ನಿಧಿ ಆಸೆಗೆ ಮನೆ ಮಂದಿಯನ್ನು ಕಟ್ಟಿ ಹಾಕಿದ ಭಲೇ ಕಿಲಾಡಿಗಳು!

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ. 24 : ಇದೇ ಬಂಟ್ವಾಳದಲ್ಲಿ ಇತ್ತೀಚೆಗೆ ನಿಧಿ ಹುಡುಕುವ ಭರದಲ್ಲಿ ಹುತ್ತವನ್ನು ಅಗೆದಿದ್ದ ಕದೀಮರ ಸುದ್ದಿಯನ್ನು ನಾವು ನಿಮಗೆ ತಿಳಿಸಿದ್ವಿ,

ಈಗ ಮತ್ತೊಂದು ವಿಷ್ಯಾ ಅಂದ್ರೆ ಈ ನಿಧಿ ಆಸೆಗೆ ಮನೆಯವರನ್ನು ಕಟ್ಟಿ ಹಾಕಿ ಅವರ ಮನೆಯ ನೆಲ ಅಗೆದಿರುವ ಘಟನೆ ಮಂಗಳವಾರ ನಸುಕಿನ ಜಾವ ಬಂಟ್ವಾಳ ತಾಲೂಕಿನ ವಿಟ್ಲದ ಕರೋಪಡಿಯಲ್ಲಿ ನಡೆದಿದೆ.[ಬಂಟ್ವಾಳದಲ್ಲಿ ನಿಧಿಗಾಗಿ ನಾಗರ ಹುತ್ತವನ್ನೇ ಅಗೆದ ಕಳ್ಳರು!]

Gang ties up family, hunts for 'hidden treasure' at Bantwal

ಇನ್ನೊವಾ ಕಾರಿನಲ್ಲಿ ಬಂದ 9 ಜನರ ತಂಡವೊಂದು ಕರೋಪಾಡಿಯ ವಿಘ್ನರಾಜ್ ಭಟ್ ಎಂಬುವರ ಮನೆಗೆ ನುಗ್ಗಿ ನಿಧಿ ಎಲ್ಲಿದೆ ಎಂದು ಬೆದರಿಸಿ ಮನೆಯವರನ್ನು ಅವರನ್ನು ಕಟ್ಟಿ ಹಾಕಿದ್ದಾರೆ.

ಬಳಿಕ ಅವರ ಮನೆಯ ಹೊರಭಾಗದ ಗೇಟಿನ ಬಳಿ ನೆಲವನ್ನು ಅಗೆದು ನಿಧಿ ಹುಡುಕಾಡಿದ್ದಾರೆ. ಆದರೆ, ಏನೂ ಸಿಗದೆ ಬರಿಗೈಲಿ ವಾಪಾಸ್ಸಾಗಿದ್ದಾರೆ.

ದುಷ್ಕರ್ಮಿಗಳು ಕನ್ನಡ, ಹಿಂದಿ, ಮಲಯಾಳಿ ಭಾಷೆಯನ್ನು ಮಾತನಾಡುತ್ತಿದ್ದರು ಎಂದು ವಿಘ್ನರಾಜ್ ಭಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In an incident which happened at Bantwal taluk in the early hours of Tuesday January 24, a gang threatened the people of the house and tied them up. The gang apparently had come there with the hope of unearthing a hidden treasure.
Please Wait while comments are loading...