ಉಪ್ಪಿನಂಗಡಿ ಬಳಿ ಟ್ಯಾಂಕರ್ ಪಲ್ಟಿ ಅನಿಲ ಸೋರಿಕೆಯ ಭೀತಿ

Posted By:
Subscribe to Oneindia Kannada

ಉಪ್ಪಿನಂಗಡಿ, ಜನವರಿ 10: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಶಿರಾಡಿ ಘಾಟಿಯ ಕೊಡ್ಯಕಲ್ಲು ಎಂಬಲ್ಲಿ ಅನಿಲ ಸಾಗಾಟದ ಟ್ಯಾಂಕರ್ ಮಗುಚಿ ಬಿದ್ದು ಅನಿಲ ಸೋರಿಕೆಯ ಭೀತಿ ಎದುರಾಗಿದೆ.

ಹಾಸನ: ಅನಿಲ ಸೋರಿಕೆಯಾಗಿ 20ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ

ಟ್ಯಾಂಕರ್ ಮುಗುಚಿ ಬಿದ್ದಿರುವ ಸ್ಥಳದಿಂದ 300ಮೀಟರ್ ವ್ಯಾಪ್ತಿಯಲ್ಲಿ ಗ್ಯಾಸ್ ವಾಸನೆ ಹರಡಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಎಂಆರ್ ಪಿಎಲ್ ಅಧಿಕಾರಿಗಳು ಭೇಟಿ ನೀಡಿದ್ದು ಅಪಾಯ ಸಂಭವಿಸದಂತೆ ಕ್ರಮಗಳನ್ನು ಕೈಗೊಂಡಿದ್ದಾರೆ. ಅನಿಲ ಸೋರಿಕೆಯ ಭೀತಿ ಹಿನ್ನೆಲೆಯಲ್ಲಿ 1 ಕೀ ಮಿ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಸಂಕ್ರಾಂತಿ ವಿಶೇಷ ಪುಟ

ಮುಗುಚಿರುವ ಅನಿಲ ಟ್ಯಾಂಕರ್‌ಗೆ ನೀರು ಸಿಂಪಡಿಸಿ ವಿಷಕಾರಿ ಅನಿಲ ದುರ್ಬಲಗೊಳಿಸುವ ಪ್ರಯತ್ನವನ್ನು ಅಗ್ನಿ ಶಾಮಕ ಸಿಬ್ಬಂದಿ ಮಾಡುತ್ತಿದ್ದಾರೆ.

Gas Tanker collapse in Shiradi Ghat

ಟ್ಯಾಂಕರ್ ಮುಗುಚಿರುವುದರಿಂದ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಸೋರಿಕೆ ಯಾಗುತ್ತಿರುವ ಅಡುಗೆ ಅನಿಲ ಪಕ್ಕದಲ್ಲೇ ಇರುವ ಹೊಳೆ ಸೇರುವ ಭೀತಿ ಎದುರಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gas Tanker collapse in Shiradi Ghat and gas spreads around the area. Fire workers trying to dilute the gas by sprinkling water.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ