ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಕಣ್ಣೂರಿನಲ್ಲಿ ಖಾದರ್ ಕಾರ್ಟಿಂಗ್ ರೇಸ್

ಕೇವಲ ಮೆಟ್ರೋ ಪಾಲಿಟನ್ ನಗರಗಳಲ್ಲಿ ಮಾತ್ರವಿದ್ದ ಕಾರ್ಟಿಂಗ್ ಕ್ರೀಡೆ ಮಂಗಳೂರಿಗೂ ಈಗ ಕಾಲಿಟ್ಟಿದೆ.

|
Google Oneindia Kannada News

ಮಂಗಳೂರು, ಆಗಸ್ಟ್ 25: ಕೇವಲ ಮೆಟ್ರೋ ಪಾಲಿಟನ್ ನಗರಗಳಲ್ಲಿ ಮಾತ್ರವಿದ್ದ ಕಾರ್ಟಿಂಗ್ ಕ್ರೀಡೆ ಮಂಗಳೂರಿಗೂ ಈಗ ಕಾಲಿಟ್ಟಿದೆ. ಮಂಗಳೂರು ನಗರದ ಹೊರವಲಯದ ಕಣ್ಣೂರು ಎಂಬಲ್ಲಿ ಕಾರ್ಟಿಂಗ್ ಟ್ರ್ಯಾಕ್ ಸಿದ್ಧಗೊಂಡಿದ್ದು ಈಗ ರೂಮ್ ರೂಮ್ ಎಂದು ಕಾರ್ಟಿಂಗ್ ಪುಟ್ಟ ವಾಹನಗಳು ಸದ್ದು ಮಾಡುತ್ತಿದೆ. ಈ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ ಸಚಿವ ಯುಟಿ ಖಾದರ್ ಕಾರ್ಟಿಂಗ್ ರೇಸ್ ಮಾಡುವ ಮೂಲಕ ಜನರ ಮನಸ್ಸನ್ನು ಸೆಳೆದರು.

ಕೆಫೆ ಕಾರ್ಟಿಂಗ್ ಎಂಬ ಮಂಗಳೂರು ಮೂಲದ ಸಂಸ್ಥೆ ಈ ಕ್ರೀಡೆಯನ್ನು ಮಂಗಳೂರಿಗೆ ತರುವಲ್ಲಿ ಯಶಸ್ವಿಯಾಗಿದೆ. ಕಾರ್ಟಿಂಗ್ ಪ್ರಿಯರು ನಗರದಲ್ಲಿ ಯಾವುದೇ ಕಾರ್ಟಿಂಗ್ ವ್ಯವಸ್ಥೆ ಇಲ್ಲದೇ ಇದ್ದ ಕಾರಣ ಮುಂಬೈ, ಚೆನ್ನೈ, ಹಾಗೂ ಬೆಂಗಳೂರಿಗೆ ಹೋಗಿ ಕಾರ್ಟಿಂಗ್ ರೇಸ್ ಮಾಡುತ್ತಿದ್ದರು. ಇದನ್ನೆಲ್ಲಾ ಅರಿತ ಕೆಫೆ ಕಾರ್ಟಿಂಗ್ ಸಂಸ್ಥೆ ಈ ಕ್ರೀಡೆಯನ್ನು ಪ್ರಪ್ರಥಮ ಬಾರಿಗೆ ಕುಡ್ಲದಲ್ಲಿ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ.

Go Karting car race now in Mangaluru

ಇನ್ನು ಒನ್ ಇಂಡಿಯಾ ಕನ್ನಡ ಜೊತೆಗೆ ಮಾತನಾಡಿದ ಸಂಸ್ಥಾಪಕ ಈಶನ್ ಚಂದ್ರ, ಕಾರ್ಟ್ ಗಳು ವಿಭಿನ್ನ ವೇಗದಲ್ಲಿ ಚಲಿಸುತ್ತವೆ. ಕೆಲವು ಸೂಪರ್ ಕಾರ್ಟ್ ಗಳು ಗಂಟೆಗೆ 160 ಕಿಲೋಮೀಟರ್ ನಿಂದ 200 ಕಿಲೋಮೀಟರ್ ಹೆಚ್ಚಿನ ವೇಗ ತಲುಪಬಲ್ಲದು. ಕಾರ್ ರೇಸಿಂಗ್ ಅಥವಾ ಫಾರ್ಮುಲಾ ಒನ್ ರೇಸ್ ಗೆ ಸಿದ್ಧತೆಗೆ ಈ ಕಾರ್ಟಗಳು ಮೊದಲ ಮೆಟ್ಟಿಲು ಎಂದು ತಿಳಿಸಿದ್ದರು.

Go Karting car race now in Mangaluru

ಶ್ರೀಮಂತರ ಕ್ರೀಡೆ ಅನ್ನು ಹಣೆಪಟ್ಟಿ ಈ ಕಾರ್ಟ ಇದ್ದರೂ ಮಂಗಳೂರಿನಲ್ಲಿ ಕೇವಲ 100 ರೂಪಾಯಿಗೆ ಒಂದು ಗಂಟೆ ಕಾರ್ಟ್ ಓಡಿಸಬಹುದಾಗಿದೆ.

Go Karting car race now in Mangaluru

ಕಾರ್ಟಿಂಗ್ ರೇಸ್ ಒಂದು ರೋಮಾಂಚಕ ಕ್ರೀಡೆ. ಮಂಗಳೂರಿನಲ್ಲಿ ಕಾರ್ಟಿಂಗ್ ಪ್ರಿಯರು ಸಾಕಷ್ಟು ಮಂದಿ ಇದ್ದಾರೆ ಅವರಿಗೆಲ್ಲಾ ಒಳ್ಳೆಯ ಅವಕಾಶ ಕಲ್ಪಿಸಿರುವ ಕೆಫೆ ಕಾರ್ಟಿಂಗ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

English summary
Go Karting race sports now gets launched by minister UT Khaer in Mangaluru by a private company called Cafe Karting at Kannur here on Aug 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X