ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಲೇಜು ಯುವತಿಯರ ಡ್ರೆಸ್ ನಲ್ಲಿ ಭಿಕ್ಷಾಟನೆ : ದುಡ್ಡು ಕೊಡೊ ಮುನ್ನ ಎಚ್ಚರ!

By ಮಂಗಳೂರು ಪ್ರತಿನಿಧಿ
|
Google Oneindia Kannada News

Recommended Video

ಹುಡುಗಿಯರ ತಂಡವೊಂದು ಕಾಲೇಜು ಹುಡುಗಿಯರ ಹಾಗೆ ಬಂದು ಭಿಕ್ಷೆ ಬೇಡ್ತಾರೆ ಎಚ್ಚರ! | Oneindia Kannada

ಮಂಗಳೂರು, ಆಗಸ್ಟ್.03: ನೀಟಾಗಿ ಕಾಲೇಜು ಹುಡುಗಿಯರ ತರ ಡ್ರೆಸ್ ಮಾಡಿಕೊಂಡು ಭಿಕ್ಷೆ ಬೇಡುತ್ತಿರುವ ಹುಡುಗಿಯರ ತಂಡವೊಂದು ಮಂಗಳೂರಿನಲ್ಲಿ ಸಕ್ರಿಯವಾಗಿದ್ದು, ಸಾರ್ವಜನಿಕರು ಇವರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂಬ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಚ್ಚುಕಟ್ಟಾಗಿ ಬಟ್ಟೆ ಧರಿಸಿ, ಟೈ ಕಟ್ಟಿ ಕೂದಲಿಗೆ ಬಣ್ಣ ಹಚ್ಚಿ ಹಣ ಕೇಳಲು ಬರುವ ಈ ಹುಡುಗಿಯರು ತಾವು ರಾಜಸ್ಥಾನದ ರಾಣಿಪುರದವರು ಎಂದು ಹೇಳಿಕೊಂಡ ತಂಡ ಭಿಕ್ಷಾಟನೆಯಲ್ಲಿ ಸಕ್ರಿಯವಾಗಿದೆ.

ಭಿಕ್ಷೆ ಬೇಡುವ ಮಹಿಳೆಯರ ಕಂಕುಳಲ್ಲಿನ ಮಕ್ಕಳು ಏಕೆ ಸದಾ ಮಲಗಿರ್ತವೆ?ಭಿಕ್ಷೆ ಬೇಡುವ ಮಹಿಳೆಯರ ಕಂಕುಳಲ್ಲಿನ ಮಕ್ಕಳು ಏಕೆ ಸದಾ ಮಲಗಿರ್ತವೆ?

ತಮ್ಮ ಊರಿನಲ್ಲಿ ನೆರೆ ಬಂದಿದ್ದು, ಆಸ್ತಿ ಪಾಸ್ತಿ ಕಳೆದುಕೊಂಡಿದ್ದೇವೆ , ಆಹಾರ, ಬಟ್ಟೆ ಬರೆ ಇಲ್ಲದೆ ಸಂತ್ರಸ್ಥರಾಗಿದ್ದು , ಹಣ ಸಹಾಯ ಮಾಡಿ ಎಂದು ಝೆರಾಕ್ಸ್ ಪ್ರತಿಯೊಂದನ್ನು ಹಿಡಿದು ಮಂಗಳೂರು ನಗರದೆಲ್ಲಡೆ ತಿರುಗಾಡುತ್ತಿದ್ದಾರೆ.

Girls team is dressed up like a college girls and begging

ಹೆಚ್ಚಾಗಿ ಕಾಲೇಜು ಯುವಕ ಯುವತಿಯರು ಇರುವ ಸ್ಥಳಗಳಲ್ಲಿ ಕಾಣ ಸಿಗುವ ಇವರು ನೆರೆ ಸಂತ್ರಸ್ಥರು ಎಂದು ಭಿಕ್ಷಾಟನೆ ಮಾಡುತ್ತಾರೆ.

ಇದರ ಬಗ್ಗೆ ವಿಡಿಯೋ ಮಾಡಿ , ನಗರದ ಸೌರಜ್ ಎನ್ನುವವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಿಡಿಯೋ ಪ್ರಕಟಿಸಿ ಅದರ ಬಗ್ಗೆ ಮಾಹಿತಿ ನೀಡಿದ್ದಾರೆ. ಸೌರಜ್ ಅವರು ಹೇಳುವ ಪ್ರಕಾರ ಸುಮಾರು 8 ತಿಂಗಳಿನಿಂದ ಇಂತಹವರು ನಗರದಲ್ಲಿ ತಿರುಗಾಡುತ್ತಿದ್ದಾರೆ.

ಭಿಕ್ಷಾಟನೆ ಜಾಲದಿಂದ ಬಿಹಾರ ಮಕ್ಕಳು ಬಚಾವ್ಭಿಕ್ಷಾಟನೆ ಜಾಲದಿಂದ ಬಿಹಾರ ಮಕ್ಕಳು ಬಚಾವ್

ವ್ಯಕ್ತಿಯೋರ್ವ 100 ರೂಪಾಯಿ ನೀಡಿದರೆ, ತಮ್ಮ ಬಳಿ ಇರುವ ಜೆರಾಕ್ಸ್ ಪ್ರತಿಯಲ್ಲಿ ಅದನ್ನು 1 ಸಾವಿರ ಎಂದು ಬರೆದುಕೊಳ್ಳುತ್ತಾರೆ. ಅದೇ ಪ್ರತಿಯನ್ನು ಇನ್ನೊಬ್ಬ ವ್ಯಕ್ತಿಗೆ ತೋರಿಸಿ ಇನ್ನೂ ಹೆಚ್ಚಿನ ಹಣ ಪಡೆಯಬಹುದು ಎನ್ನುವುದು ಈ ತಂಡದ ಲೆಕ್ಕಾಚಾರ.

Girls team is dressed up like a college girls and begging

ಈ ಹುಡುಗಿಯರ ಬಳಿ ಯಾವುದೇ ಪೊಲೀಸ್ ರಿಂದ ಪಡೆದ ಅನುಮತಿ ಪತ್ರವಾಗಲೀ, ಗುರುತಿನ ಚೀಟಿಯಾಗಲೀ ಇಲ್ಲ. ನೆರೆ ಸಂತ್ರಸ್ಥರು ಎಂದು ಹೇಳಿ ಭಿಕ್ಷಾಟನೆ ಮಾಡುತ್ತಿದ್ದ ಈ ಯುವತಿಯರ ವಿರುದ್ದ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿ ಬಿಡಲಾಗಿದೆ.

English summary
Girls team is dressed up like a college girls and begging in Mangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X