ಎಂಡೋಸಲ್ಫನ್ ಪೀಡಿತ ಒಂದೇ ಕುಟುಂಬದ ಐದು ಜನರು ಆತ್ಮಹತ್ಯೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಬೆಳ್ತಂಗಡಿ, ಜನವರಿ. 05 : ಎಂಡೋಸಲ್ಫನ್ ಪೀಡಿತ ಸೇರಿದಂತೆ ಒಂದೇ ಕುಟುಂಬದ ಐದು ಜನರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ನಡೆದಿದೆ.

ಕೊಕ್ಕ ಗ್ರಾಮದ ನಿವಾಸಿಗಳಾದ ಬಾಬು ಗೌಡ (62), ಪತ್ನಿ ಗಂಗಮ್ಮ (55), ಮಗ ಸದಾನಂದ (32) ಹಾಗೂ ಮತ್ತೊಬ್ಬ ಮಗ ನಿತ್ಯಾನಂದ (30) ಎಂಬುವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.

Five members of a family, including an endosulfan victim committed suicide at Kokkada belthangady

ದಯಾನಂದ ಎನ್ನುವರ ಮೃತ ದೇಹ ಇನ್ನು ಪತ್ತೆಯಾಗಿಲ್ಲ. ರಕ್ಷಣಾ ಸಿಬ್ಬಂದಿ ದಯಾನಂದ ಅವರ ಮೃತ ದೇಹಕ್ಕಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಇಬ್ಬರು ಮಾರಕ ಎಂಡೋಸಲ್ಫನ್ ಅಡ್ಡಪರಿಣಾಮದಿಂದ ಬಳಲುತ್ತಿದ್ದರು. ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Five members of a family, including an endosulfan victim, reportedly committed suicide by jumping into a lake in Kokkada village in Belthangady on January 5(Thursday) morning.
Please Wait while comments are loading...