ಮಂಗಳೂರಿಗೆ ಬರ್ತಿದ್ದಾರೆ ಕ್ರಿಕೆಟ್ ಮಾಜಿ ನಾಯಕ ಅಜರುದ್ಧೀನ್

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್ 10: ಅಲ್ ಮುಝೈನ್ -ವೈಟ್ ಸ್ಟೋನ್ -ಎಂಪಿಎಲ್ ಆವೃತ್ತಿಯ 20-20 ಕ್ರಿಕೆಟ್ ಪಂದ್ಯಾಟವನ್ನು ನವ ಮಂಗಳೂರು ಬಂದರು ಮಂಡಳಿಯ ಬಳಿಯ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜರುಗಲಿದ್ದು ಡಿ.17ರಂದು ಇದರ ಉಧ್ಘಾಟನೆಯನ್ನು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಜರುದ್ಧೀನ್ ಅವರು ನೆರವೇರಿಸಲಿದ್ದಾರೆ.

ಡಿ.17ರಂದು ಸಂಜೆ 4.30 ಗಂಟೆಗೆ ಉದ್ಘಾಟನೆ ನಡೆಯಲಿದೆ. ಹಸಿರು ಹುಲ್ಲಿನ ಅಸ್ಟ್ರೋಟಫ್ ಮೈದಾನದಲ್ಲಿ ಡಿ.17ರಿಂದ 30ರವೆಗೆ ಒಟ್ಟು 14 ದಿನಗಳ ಕಾಲ 12 ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. ಲೀಗ್ ಹಂತದಲ್ಲಿ 30 ಪಂದ್ಯಗಳು ,ನಂತರ ಎಲಿಮಿನೇಟರ್,ನಾಕೌಟ್ ಹಂತಗಳಲ್ಲಿ 5 ಪಂದ್ಯಗಳು ನಡೆಯಲಿದೆ. ಅಧಿಕೃತ ಪಂದ್ಯಗಳು ಡಿ.18ರಿಂದ ಪ್ರಾರಂಭವಾಗಲಿದೆ.[ಕೊಹ್ಲಿಗೆ ಈಗ ಅಜರುದ್ದೀನ್ ದಾಖಲೆ ಮುರಿಯುವ ತವಕ!]

former cricketer mohammad azharuddin to inaugurate MPL in mangalore

ಈ ಬಾರಿಯ ಪಂದ್ಯದಲ್ಲಿ ರೆಡ್ ಹಾಕ್ಸ್ ಕುಡ್ಲ,ಟೀಮ್ ಎಲಿಗೆಂಟ್ ಮೂಡುಬಿದಿರೆ,ಕಂಕನಾಡಿ ನೈಟ್ ರೈಡರ್ಸ್, ಕರಾವಳಿ ವಾರಿಯರ್ಸ್ ಪಣಂಬೂರು, ಕಾರ್ಕಳ ಗ್ಲೇಡಿಯೇಟರ್ಸ್, ಪ್ರೆಸಿಡೆಂಟ್ಸ್ ಸಿಕ್ಸರ್ಸ್ ಕುಂದಾಪುರ, ಮೇಸ್ಟ್ರೋ ಟೈಟಾನ್ಸ್, ಸ್ಪಾರ್ಕ್ ಎವೆಂಜರ್ಸ್ ಬೊಳಾರ, ಕೋಸ್ಟಲ್ ಡೈಜೆಸ್ಟ್, ಸುರತ್ಕಲ್ ಸ್ಟ್ರೈಕರ್ಸ್, ಯುನೈಟೆಡ್ ಉಳ್ಳಾಲ, ಉಡುಪಿ ಟೈಗರ್ಸ್ ಭಾಗವಹಿಸಲಿವೆ. ಐಪಿಲ್ ಆಟಗಾರರಾದ ಕೆ.ಸಿ.ಕಾರ್ಯಪ್ಪ, ಶಿವಿಲ್ ಕೌಶಿಕ್,ಬಿ.ಅಖಿಲೇಶ್,ಅಪ್ಪಣ್ಣ ಮತ್ತು 38 ಮಂದಿ ಕೆಪಿಎಲ್ ಆಟಗಾರರು ವಿವಿಧ ತಂಡಗಳಲ್ಲಿ ಸೇರಿ ಆಡಲಿದ್ದಾರೆ.[ಅಜರುದ್ದೀನ್ ದಾಖಲೆ ಸಮಗಟ್ಟಿದ ಎಂಎಸ್ ಧೋನಿ ]

ಡಿ.17ರಂದು ಸಂಜೆ 4.30 ಗಂಟೆಗೆ ಅರ್ಜುನ್ ಕಾಫಿಕಾಡ್ ನೇತೃತ್ವದ ಚಲನಚಿತ್ರ ತಾರೆಯರ ತಂಡ ಹಾಗೂ ಎಂಪಿಎಲ್ ಆಯೋಜಕರ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಲೇಸರ್ ಶೋ,ಟಾಲ್ ಮೆನ್,ಸುಡುಮದ್ದು ಪ್ರದರ್ಶನ, ರಶಿಯನ್ ಅಗ್ನಿ ನೃತ್ಯ, ಡ್ರಾಗ್ಯನ್ ನೃತ್ಯ ಪ್ರದರ್ಶನಗೊಳ್ಳಲಿದೆ ಎಂದು ಸಿರಾಜುದ್ಧೀನ್ ತಿಳಿಸಿದ್ದಾರೆ. ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕೃತ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದು ಮಂಗಳೂರು ಕರ್ನಾಟಕ ರೀಜನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷ ರಾದ ಸಿರಾಜುದ್ಧೀನ್ ತಿಳಿಸಿದ್ದಾರೆ.

former cricketer mohammad azharuddin to inaugurate MPL in mangalore

ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕ ಮುಹಮ್ಮದ್ ಅಜರುದ್ಧೀನ್ ಜೊತೆ ಅಲ್‌ಮುಝೈನ್ ಸಂಸ್ಥೆಯ ಉದ್ಯಮಿ ಝಕಾರಿಯಾ ಜೋಕಟ್ಟೆ,ವೈಟ್ ಸ್ಟೋನ್ ಸಂಸ್ಥೆಯ ಉದ್ಯಮಿ ಜನಾಬ್ ಶರೀಫ್ ಬಿ.ಎಂ,ರಿಯಲ್ ಟೆಕ್ ಕಂಪೆನಿಯ ಉದ್ಯಮಿ ಇಸ್ಮಾಯಿಲ್ ಭಾಗವಹಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
former cricketer mohammad azharuddin to inaugurate MPL in mangalore on dec 17th at B.R. Ambedkar Cricket Stadium, New Mangalore Port Trust.
Please Wait while comments are loading...