ಮಂಗಳೂರಿನಲ್ಲಿ ಸಂಜೆ 7 ಗಂಟೆಗೆ ಅಬ್ದುಲ್ ಬಷೀರ್ ಅಂತ್ಯಕ್ರಿಯೆ

Posted By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ 7: ಬೆಳಿಗ್ಗೆ ನಿಧನರಾದ ಅಬ್ದುಲ್ ಬಷೀರ್ ಅಂತ್ಯಕ್ರಿಯೆ ಇಂದು ಸಂಜೆ 7 ಗಂಟೆಗೆ ನಡೆಯಲಿದೆ. ಕೂಳೂರಿನ ಮುಹಿಯುದ್ದೀನ ಜುಮ್ಮಾ ಮಸೀದಿಯಲ್ಲಿ ಧಪನ್ ನಡೆಯಲಿದೆ.

ನಗರದ ಕೊಟ್ಟಾರ ಚೌಕಿಯಲ್ಲಿ ಬುಧವಾರ ರಾತ್ರಿ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿದ್ದ ಅಬ್ದುಲ್ ಬಷೀರ್ ಆಸ್ಪತ್ರೆ ಸೇರಿದ್ದರು. ಮಂಗಳೂರಿನ ಎಜೆ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಷೀರ್ ಇಂದು ಬೆಳಿಗ್ಗೆ ನಿಧರಾಗಿದ್ದರು.

ಮೃತದೇಹನ್ನು ಕೂಳೂರಿನ ಮುಹಿಯುದ್ದೀನ ಜುಮ್ಮಾ ಮಸೀದಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಹಲವಾರು ಜನರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

Funeral of Abdul Basheer at 7 pm in Mangaluru

ಬಶೀರ್ ಅವರ ಪುತ್ರ ಇರ್ಫಾನ್ ಗೆ ಒಂದು ವಾರದ ಹಿಂದಷ್ಟೇ ಅಬುದಾಬಿಯಲ್ಲಿ ನೌಕರಿ ಸಿಕ್ಕಿತ್ತು. ಅವರ ಆಗಮನಕ್ಕಾಗಿ ಕಾಯಲಾಗುತ್ತಿದೆ. ಇರ್ಫಾನ್ ಆಗಮನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದ್ದು ಸಂಜೆ 6 ಗಂಟೆಗೆ ಕೂಳೂರು ತಲುಪಿದ್ದಾರೆ. ಇದೀಗ ಅಂತಿಮ ಧಾರ್ಮಿಕ ವಿಧಿಗಳನ್ನು ಆರಂಭಿಸಲಾಗಿದ್ದು ಅಂತ್ಯಕ್ರಿಯೆ ಸಂಜೆ 7 ಗಂಟೆಗೆ ನಡೆಯಲಿದೆ.

ದುಷ್ಕರ್ಮಿಗಳ ದಾಳಿಗೆ ಒಳಗಾಗಿದ್ದ ಅಬ್ದುಲ್ ಬಷೀರ್ ನಿಧನ

ಇದಕ್ಕೂ ಮೊದಲು ಎಜೆ ಆಸ್ಪತ್ರೆಯ ಶವಾಗಾರದಲ್ಲಿ ಅಬ್ದುಲ್ ಬಷೀರ್ ಶವ ಇಡಲಾಗಿತ್ತು. ಈ ಸಂದರ್ಭ ಶವಾಗಾರಕ್ಕೆ ಭೇಟಿ ನೀಡಿ ಸಚಿವ ಯು.ಟಿ‌ ಖಾದರ್ ಹಾಗೂ ಮಂಗಳೂರು ಉತ್ತರ ಶಾಸಕ ಮೊಯ್ದೀನ್ ಬಾವಾ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The funeral of Abdul Basheer, who died early this morning in AJ Hospital, will be held at 7 pm today. Dhapan will be held in Muhiyuddin Juma Masjid, Kulur, Mangaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ