ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರಿನಲ್ಲಿ ಚಲಿಸುವ ಸೈಕಲ್ ಆವಿಷ್ಕರಿಸಿದ 6ನೇ ಕ್ಲಾಸಿನ ಪೋರ!

ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ಕ್ಲಾಸಿನ 12ರ ಆಸುಪಾಸಿನ ಪೋರ ಪುನೀತ್ ನೀರಿನಲ್ಲಿ ಚಲಿಸುವ ಸೈಕಲೊಂದನ್ನು ಆವಿಷ್ಕರಿಸಿ ಎಲ್ಲರ ಹುಬ್ಬೆರುವಂತೆ ಮಾಡಿದ್ದಾನೆ.

By ಐಸ್ಯಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಭಟ್ಕಳ, ನವೆಂಬರ್. 22 : ಪ್ರತಿಭೆಗೆ ವಯಸ್ಸಿನ ಮಿತಿಯಿಲ್ಲಾ ಎನ್ನುದಕ್ಕೆ ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪುನೀತ್ ವೆಂಕಟೇಶ ಗೊಂಡ ಉದಾಹರಣೆಯಾಗಿದ್ದಾನೆ.

ಹೌದು, 12 ರಿಂದ 14ರ ಆಸು ಪಾಸಿನ ಪೋರ ಈ ಪುನೀತ್ ಮಾಡಿದ ಆವಿಸ್ಕಾರವನ್ನು ನೀವು ಕೇಳಿದರೇ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳವುದರಂತೂ ಗ್ಯಾರಂಟಿ.

ಅರೇ.. ಅದೇನಪ್ಪಾ ಅಂತಹ ಆವಿಷ್ಕಾರ ಮಾಡಿದ್ದಾನೆ. ಅಂತ ಆಶ್ಚರ್ಯ ಆಗಿರಬೇಕಲ್ಲ, ಆಗಲೇ ಬೇಕು. ಈ ಹುಡುಗ ಮಾಡಿದ ಆವಿಷ್ಕಾರ ತಿಳಿಯಲು ಮುಂದೆ ಓದಿ ನಿಮಗೆ ಗೊತ್ತಾಗುತ್ತೆ.

ಭಟ್ಕಳ ತಾಲೂಕಿನ ತೆಂಗಿನಗುಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇನ್ನು 6ನೇ ಕ್ಲಾಸ್ ಓದುತ್ತಿರುವ ಪುನೀತ್ ಹಾಗೂ ಆತನ ಸಹಪಾಠಿಗಳು ಸೇರಿ ನೀರಿನಲ್ಲಿ ಚಲಿಸುವ ಬೈಸಿಕಲ್‌ನನ್ನು ಆವಿಷ್ಕಾರ ಮಾಡಿ ಅದೇ ಸೈಕಲ್ ನಿಂದ ಯಶಸ್ವಿಯಾಗಿ ಇಲ್ಲಿನ ವೆಂಕಟಾಪುರ ನದಿ ದಾಟಿ ಎಲ್ಲರಿಗೆ ಉಬ್ಬೆರುವಂತೆ ಮಾಡಿದ್ದಾನೆ.

ಇನ್ನು ಈ ಬಾಲಕ ಹೇಗೆಲ್ಲಾ ಆವಿಷ್ಕಾರ ಮಾಡಿದ್ದಾನೆಂದು ತಿಳಿಯಲು ಮುಂದೆ ಓದಿ.

ಖ್ಯಾತ ವಿಜ್ಞಾನಿ ಆರ್ಕಿಮಿಡೀಸ್ ತತ್ವದ ಅನ್ವಯ

ಖ್ಯಾತ ವಿಜ್ಞಾನಿ ಆರ್ಕಿಮಿಡೀಸ್ ತತ್ವದ ಅನ್ವಯ

ಈ ಆವಿಷ್ಕಾರವನ್ನು ಖ್ಯಾತ ವಿಜ್ಞಾನಿ ಆರ್ಕಿಮಿಡೀಸ್ ತತ್ವದ ತೇಲುವಿಕೆಯ ಅನ್ವಯ ಸೈಕಲ್ ಮತ್ತು ನಾಲ್ಕು ಕ್ಯಾನುಗಳನ್ನು ಬಳಸಿ ಅತ್ಯಂತ ಕಡಿಮೆ ಹಣದಲ್ಲಿ ನೀರಿನ ಮೇಲೆ ಚಲಿಸುವ ಸೈಕಲ್ ತಯಾರಿಸಲಾಗಿದೆ.

ಆವಿಷ್ಕಾರದ ವೈಶಿಷ್ಟ್ಯ

ಆವಿಷ್ಕಾರದ ವೈಶಿಷ್ಟ್ಯ

ಸ್ವಚ್ಛ ಭಾರತ ಅಭಿಯಾನದ ಬೆಂಬಲವಾಗಿ ಈ ಆವಿಷ್ಕಾರ ರೂಪಿಸಿದ್ದು, ಮುಂಭಾಗದಲ್ಲಿ ಜಾಳಿಗಳನ್ನು ಜೋಡಿಸಿ, ಕಸ ಕಡ್ಡಿಗಳನ್ನು ತೀರದಲ್ಲಿ ಸಂಗ್ರಹಿಸಿ ತೆಗೆಯಬಹುದಾಗಿದೆ. ಸೈಕಲನ್ನು ಸ್ವಲ್ಪ ಮಾತ್ರ ಬದಲಾವಣೆ ಮಾಡಿಕೊಂಡು ಕಬ್ಬಿಣದ ಪಟ್ಟಿಯ ಮೂಲಕ ನಾಲ್ಕು ಕಡೆಗಳಲ್ಲಿ ನೀರಿನ ಕ್ಯಾನ್ ಅಳವಡಿಸಲಾಗಿದೆ. ಕ್ಯಾನ್ ಆಳಡಡಿಕೆಯ ಮುನ್ನ ಗಾಳಿಯನ್ನು ತುಂಬಿ ಸೀಲ್ ಮಾಡಲಾಗಿದೆ ಮಾತ್ರವಲ್ಲದೆ ಕಬ್ಬಿಣದ ಪಟ್ಟಿಗೆ ಅದನ್ನು ರಬ್ಬರಿನಿಂದ ಬಿಗಿಯಲಾಗಿದೆ. ಮುಂದಿನ ಚಕ್ರವನ್ನು ಸ್ಟೇರಿಂಗ್ ಆಗಿ ಬಳಸುವಂತೆ ಸೈಕಲ್ ಚೈನ್ ಬಳಸಲಾಗಿದ್ದು, ಯಾವ ದಿಕ್ಕಿನಲ್ಲಾದರೂ ಸೈಕಲ್ ತಿರುಗಿಸುವ ವ್ಯವಸ್ಥೆ ಮಾಡಲಾಗಿದೆ.

ಆವಿಷ್ಕಾರದ ಉದ್ದೇಶ

ಆವಿಷ್ಕಾರದ ಉದ್ದೇಶ

ಈ ಆವಿಷ್ಕಾರದ ಹಿಂದಿನ ಮುಖ್ಯ ಉದ್ದೇಶವೆಂದರೆ ನೀರಿನಲ್ಲಿ ತೇಲುವ ಎಲ್ಲ ಕಸಗಳನ್ನು ಜಾಳಿ ಸಹಾಯದಿಂದ ಸಂಗ್ರಹ ಮಾಡಿ ದಡಕ್ಕೆ ಹಾಕಬಹುದು ಎನ್ನುವ ಸಾಧನೆಯನ್ನು ಪುನೀತ್ ಮಾಡಿದ್ದಾನೆ. ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿದ ಪುನೀತ್ ತನ್ನ ಸಾಧನೆಗೆ ಸಹಕಾರ ನೀಡಿದ್ದು ಸಹಪಾಠಿಗಳು ಹಾಗೂ ಶಿಕ್ಷಕರು ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾನೆ.

ಪುನೀತ್ ನ ಮನದಾಳದ ಮಾತು

ಪುನೀತ್ ನ ಮನದಾಳದ ಮಾತು

ಈ ಆವಿಷ್ಕಾರದ ಹಿಂದೆ ಇರುವ ಮುಖ್ಯ ಕಾರಣವೆಂದರೆ ಶಾಲೆಯ ಶಿಕ್ಷಕ ಅನಂತ ಮೋಗೇರ ಕೊಟ್ಟ ಪ್ರೇರಣೆ , ಈ ಪ್ರೇರಣೆಯಿಂದಲೇ ಸಾಧನೆ ಮಾಡಿದ್ದೇನೆ ಮತ್ತು ಸ್ವಚ್ಛ ಭಾರತ್ ಸಂದೇಶವನ್ನು ಸಾರಲು ಈ ಸೈಕಲ್ ಸಹಕಾರಿಯಾಗಲಿದೆ ಎಂಬುದು ಪುನೀತ್ ಮನದಾಳದ ಮಾತು.

ಪುನೀತ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುನೀತ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ವಿದ್ಯಾರ್ಥಿ ಪುನೀತ್ ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಇನಸ್ಪೈರ್ಡ್ ಅವಾರ್ಡ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅತ್ಯುತ್ತಮವಾಗಿ ಭಾಗವಹಿಸಿ ಇದೀಗ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈ ಆವಿಷ್ಕಾರದಿಂದ ಆಯ್ಕೆಗೆ ಕಾರಣವು ಹೌದು.

ಡಿಸೆಂಬರ್. 7ರಂದು ದೆಹಲಿಯಲ್ಲಿ ಸ್ಪರ್ಧೆ

ಡಿಸೆಂಬರ್. 7ರಂದು ದೆಹಲಿಯಲ್ಲಿ ಸ್ಪರ್ಧೆ

ರಾಷ್ಟ್ರಮಟ್ಟದ ಸ್ಪರ್ಧೆ ಡಿಸೆಂಬರ್. 7ರಂದು ದೆಹಲಿಯಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಪುನೀತ್ ಸೈಕಲ್ ಹೊಡೆಯುವುದರ ಮೂಲಕ ಸ್ವಚ್ಚ್ ಭಾರತ್ ಸಂದೇಶವನ್ನು ಸಾರಲಿದ್ದಾನೆ.

ಗೆದ್ದು ಬಾ ಪುನೀತ್

ಗೆದ್ದು ಬಾ ಪುನೀತ್

ಮಹತ್ತರ ಸಾಧನೆಗೈದ ಈ ಬಾಲಕನಿಗೆನಮ್ಮದೊಂದು ಸೆಲ್ಯೂಟ್. ಜತೆಗನಮ್ಮ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಪುನೀತ್ ಗೆದ್ದು ಬರಲಿ ಎಂದು ನಾವೇಲ್ಲರೂ ಹಾರೈಸೋಣ.

English summary
Hrere is a Bhatkal taluk Tenginagundi government 6th std.student who peddles his bicycle on the water. This is the invention of Bhatkal taluk Tenginagundi government school 6th std student Puneeth Venkatesh Gonda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X