ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಲೆಂದ್ರಲ್ಲಿ ವಾಹನ ಪಾರ್ಕ್ ಮಾಡಿದ್ರೆ ಮನೆಗೆ ಬರುತ್ತೆ ನೋಟಿಸ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ,09: ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ, ಟ್ರಾಫಿಕ್ ನಿಯಮ ಮೀರಿ ವಾಹನ ಚಲಾಯಿಸುವಂತಿಲ್ಲ. ಒಂದು ವೇಳೆ ಪೊಲೀಸರ ಕಣ್ಣು ತಪ್ಪಿಸಿದ್ದಲ್ಲಿ, ತಿಂಗಳೊಳಗೆ ಸದ್ದಿಲ್ಲದೆ ನಿಮ್ಮ ಮನೆಗೆ ಬರುತ್ತೆ ದಂಡದ ನೋಟಿಸ್. ಇದೀಗ ಈ ಪರಿಸ್ಥಿತಿ ಇರುವುದು ಮಂಗಳೂರಿನಲ್ಲಿ.

ವಿದೇಶಗಳಲ್ಲಿ ಜಾರಿಯಲ್ಲಿರುವ ಈ ನಿಯಮ ಬೆಂಗಳೂರಿನಲ್ಲಿ ಅಳವಡಿಸಿ ಯಶಸ್ವಿಯಾಗಿದ್ದು, ಕಳೆದ 3 ತಿಂಗಳಿನಿಂದ ಮಂಗಳೂರಿನಲ್ಲಿ ಇದು ಜಾರಿಯಲ್ಲಿದೆ. ಬೆಂಗಳೂರಿನ ಏಜೆನ್ಸಿಗೆ ಇದರ ಜವಾಬ್ದಾರಿ ವಹಿಸಿದ್ದು, ಕಾರ್ಯನಿರ್ವಹಣೆ ವೇಗವಾಗಿ ನಡೆಯುತ್ತಿದೆ. ಮಂಗಳೂರು ಇಲಾಖೆಯೇ ಕಾರ್ಯಾಚರಣೆ ಮಾಡುತ್ತಿದೆ. ಇದಕ್ಕೆ ಹೆಚ್ಚಿನ ಬಜೆಟ್ ಬೇಕಿದೆ. ಮುಂದಿನ ದಿನಗಳಲ್ಲಿ ಇದನ್ನು ಅಭಿವೃದ್ದಿಪಡಿಸಲಾಗುವುದು ಎನ್ನುತ್ತಾರೆ ಎಸಿಪಿ ಉದಯ್ ನಾಯಕ್.[ಜನವರಿ 12ರಿಂದ ನಿಮಗೊಂದು, ನಿಮ್ಮಿಂದೆ ಕುಳಿತವರಿಗೊಂದು]

Mangaluru

ಟ್ರಾಫಿಕ್ ನಿಯಮ ಮೀರಿ ವಾಹನ ಚಲಾಯಿಸುವವರ ಹಾಗೂ ಪಾರ್ಕಿಂಗ್ ಮಾಡಿ ಸಂಚಾರಕ್ಕೆ ತೊಂದರೆ ನೀಡುವವರ ಮೇಲೆ ನಿಗಾ ಇಡಲು ವಿನೂತನ ಕಾರ್ಯಾಚರಣೆ ಮಂಗಳೂರಿನಲ್ಲಿ ಆರಂಭವಾಗಿದ್ದು , 3 ತಿಂಗಳಲ್ಲಿ 3000 ಕ್ಕೂ ಅಧಿಕ ಕೇಸುಗಳು ದಾಖಲಾಗಿವೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಮತ್ತಷ್ಟು ಆಧುನಿಕ ರೀತಿಯಲ್ಲಿ ಬದಲಾವಣೆಗೊಳಿಸಲಾಗುವುದು.[ಪಾರ್ಕಿಂಗ್ ಪ್ರಾಬ್ಲಂಗೆ ಪರಿಹಾರ ಹುಡುಕಿದ ನಾರಾಯಣ ಭಟ್ಟರು]

ಕೇಸು ದಾಖಲಾದ ವಾಹನ ಮಾಲೀಕರು ನೋಟಿಸ್ ಸಿಕ್ಕಿದ 15 ದಿನಗೊಳಗಾಗಿ ಸಂಬಂಧಪಟ್ಟ ಠಾಣೆಯಲ್ಲಿ ದಂಡ ಕಟ್ಟಬೇಕು. ಒಂದು ವೇಳೆ ಅದನ್ನು ನಿರ್ಲಕ್ಷಿಸಿ ಸುಮ್ಮನಿದ್ದಲ್ಲಿ ಚಾರ್ಜ್ ಶೀಟ್ ಹಾಕಿ ಕೋರ್ಟ್ ಮೂಲಕ ಸಮನ್ಸ್, ವಾರೆಂಟ್ ಕಳುಹಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎಸಿಪಿ ಉದಯ್ ನಾಯಕ್ ಹೇಳಿದರು .

English summary
Parking rule is must and should at Mangaluru. When we will not follow the parking rule, Mangaluru police issue the notice direct to home said by ACP Uday Naik
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X