ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೂಮಿಯಡಿಯಿಂದ ಕೇಳಿ ಬರುತ್ತಿರುವ ಶಬ್ದ: ನಿರ್ಲಕ್ಷ್ಯ ಬೇಡ ಎಂದ ತಜ್ಞರು

|
Google Oneindia Kannada News

ಮಂಗಳೂರು, ಆಗಸ್ಟ್ 30: ಕೊಡಗು ಗಡಿಭಾಗದಲ್ಲಿ ಭೂಮಿಯಿಂದ ಕೇಳಿಬರುತ್ತಿರುವ ಶಬ್ದದ ಬಗ್ಗೆ ತಜ್ಞರು ಸಹ ಆತಂಕ ವ್ಯಕ್ತಪಡಿಸಿದ್ದಾರೆ. ಇದುವರೆಗೂ ಭೂಮಿಯಡಿಯಲ್ಲಿ ನದಿ ಹರಿಯುವ ಭಾರೀ ಶಬ್ದದಿಂದ ಜನರು ಆತಂಕಿತರಾಗಿದ್ದರು. ಕೊಡಗು ಜಿಲ್ಲೆಯ ಗಡಿ ಭಾಗದ ಕೆಲ ಪ್ರದೇಶ ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಳೂಕಿನ ಗಡಿಭಾಗದ ಕೆಲ ಪ್ರದೇಶಗಳಲ್ಲಿ ಭೂಮಿಯಡಿಯಿಂದ ರಭಸವಾಗಿ ನೀರು ಹರಿಯುತ್ತಿರುವ ನಿಗೂಢ ಶಬ್ದ ಕೇಳಿ ಬಂದಿತ್ತು.

ಕೊಡಗು ಜಿಲ್ಲೆಯ ಗಡಿಭಾಗದ ಭಾಗಮಂಡಲ ಸಮೀಪದ ಕರಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭೂಮಿ ಅಡಿಯಿಂದ ಇಂತಹ ಶಬ್ದ ಕೇಳಿಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಜನರು ಅತಂಕಿತರಾಗಿದ್ದರು.

ಕೊಡಗು ಗಡಿಭಾಗದಲ್ಲಿ ಭೂಮಿಯಡಿಯಿಂದ ಮತ್ತೆ ಕೇಳಿಬರುತ್ತಿದೆ ನದಿ ಹರಿಯುವ ಶಬ್ದ!ಕೊಡಗು ಗಡಿಭಾಗದಲ್ಲಿ ಭೂಮಿಯಡಿಯಿಂದ ಮತ್ತೆ ಕೇಳಿಬರುತ್ತಿದೆ ನದಿ ಹರಿಯುವ ಶಬ್ದ!

ಕರಿಕೆ ಪ್ರದೇಶದ ಭೂಮಿಯ ಅಡಿಯಿಂದ ನೀರು ಹರಿಯುತ್ತಿರುವ ಶಬ್ದ ನಿರಂತರವಾಗಿ ಕೇಳಿ ಬರುತಿದ್ದು, ಅನಾಹುತ ಸೃಷ್ಟಿಸಬಹುದೇ ಎಂಬ ಅನುಮಾನ ಕರಿಕೆ, ಭಾಗಮಂಡಲದ ಜನರನ್ನು ಕಾಡಲಾರಂಭಿಸಿತ್ತು. ಈ ಆತಂಕಕ್ಕೆ ತಜ್ಞರ ಅಭಿಪ್ರಾಯ ಕೂಡ ಪುಷ್ಠಿ ನೀಡುತ್ತಿವೆ.

ಸುರತ್ಕಲ್ ಎನ್‌ ಐ ಟಿ ಕೆ ಯ ಜಲ ಸಂಪನ್ಮೂಲ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗು ಭೂ ತಜ್ಞ ಪ್ರೊ.ಎಸ್ ಜಿ ಮಯ್ಯ ಈ ಘಟನೆಯ ಬಗ್ಗೆ ಓನ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಭಾಗದಲ್ಲಿ ಸುರಿದ ಭಾರೀ ಮಳೆಗೆ ಭೂಮಿಯಲ್ಲಿ ಇಂಗಿರುವ ಭಾರೀ ಪ್ರಮಾಣದ ಮಳೆ ನೀರು ನದಿಯಾಗಿ ಕರಿಕೆ, ಭಾಗಮಂಡಲ ಭಾಗದಲ್ಲಿ ಭೂಮಿಯ ಒಳ ಪದರದಲ್ಲಿ ಹರಿಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಡಗು: ನಿಗೂಢ ಶಬ್ದಕ್ಕೆ ಕಾರಣ ಹುಡುಕಿದ್ದಾರೆ ವಿಜ್ಞಾನಿಗಳುಕೊಡಗು: ನಿಗೂಢ ಶಬ್ದಕ್ಕೆ ಕಾರಣ ಹುಡುಕಿದ್ದಾರೆ ವಿಜ್ಞಾನಿಗಳು

ಈ ಕೂಡಲೇ ತುರ್ತಾಗಿ ಈ ಭಾಗದಲ್ಲಿ ಅಧ್ಯಯನ ನಡೆಯಬೇಕಾಗಿದೆ. ಈ ನದಿ ಹರಿಯುವ ಶಬ್ದದ ಕುರಿತು ನಿರ್ಲಕ್ಷ್ಯ ತಾಳಿದಲ್ಲಿ ಮತ್ತೊಂದು ದುರಂತ ಸಂಭವಿಸಬಹುದೆಂದು ಎಚ್ಚರಿಸಿದ್ದಾರೆ. ಈ ಕುರಿತ ಚಿಕ್ಕ ವರದಿ ಇಲ್ಲಿದೆ...

 ಭಾರೀ ಪ್ರಮಾಣದಲ್ಲಿ ನೀರು ನದಿಯಾಗಿ ಹರಿಯುತ್ತಿದೆ

ಭಾರೀ ಪ್ರಮಾಣದಲ್ಲಿ ನೀರು ನದಿಯಾಗಿ ಹರಿಯುತ್ತಿದೆ

ಭೂಮಿಯಡಿಯಲ್ಲಿ ಅಂತರ್ಜಲ ಇರುವುದು. ಶೇಖರವಾಗುವುದು ಸಹಜ . ಆದರೆ ಭೂಮಿ ಮೇಲೆ ಅದರ ಶಬ್ದ ಕೇಳಿಬರುವುದಿಲ್ಲ. ಭೂ ಪದರದ ಅತ್ಯಂತ ಹತ್ತಿರದಲ್ಲಿ ಭಾರೀ ಪ್ರಮಾಣದಲ್ಲಿ ನೀರು ನದಿಯಾಗಿ ಹರಿಯುತ್ತಿದ್ದರೆ ಮಾತ್ರ ಈ ರೀತಿಯ ಶಬ್ದ ಬರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 ನಿರ್ಲಕ್ಷಿಸಿದರೆ ದುರಂತ ಸಂಭವ

ನಿರ್ಲಕ್ಷಿಸಿದರೆ ದುರಂತ ಸಂಭವ

ಶಬ್ದ ಬರುತ್ತಿರುವ ಪ್ರದೇಶ ಇಳಿಜಾರು ಪ್ರದೇಶವಾಗಿದ್ದು, ಪಶ್ಚಿಮ ಘಟ್ಟದ ಪಶ್ಚಿಮ ಮಗ್ಗುಲಾಗಿದೆ . ಬೆಟ್ಟದ ಮೇಲೆ ಬಿದ್ದ ನೀರು ಭೂಮಿಯಲ್ಲಿ ಇಂಗಿ ಅಂತರ್ಜಲವಾಗಿ ಶೇಖರ ಗೊಂಡು ನಂತರ ಇಳಿಜಾರು ಭಾಗದಲ್ಲಿ ಹರಿಯುತ್ತಿದೆ. ಕರಿಕೆ ಪ್ರದೇಶದಲ್ಲಿ ಕೇಳಿಬರುತ್ತಿರುವ ಶಬ್ದ ನೀರಿನ ಒರತೆಯದ್ದಾಗಿದ್ದರು ದೊಡ್ಡ ಪ್ರಮಾಣದಲ್ಲಿ ಹರಿಯುತ್ತಿದೆ ಹಾಗಾಗಿ ಶಬ್ದ ಕೇಳಿಬರುತ್ತಿದೆ.

ಈ ರೀತಿ ಭಾರೀ ಪ್ರಮಾಣದಲ್ಲಿ ಭೂಮಿ ಅಡಿಯಲ್ಲಿ ನೀರು ಹರಿಯುವುದು ಅತ್ಯಂತ ಅಪಾಯಕಾರಿ. ಈ ಬಗ್ಗೆ ತುರ್ತಾಗಿ ಅಧ್ಯಯನ ನಡೆಸಬೇಕು. ನಿರ್ಲಕ್ಷಿಸಿದರೆ ದುರಂತ ಸಂಭವಿಸುವ ಆತಂಕ ವ್ಯಕ್ತಪಡಿಸಿದರು .

 ವಿಜ್ಞಾನಿಗಳಿಂದಲೂ ಎಚ್ಚರಿಕೆ

ವಿಜ್ಞಾನಿಗಳಿಂದಲೂ ಎಚ್ಚರಿಕೆ

ಭೂಮಿ ಅಡಿಯಿಂದ ಶಬ್ದ ಕೇಳಿಬರುತ್ತಿರುವ ಪ್ರದೇಶದ ಅಕ್ಕ ಪಕ್ಕದಲೆಲ್ಲೂ ನದಿ, ತೊರೆ ಹಳ್ಳ ಗಳಿಲ್ಲ. ಆದರೂ ತೊರೆಯೊಂದು ತುಂಬಿ ಹರಿಯುವಂತಹ ಶಬ್ದ ಭೂಮಿಯ ಅಳ ದಿಂದ ಕೇಳಿ ಬರುತ್ತಿರುವ ಬಗ್ಗೆ ಎನ್ ಐ ಟಿ ಕೆ ಮತ್ತೊಬ್ಬ ಸಹಾಯಕ ಪ್ರಾಧ್ಯಾಪಕ ಅನನ್ಯ ವಾಸುದೇವ್ ಎಂ ಆರ್ ಕೂಡ ಆತಂಕ ವ್ಯಕ್ತ ಪಡಿಸಿದ್ದಾರೆ. ಆ ಪ್ರದೇಶದ ಜನರನ್ನು ಸ್ಥಳಾಂತರಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

 ದುರಂತಕ್ಕೆ ಮೊದಲು ಕೇಳಿ ಬಂದ ಶಬ್ದ

ದುರಂತಕ್ಕೆ ಮೊದಲು ಕೇಳಿ ಬಂದ ಶಬ್ದ

ಮಡಿಕೇರಿ ತಾಲೂಕಿನ ಕರಿಕೆ ಭಾಗ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಡತ್ತಿಕಾನ ನಿವಾಸಿಯಾದ ಕೇಶವ ನಾಯ್ಕ ಅವರ ಮನೆ ಬಳಿ ಈ ಸದ್ದು ಕೇಳಿ ಬರುತ್ತಿದೆ. ಇದು ಆ ಭಾಗದ ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು.

ಆಗಸ್ಟ್ 16 ಮತ್ತು 17 ರಂದು ಕೊಡಗಿನ ಗಡಿಭಾಗ ಜೋಡುಪಾಲ, ಮದೆನಾಡಿನಲ್ಲಿ ಜಲಸ್ಫೋಟ ಸೇರಿದಂತೆ ಭಾರೀ ಭೂ ಕುಸಿತ ಸಂಭವಿಸುವ ಮೊದಲು ಇದೇ ರೀತಿ ಶಬ್ದ ಕೇಳಿಬಂದಿತ್ತು.
ಜೋಡುಪಾಲದ ನಿವಾಸಿ ಶಿಶಿರ ಈ ಹಿಂದೆ ನೀಡಿದ್ದ ಮಾಹಿತಿಯ ಪ್ರಕಾರ ದುರಂತ ಸಂಭವಿಸುವ ಮೊದಲು ಅ ಭಾಗದ ಭೂಮಿಯಡಿ ನೀರು ಹರಿಯುವ, ರೈಲು ಓಡಿದ ಭಾರೀ ಸದ್ದು ಕೇಳಿಬಂದಿತ್ತು.

English summary
Mysterious sound of flowing water inside the earth observed near Karike of Kodagu. Geologists said that it is sure of soil piping and dangers situation of landslide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X