ಚಪ್ಪಲಿಯಲ್ಲಿ 24 ಲಕ್ಷ ಮೌಲ್ಯದ ಚಿನ್ನ ಸಾಗಿಸಲು ಯತ್ನ

Posted By:
Subscribe to Oneindia Kannada

ಮಂಗಳೂರು, ನವೆಂಬರ್ 27 ; ಅಕ್ರಮ ಸಾಗಾಣಿಕೆಗೆ ಕಿರಾತಕರು ಒಂದಲ್ಲ ಒಂದು ಚಿತ್ರ ವಿಚಿತ್ರ ತಂತ್ರ ಹೆಣೆಯುತ್ತಲೇ ಇರುತ್ತಾರೆ. ಇದಕ್ಕೊಂದು ತಾಜಾ ಉಧಾಹರಣೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅಕ್ರಮ ಚಿನ್ನ ಸಾಗಾಟ ಪತ್ತೆ ಹಚ್ಚಿದ್ದಾರೆ. ಇದರಲ್ಲೇನು ವಿಶೇಷ ಅಂತಿರಾ ಅಲ್ಲೇ ಇರೋದು ವಿಶೇಷ .

Gold smuggling racket busted at Mangalore airport

ನಿನ್ನೆ ದುಬೈಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕನೋರ್ವನ ವರ್ತನೆಯಿಂದ ಕಸ್ಟಮ್ಸ್ ಅಧಿಕಾರಿಗಳು ಸಂಶಯಗೊಂಡಿದ್ದಾರೆ. ತಕ್ಷಣ ಆತನನ್ನು ತನಿಖೆಗೆ ಒಳಪಡಿಸಿದಾಗ ಈ ಅಕ್ರಮ ಚಿನ್ನ ಸಾಗಾಟ ಬಯಲಾಗಿದೆ.

ಕಾಸರಗೋಡು ನಿವಾಸಿ ಅಹ್ಮದ್ ತಾಹೀರ್ ದುಬೈಯಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ IX814 ವಿಮಾನ ಮೂಲಕ ಮಂಗಳೂರಿಗೆ ಬಂದಿಳಿದಿದ್ದ . ತಾಹಿರ್ ವರ್ತನೆ ಬಗ್ಗೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತನಿಖೆಗೆ ಒಳಪಡಿಸಿದ್ದಾರೆ.

Gold smuggling racket busted at Mangalore airport

ಈ ಸಂದರ್ಭದಲ್ಲಿ ತಾಹಿರ್ ಧರಿಸಿದ್ದ ಚಪ್ಪಲ್ ನಲ್ಲಿ ಅಡಗಿಸಿ ಚಿನ್ನ ಸಾಗಾಟ ಪ್ರಕರಣ ಪತ್ತೆಯಾಗಿದೆ. ಚಪ್ಪಲ್ ನ ಸೋಲ್ ನಲ್ಲಿ ತಾಹೀರ್ ಚಿನ್ನದ ಗಟ್ಟಿಗಳನ್ನು ಅಡಗಿಸಿಟ್ಟಿದ್ದ . ಚಪ್ಪಲ್ ನಲ್ಲಿ ಅಡಗಿಸಿ ಇಡಲಾಗಿದ್ದ 804 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ 24 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಹಮ್ಮದ್ ತಾಹಿರ್ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗೆಳು ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The customs officers caught passenger at Mangalore international airport while trying to smuggling gold bars concealed in chappals. customs officials arrested ahamadh thahir from kasargod

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ