂತೆಯೇ ಮಂಗಳೂರು ದಸರಾ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ದಸರಾ ಉತ್ಸವದ ಅಂಗವಾಗಿ ಮಂಗಳೂರಿನ ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ಸ್ವರ್ಗವೇ ಧರೆಗಿಳಿದು ಬಂದಂತೆ ಬಾಸವಾಗುತ್ತಿದೆ. ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ನವದುರ್ಗೆಯರ ಮೂರ್ತಿಗಳು ವಿಶೇಷ ಮೆರಗು ನೀಡಿದೆ. ಮಂಗಳೂರು ದಸರಾದ ವಿಜೃಂಭಣೆ ವಿಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ.

ನವರಾತ್ರಿ ಆರಂಭವಾಗುತ್ತಿದ್ದಂತೆ ತುಳುನಾಡಲ್ಲಿ ಪಿಲಿಗಳ ದರ್ಬಾರ್ ಶುರುನವರಾತ್ರಿ ಆರಂಭವಾಗುತ್ತಿದ್ದಂತೆ ತುಳುನಾಡಲ್ಲಿ ಪಿಲಿಗಳ ದರ್ಬಾರ್ ಶುರು

ಶಾರದಾ ದೇವಿ ಪೂಜೆಯೊಂದಿಗೆ ದಸರಾಕ್ಕೆ ಚಾಲನೆ

ಶಾರದಾ ದೇವಿ ಪೂಜೆಯೊಂದಿಗೆ ದಸರಾಕ್ಕೆ ಚಾಲನೆ

ದಿನಕಳೆದಂತೆ ಕಡಲ ತಡಿಯ ಯಲ್ಲಿ ನವರಾತ್ರಿ ಉತ್ಸವದ ಸಡಗರ ಮುಗಿಲು ಮುಟ್ಟುತ್ತಿದೆ. ವೈಭವೋಪೇತ ವಿಶಿಷ್ಟ ಆಕರ್ಷಣೆಯ ನವರಾತ್ರಿ ಉತ್ಸವಕ್ಕೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ 10 ದಿನದ ದಸರಾ ಉತ್ಸವಕ್ಕೆ ಅಕ್ಟೋಬರ್ 10 ರಂದು ಚಾಲನೆ ನೀಡಲಾಯಿತು. ಮೈಸೂರಿನಲ್ಲಿ ಚಾಮುಂಡೇಶ್ವರಿ ಗೆ ಪೂಜೆ ಸಲ್ಲಿಸುವ ಮೂಲಕ ದಸಾರಾ ಉತ್ಸವಕ್ಕೆ ಚಾಲನೆ ದೊರೆಯುತ್ತದೆ. ಅದರಂತೆ ಶಕ್ತಿಯ ಪ್ರತೀಕವಾದ ನವದುರ್ಗೆಯರೊಂದಿಗೆ ಶಾರದಾ ದೇವಿಯ ಪ್ರತಿಮೆಯನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸುವುದರೊಂದಿಗೆ ಮಂಗಳೂರಿನ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ಇರಾನ್ ನೌಕಾ ಪಡೆಯ ದಿಗ್ಬಂಧನದಲ್ಲಿ ಉತ್ತರ ಕನ್ನಡ, ಉಡುಪಿ ಮೀನುಗಾರರು ಇರಾನ್ ನೌಕಾ ಪಡೆಯ ದಿಗ್ಬಂಧನದಲ್ಲಿ ಉತ್ತರ ಕನ್ನಡ, ಉಡುಪಿ ಮೀನುಗಾರರು

ಲಕ್ಷಾಂತರ ಜನ ಭಾಗಿ

ಲಕ್ಷಾಂತರ ಜನ ಭಾಗಿ

ವಿಶಿಷ್ಟ ಮೆರಗುಗಳೊಂದಿಗೆ ಲಕ್ಷಾಂತರ ಜನರನ್ನು ಮಂಗಳೂರಿನ ದಸರಾ ಮಹೋತ್ಸವ ಆಕರ್ಷಿಸುತ್ತಿದೆ. ಮಂಗಳೂರು ದಸರಾದ ವಿಶಿಷ್ಟ ಆಕರ್ಷಣೆ ನವದುರ್ಗೆಯರ ಪ್ರತಿಷ್ಟಾಪನೆ, ಮಂಗಳೂರಿನ ಕುದ್ರೋಳಿ ದೇವಾಲಯದಲ್ಲಿ ನವದುರ್ಗೆಯರ ದರ್ಶನ ಪಡೆಯುವುದೇ ಕಣ್ಣಿಗೆ ಹಬ್ಬ . ನವದುರ್ಗೆಯರನ್ನು ಪ್ರತಿಷ್ಠಾಪಿಸಲಾದ ಮಂಟಪ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸ ವಾಗುತ್ತಿದೆ.

ಶಕ್ತಿ ರೂಪಗಳ ಆಧಾಧನೆ

ಶಕ್ತಿ ರೂಪಗಳ ಆಧಾಧನೆ

ಶಕ್ತಿ ರೂಪಗಳಾದ ನವದುರ್ಗೆಯರನ್ನು ಪ್ರತಿಷ್ಟಾಪಸಿ ನವರಾತ್ರಿಯನ್ನು ಆಚರಿಸುವುದು ಮಂಗಳೂರು ದಸರಾ ವೈಶಿಷ್ಟ್ಯ. ಶಾರದ ಮಾತೆಯಂದಿಗೆ ಶಕ್ತಿಯ ರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ ಮತ್ತು ಸಿದ್ದಿಧಾತ್ರಿ ಹಾಗೂ ವಿಘ್ನನಿವಾರಕ ಗಣೇಶನನ್ನು ಇಲ್ಲಿ ಪ್ರತಿಷ್ಟಾಪಿಸಿ ವೈಭವಯುತವಾಗಿ 9 ದಿನಗಳ ಕಾಲ ಆರಾಧಿಸಲ್ಪಡುತ್ತಿರುವುದು ಇಲ್ಲಿನ ವೈಶಿಷ್ಟ್ಯ.

ಅಕ್ಟೋಬರ್‌ 20ರ ವರೆಗೆ ನಡೆಯುತ್ತದೆ

ಅಕ್ಟೋಬರ್‌ 20ರ ವರೆಗೆ ನಡೆಯುತ್ತದೆ

ಅಕ್ಟೋಬರ್ 20 ರ ವರೆಗೆ ನಡೆಯುವ ಈ ಮಂಗಳೂರು ದಸರಾ ಉತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದು, ದೇಶ ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.

English summary
Mangaluru Dasara 2018: Managaluru Dasara festival at Shri Gokarnanatha Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X