ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಮನೆ ಮಾತಾಯ್ತು ಸೆಕ್ಯೂರಿಟಿ ಗಾರ್ಡ್, ಕೋತಿಯ ಫ್ರೆಂಡ್ ಶಿಪ್

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 09: ಕೋತಿಯೊಂದು ಮಂಗಳೂರು ಹೊರವಲಯದ ಸುರತ್ಕಲ್ ನ ಮಧ್ಯ ಭಾಗದಲ್ಲಿರುವ ಎಟಿಎಂ ಒಂದಕ್ಕೆ ಪ್ರತಿದಿನ ಭೇಟಿ ನೀಡುತ್ತಿದೆ. ಮನುಷ್ಯರು ಎಟಿಎಂಗೆ ಭೇಟಿ ಕೊಡುವುದಕ್ಕೆ ಕಾರಣವಿದೆ. ಆದರೆ ಕೋತಿ ಭೇಟಿ ಕೊಡುತ್ತದೆಂದರೆ.. ನಿಮಗೆ ಆಶ್ಚರ್ಯವಾಗುತ್ತಿರಬಹುದು ಅಲ್ವಾ?

ಆದರೆ ಇಲ್ಲಿನ ಬಹಳಷ್ಟು ಜನರಿಗೂ ಕೋತಿ ಇಲ್ಲಿಗ್ಯಾಕೆ ಬರುತ್ತಿದೆ ಎಂಬ ಕುತೂಹಲವಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿತು ನೋಡಿ... ದಿನ ನಿತ್ಯ ಎಟಿಎಂ ಬಳಿ ಭೇಟಿ ಕೊಡುವ ಕೋತಿ ಎಟಿಎಂ ಸೆಕ್ಯೂರಿಟಿ ಗಾರ್ಡ್ ಕಿಟ್ಟು ಹತ್ತಿರ ಬಂದು ಅವರು ನೀಡುವ ಹಣ್ಣು ಹಾಗು ಬಿಸ್ಕತ್ ಸೇವಿಸಿ ವಾಪಾಸ್ ತೆರಳುತ್ತದೆ.

ನರಳಾಡುತ್ತಿದ್ದ ಕೋತಿಗೆ ನೆರವಾಗಿ, ಆಸರೆಯಾದ ಪೊಲೀಸ್ ಅಧಿಕಾರಿ!ನರಳಾಡುತ್ತಿದ್ದ ಕೋತಿಗೆ ನೆರವಾಗಿ, ಆಸರೆಯಾದ ಪೊಲೀಸ್ ಅಧಿಕಾರಿ!

ಕೋತಿ ಹಾಗೂ ಸೆಕ್ಯೂರಿಟಿ ಗಾರ್ಡ್ ನಡುವೆ ಸ್ನೇಹ ಎಷ್ಟು ಗಾಢವಾಗಿದೆಯೆಂದರೆ ಕೋತಿ ಆತ ನೀಡುವ ತಿಂಡಿ ತಿಂದು ಸ್ವಲ್ಪ ಹೊತ್ತು ಕಾಲ ಕಳೆದು ನಂತರ ಅಲ್ಲಿಂದ ತೆರಳುತ್ತದೆ.

Friendship of Monkey and security Guard talk of the town in Mangaluru

ಸುರತ್ಕಲ್ ಪೇಟೆಯ ಅಗರಿಮಯ್ಯ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಕರ್ನಾಟಕ ಬ್ಯಾಂಕ್ ನ ಈ ಎಟಿಎಂ ಇದೆ. ಇಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಳೆದ ಒಂದೂವರೆ ವರ್ಷದಿಂದ ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ.

ಕಿಟ್ಟು ಹಾಗೂ ಕೋತಿಯ ನಡುವಿನ ಗೆಳೆತನ ಇತ್ತೀಚಿನ ದಿನಗಳಲ್ಲಂತೂ ಭಾರೀ ಮನೆ ಮಾತಾಗಿದೆ. ಆರಂಭದಲ್ಲಿ ಎಟಿಎಂ ಹತ್ತಿರ ಒಮ್ಮೊಮ್ಮೆ ಬರುತ್ತಿದ್ದ ಕೋತಿ ಸ್ವಲ್ಪ ಹೊತ್ತು ಇದ್ದು ತೆರಳುತ್ತಿತ್ತು . ಹೀಗೆ ಪ್ರತಿ ನಿತ್ಯ ಭೇಟಿ ನೀಡುತ್ತಿದ್ದ ಕೋತಿಗೆ ಕಿಟ್ಟು ಅವರು ಬಾಳೆಹಣ್ಣು, ಬಿಸ್ಕತ್ ನೀಡಲಾರಂಭಿಸಿದರು.

ಕೋತಿ ಜೊತೆ ಉಪಹಾರ ಹಂಚಿಕೊಂಡ ಶಾಸಕ ಸುರೇಶ್ ಬಾಬು!ಕೋತಿ ಜೊತೆ ಉಪಹಾರ ಹಂಚಿಕೊಂಡ ಶಾಸಕ ಸುರೇಶ್ ಬಾಬು!

ಒಂದೊಮ್ಮೆ ಕಿಟ್ಟು ಎಟಿಎಂ ಬಳಿ ಕಾಣದಿದ್ದರೆ ಅವರಿಗಾಗಿ ಕಾದು ಕುಳಿತುಕೊಳ್ಳುತ್ತದೆ ಈ ಕೋತಿ. ಕಿಟ್ಟು ಬಿಸ್ಕತ್, ಬಾಳೆ ಹಣ್ಣು ನೀಡಿದ ಬಳಿಕವೇ ಅದರ ಮುಂದಿನ ಪಯಣ. ಮಾನವನ ಮತ್ತು ಪ್ರಾಣಿಯ ನುಡುವಿನ ಅನನ್ಯ ಸ್ನೇಹಕ್ಕೆ ಈ ಕೋತಿ ಹಾಗು ಕಿಟ್ಟು ಅವರ ನಡುವಿನ ಪ್ರೀತಿ ಒಂದು ಉತ್ತಮ ಉದಾಹರಣೆಯಾಗಿದೆ.

English summary
Friendship of Monkey and security Guard talk of the town in Mangaluru. Here is a interesting story of Monkey and A T M security Guard of Surathkal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X