ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಸರ್ಜನೆಯ ಬಳಿಕವೂ ಗಿಡವಾಗಿ ನೆಲೆ ನಿಲ್ಲುವ ಪರಿಸರ ಸ್ನೇಹಿ ಗಣಪ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 11: ಹಿಂದೂಗಳ ಮಹತ್ವದ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿ ಬಂದೇ ಬಿಟ್ಟಿದೆ. ಪ್ರಥವ ಪೂಜಿತನ ಆಗಮನಕ್ಕಾಗಿ ನಾಡಿನಾದ್ಯಂತ ಜನರು ಕಾತರದಿಂದ ಕಾಯುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಯಾವುದೇ ಪೂಜೆ ಅಥವಾ ಕಾರ್ಯಕ್ರಮಗಳು ನಡೆಯುವುದಿದ್ದರೂ ಮೊದಲ ಪೂಜೆ ಸಲ್ಲಬೇಕಾಗಿರುವುದು ಗಣಪನಿಗೆ.

ಸೆಪ್ಟೆಂಬರ್ 13 ರಂದು ಮನೆಗೆ ಬರಲಿರುವ ಗಣಪನಿಗಾಗಿ ಸತತ ತಯಾರಿಗಳು ಜೋರಾಗಿಯೇ ನಡೆಯುತ್ತಿದೆ. ಗಣೇಶನನ್ನು ತಂದು ಭಕ್ತಿಯಿಂದ ಪೂಜಿಸಿ ವಿಸರ್ಜನೆ ಸಂದರ್ಭದಲ್ಲಿ ಮನಸ್ಸಿನಲ್ಲಿ ಏನೋ ಸಂಕಟ. ಅದರಲ್ಲೂ ಪುಟ್ಟ ಮಕ್ಕಳಿಗೆ ಪ್ರಥಮ ಪೂಜಿತ ಗಣಪತಿ ಯನ್ನು ವಿಸರ್ಜಿಸುವುದೆಂದರೆ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ.

ಗಣೇಶನ ಮೂರ್ತಿಯನ್ನು ನೀರಲ್ಲಿ ಮುಳುಗಿಸೋದು ಯಾಕೆ ಗೊತ್ತಾ?ಗಣೇಶನ ಮೂರ್ತಿಯನ್ನು ನೀರಲ್ಲಿ ಮುಳುಗಿಸೋದು ಯಾಕೆ ಗೊತ್ತಾ?

ಆದರೆ ಪೂಜಿಸಿ ಗಣೇಶ ವಿಸರ್ಜನೆ ಬಳಿಕ ಗಿಡವಾಗಿ ಮತ್ತೆ ಉದ್ಭವಿಸಿದರೆ ಹೇಗೆ?. ಹೀಗೊಂದು ಪರಿಕಲ್ಪನೆಯೇ ಅದ್ಬುತ . ಇಂತಹ ಪರಿಸರ ಸ್ನೇಹಿ ಗಣೇಶನ ಪರಿಕಲ್ಪನೆಯೊಂದಿಗೆ ಮಂಗಳೂರಿನ ರಾಷ್ಟ್ರೀಯ ಪರಿಸರ ಆಸಕ್ತರ ಒಕ್ಕೂಟ ಈ ಬಾರಿಯೂ ಜಾಗೃತಿ ಮೂಡಿಸುತ್ತಿದೆ.

Ganesha idols encased with saplings

ಸಾಮಾಜಿಕ ಜಾಲತಾಣದ ಮೂಲಕ ಪರಿಸರ ಸ್ನೇಹಿ ಗಣಪನನ್ನು ಪೂಜಿಸಿ ಎಂದು ಸಂದೇಶ ಸಾರುತ್ತಿದೆ. ಪುರಾಣಗಳ ಪ್ರಕಾರ ದೇವಸ್ಥಾನಗಳಲ್ಲದೆ ಬೇರೆಲ್ಲೇ ಆದರೂ ಪೂಜೆ ಮುಗಿದ ಬಳಿಕ ತಕ್ಷಣ ಮಣ್ಣಿನ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವ ಪರಿಪಾಠವಿದೆ.

ಮಣ್ಣಿನಿಂದ ರೂಪ ತಾಳಿದ್ದು ಮತ್ತೆ ಮಣ್ಣಿಗೆ ಸೇರಲೇಬೇಕೆಂಬ ನೀತಿಯೂ ಇದರಲ್ಲಿದೆ. ಹಿಂದೆ ಜೇಡಿ ಮಣ್ಣಿನಿಂದ ಗಣೇಶನ ವಿಗ್ರಹಗಳನ್ನು ತಯಾರಿಸಲಾಗುತ್ತಿತ್ತು. ಆದರೆ, ಈಗ ಕಾಲ ಬದಲಾಗಿದೆ. ಜೇಡಿ ಮಣ್ಣಿನ ಬದಲು ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣಗಳನ್ನು ಬಳಸಿ ಬೃಹತ್ ಗಣೇಶನ ವಿಗ್ರಹಗಳನ್ನು ತಯಾರಿಸಲಾಗುತ್ತಿದೆ.

ಪ್ರಥಮ ಪೂಜಿತಗೆ ಶರಣು, ಶ್ರದ್ಧೆಯ ಗಣೇಶೋತ್ಸವ ನಮ್ಮದಾಗಲಿಪ್ರಥಮ ಪೂಜಿತಗೆ ಶರಣು, ಶ್ರದ್ಧೆಯ ಗಣೇಶೋತ್ಸವ ನಮ್ಮದಾಗಲಿ

ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣಗಳು ಜಲಮಾಲಿನ್ಯ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಗಣೇಶ ಚತುರ್ಥಿ ಬಂತೆಂದರೆ ಮುಂಬೈ, ಬೆಂಗಳೂರು, ಹೈದರಾಬಾದ್ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಪರಿಸರ ಪ್ರೇಮಿ ಗಣೇಶ ಕೂರಿಸಿ ಎಂಬ ಕೂಗು ಕೇಳಿಬರುತ್ತದೆ.

ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಗಿಡವಾಗಿ ಶಾಶ್ವತವಾಗಿ ನೆಲೆ ನಿಲ್ಲುವ ಗಣಪನ ಪರಿಕಲ್ಪನೆ ಹುಟ್ಟು ಹಾಕಿದೆ. ಈ ಕುರಿತು ಅಭಿಯಾನವನ್ನು ಕೂಡ ಆರಂಭಿಸಿದೆ. ಜೇಡಿ ಮಣ್ಣಿನಿಂದ ಗಣೇಶನನ್ನು ತಯಾರಿಸಿ ಪ್ರಕೃತಿ ಸಹಜ ಬಣ್ಣ ಬಳಿಯಲಾಗುತ್ತದೆ. ಮೂರ್ತಿಯ ಮಧ್ಯೆ ಮರವಾಗಿ ಬೆಳೆಯುವ ಪುಟ್ಟ ಗಿಡವೊಂದನ್ನು ಇಡಲಾಗುತ್ತದೆ.

ಹಬ್ಬದ ದಿನದಂದು ಎಲ್ಲಾ ಧಾರ್ಮಿಕ ವಿಧಿ ವಿಧಾನಗಳಂತೆ ಪೂಜೆ ಸಲ್ಲಿಸಿದ ಬಳಿಕ ವಿಸರ್ಜನೆಯ ಸಂದರ್ಭದಲ್ಲಿ ಗಣೇಶನ ಮೂರ್ತಿಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡ ಗುಂಡಿಯನ್ನು ತೆಗೆದು ಅದರಲ್ಲಿ ನೀರು ತುಂಬಿಸಿ ಗಣೇಶನ ವಿಗ್ರಹವನ್ನು ವಿಸರ್ಜಿಸಬೇಕು.

 ಮೋದಕಪ್ರಿಯ ಗಣೇಶನ 32 ಹೆಸರುಗಳು: ಚಿತ್ರ ಮಾಹಿತಿ ಮೋದಕಪ್ರಿಯ ಗಣೇಶನ 32 ಹೆಸರುಗಳು: ಚಿತ್ರ ಮಾಹಿತಿ

ಹೀಗೆ ವಿಸರ್ಜಿಸಿದ ಗಣೇಶನ ವಿಗ್ರಹದ ಜೇಡಿ ಮಣ್ಣು ನೀರಿನಲ್ಲಿ ಕರಗಿ ಗಣೇಶ ನಲ್ಲಿದ್ದ ಗಿಡ ಶಾಶ್ವತವಾಗಿ ಭೂಮಿಯಲ್ಲಿ ನೆಲೆ ನಿಲ್ಲುತ್ತದೆ. ಈ ರೀತಿಯ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ ಹಬ್ಬದ ಸಡಗರ ಶಾಶ್ವತವಾಗಿ ನೆನಪಿಸುವಂತೆ ಮಾಡಬಹುದಾಗಿದೆ.

ಹಬ್ಬದ ಸಂಭ್ರಮದೊಂದಿಗೆ ಪರಿಸರಕ್ಕೂ ಕೊಡುಗೆ ನೀಡಲು ಸಾಧ್ಯವಾಗಲಿದೆ. ಒನ್ ಇಂಡಿಯಾದೊಂದಿಗೆ ಮಾತನಾಡಿದ ಪರಿಸರವಾದಿ ಶಶಿಧರ್ ಶೆಟ್ಟಿ, ಕಳೆದ ಬಾರಿ ಗಣೇಶ ಚತುರ್ಥಿ ದಿನದಂದು ನೂರಾರು ಜನರು ಈ ಪರಿಸರ ಸ್ನೇಹಿ ಗಣಪನನ್ನು ಪೂಜಿಸಿದ್ದಾರೆ.

ಅದಲ್ಲದೇ ಮಂಗಳೂರಿನ ಉರ್ವಾಸ್ಟೋರ್ ನಲ್ಲಿರುವ ಗಣಪತಿ ದೇವಾಲಯದ ಪರಿಸರದಲ್ಲಿ ಹುಂಡಿ ತೋಡಿ ಹತ್ತಾರು ಈ ಪರಿಸರ ಸ್ನೇಹಿ ಗಣಪನನ್ನು ವಿಸರ್ಜಿಸಲಾಗಿತ್ತು. ಈಗ ಆ ಜಾಗಗಳಲ್ಲಿ ಮೊಳಕೆಯೊಡೆದ ಹತ್ತಾರು ಗಿಡಗಳು ಆಳೆತ್ತರಕ್ಕೆ ಬೆಳೆದು ನಿಂತಿವೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಬಾರಿಯೂ ಜನರು ಈ ಪರಿಸರ ಸ್ನೇಹಿ ಗಣಪನನ್ನು ಪೂಜಿಸಿ ಎಂದು ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಅವರು ಹೇಳಿದರು.

English summary
National Environment Care Foundation make awareness about Environment friendly Ganesha Chathurthi in Mangaluru. NEFC Members making awareness about Ganesha idol encased with saplings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X