ಬೆಳ್ತಂಗಡಿಯಲ್ಲಿ ಗ್ಯಾಂಗ್ ವಾರ್: ಮೂವರಿಗೆ ಗಂಭೀರ ಗಾಯ

Posted By:
Subscribe to Oneindia Kannada

ಮಂಗಳೂರು, ಡಿಸೆಂಬರ್ 05 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಗ್ಯಾಂಗ್ ವಾರ್ ನಡೆದಿದೆ.ಮಸೀದಿ ವಿಚಾರದಲ್ಲಿ ಎರಡು ತಂಡಗಳ ನಡುವೆ ಮನಸ್ತಾಪದ ಹಿನ್ನೆಲೆಯಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದಿದೆ

ಬೆಳ್ತಂಗಡಿಯಲ್ಲಿ ಯುವಕರಿಬ್ಬರಿಗೆ ಥಳಿತ, ಮರುಕಳಿಸಿದ ನೈತಿಕ ಪೊಲೀಸ್ ಗಿರಿ

ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. ಸೋಮವಾರ(ಡಿ.04) ರಾತ್ರಿ ಈ ಘಟನೆ ನಡೆದಿದ್ದು. 10 ಜನರ ತಂಡ 3 ಯುವಕರ ಮೇಲೆ ದಾಳಿ ನಡೆಸಿದೆ. ಲಾಂಗು ಮಚ್ಚುಗಳಿಂದ ತಂಡ ದಾಳಿ ನಡೆಸಿದದ್ದು ಗೇರುಕಟ್ಟೆ ಬಸ್ ಸ್ಟಾಂಡ್ ಬಳಿ ಸಾರ್ವಜನಿಕರ ಎದುರೇ ಗ್ಯಾಂಗ್ ವಾರ್ ನಡೆದಿದೆ.

Gang war in Belthangady . 3 hospitalised with serious injuries

ಘಟನೆಯಲ್ಲಿ 3 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಸ್ಲೀಂ,ಹಾರಿಸ್,ಶಿಹಾಬ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮಂಗಳೂರು ಖಾಸಾಗಿ ಆಸ್ಪತ್ರೆ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಯಾಕೂಬ್,ಉಮರಬ್ಬ, ರವೂಫ್,ಇರ್ಫಾನ್

ರಿಝ್ವಾನ್, ಅಬೂಬಕರ್, ಆದಂ ಶಾಫಿ ,ಹೈದರ್ ಎಂಬವರು ಈ ತಲವಾರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಸೀದಿಯ ವಿಚಾರದಲ್ಲಿ ಎರಡೂ ತಂಡಗಳ ನಡುವೆ ಮನಸ್ತಾಪ ವಿದ್ದು ಮೊನ್ನೆ ಭಾನುವಾರದಂದು ಈ ಎರಡು ತಂಡಗಳ ನಡುವೆ ಘರ್ಷಣೆ ಸಂಭವಿಸಿತ್ತು ಎಂದು ಹೇಳಲಾಗಿದೆ. ಈ ಘಟನೆಯ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gang war in Belthangady . 3 hospitalised with serious injuries.Again gang war reported in DK.The gang war broke out between two groups in Gerukatte near Belthangady.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ