ಗಾಲಿ ಜನಾರ್ದನ ರೆಡ್ಡಿಯಿಂದ ಕಲ್ಲಡ್ಕ ಶಾಲೆಗೆ 26 ಲಕ್ಷ ದೇಣಿಗೆ

By: ಕಿರಣ್ ಸಿರ್ಸೀಕರ್
Subscribe to Oneindia Kannada

ಮಂಗಳೂರು, ಆಗಸ್ಟ್ 22 : ಮಾಜಿ ಸಚಿವ, ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ಕಲ್ಲಡ್ಕ ಶಾಲೆಗೆ ಇಪ್ಪತ್ತಾರು ಲಕ್ಷ ರುಪಾಯಿ ಹಣ ದೇಣಿಗೆಯಾಗಿ ನೀಡಿದ್ದಾರೆ. ಆ ಶಾಲೆಗೆ ರಾಜ್ಯ ಸರಕಾರ ಅನುದಾನ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದ್ದ ಭಿಕ್ಷಾಂದೇಹಿ ಅಭಿಯಾನಕ್ಕೆ ಭರ್ಜರಿ ಬೆಂಬಲ ವ್ಯಕ್ತವಾಗಿದೆ.

ಕೋರ್ಟ್ ಹಣ ಮರಳಿಸಿದ ಮೇಲೆ ಕಾಂಗ್ರೆಸ್ ಗೆ ಭಯ ಹುಟ್ಟಿದೆ: ಜನಾ ರೆಡ್ಡಿ

ಕಲ್ಲಡ್ಕ ಶಾಲೆಗಳಿಗೆ ಅನ್ನದಾನ ಅನುದಾನ ಕಡಿತ ಮಾಡಿದ ರಾಜ್ಯ ಸರಕಾರದ ಕ್ರಮದ ವಿರುದ್ಧ ಆರಂಭವಾದ ಭಿಕ್ಷಾಂದೇಹಿ ಆನ್ ಲೈನ್ ಅಭಿಯಾನಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಕೈ ಜೋಡಿಸಿದ್ದಾರೆ.

Former minister Janardana Reddy Donates 26 lakhs to Kalladka school

ಕಲ್ಲಡ್ಕ ಶಾಲೆಗೆ ಮಂಗಳವಾರ ಬಂದ ಜನಾರ್ದನ ರೆಡ್ಡಿ, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಭೇಟಿ ಮಾಡಿದರು. ಆ ನಂತರ ಚರ್ಚೆ ನಡೆಸಿದರು. ಶಾಲೆಗಾಗಿ ಇಪ್ಪತ್ತಾರು ಲಕ್ಷ ರುಪಾಯಿ ದೇಣಿಗೆಯನ್ನು ರೆಡ್ಡಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ಈ ಆನ್ ಲೈನ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಕಲ್ಲಡ್ಕದ ಎರಡು ಶಾಲೆಗಳಿಗೆ ಬರುತ್ತಿದ್ದ ಅನ್ನದಾನದ ಅನುದಾನ ಕಡಿತಗೊಳಿಸಿ ಸರಕಾರ ಆದೇಶಿಸುತ್ತಿದ್ದಂತೆ ಶಾಲೆಯ ಸಂಚಾಲಕ, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಜೋಳಿಗೆ ಹಾಕಿ ಭಿಕ್ಷೆ ಎತ್ತಿಯಾದರೂ ಶಾಲೆಯ ನಡೆಸುತ್ತೆನೆ ಅನ್ನೋ ಮಾತು ಹೇಳಿದ್ದರು.

ಅಡ್ಜಸ್ಟ್ ಮೆಂಟ್ ರಾಜಕಾರಣ ಗೊತ್ತಿಲ್ಲದ ನಾನು 4 ವರ್ಷ ಜೈಲು ಸೇರಿದೆ: ರೆಡ್ಡಿ

ಮಹೇಶ್, ವಿಕ್ರಂ ಹೆಗ್ಡೆ ಮತ್ತು ಅವರ ತಂಡ ಸಾಮಾಜಿಕ ಜಾಲತಾಣದ ಮೂಲಕ ಭಿಕ್ಷಾಂದೇಹಿ ಆನ್ ಲೈನ್ ಅಭಿಯಾನ ಆರಂಭಿಸಿತ್ತು.

Former minister Janardana Reddy Donates 26 lakhs to Kalladka school

ಈ ಮಧ್ಯೆ ಕಲ್ಲಡ್ಕದ ಶಾಲೆಗಳಿಗೆ ಅನುದಾನ ಕಡಿತಗೊಳಿಸಿರುವುದನ್ನು ವಿರೋಧಿಸಿ ಹಾಗೂ ಕಲ್ಲಡ್ಕದ ಶಾಲಾ ಮಕ್ಕಳಿಗಾಗಿ ಬಿಜೆಪಿ ಮಹಿಳಾ ಮೋರ್ಚಾ ಅಕ್ಕಿ ಭಿಕ್ಷೆ ಅಭಿಯಾನ ಆರಂಭಿಸಿತ್ತು.

ಈ ಅಕ್ಕಿ ಭಿಕ್ಷೆ ಅಭಿಯಾನದಡಿ ನಗರದ ಮಣ್ಣಗುಡ್ಡ ಎಂಬಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮಂಗಳೂರಿನಲ್ಲಿ ಮನೆ ಮನೆಗೆ ತೆರಳಿ ಭಿಕ್ಷೆ ಬೇಡುವ ಮೂಲಕ ಚಾಲನೆ ನೀಡಿದ್ದರು. ಅಕ್ಕಿ ಸಂಗ್ರಹಿಸಿದ್ದರು. ಈಗಾಗಲೇ ಹಲವು ರಾಜಕೀಯ, ಸಾಮಾಜಿಕ ಮುಖಂಡರು ದೇಣಿಗೆ ನೀಡಿ ಶಾಲೆಗೆ ನೈತಿಕ ಬೆಂಬಲ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former minister Janardana Reddy Donates 26 lakhs to Kalladka school. State government recently stopped food grant to school.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ