ಬಂಟ್ವಾಳ: ಫಲ್ಗುಣಿ ನದಿಯಲ್ಲಿ ಈಜಲು ಹೋದ ಐವರು ಮಕ್ಕಳು ನೀರುಪಾಲು

Posted By:
Subscribe to Oneindia Kannada

ಮಂಗಳೂರು,ನವೆಂಬರ್7: ಫಲ್ಗುಣಿ ನದಿಗೆ ಸ್ನಾನ ಮಾಡಲು ತೆರಳಿದ್ದ ಐವರು ಮಕ್ಕಳು ನೀರುಪಾಲದ ಘಟನೆ ಬಂಟ್ವಾಳ ತಾಲೂಕಿನ ಮೂಲರಪಟ್ಣದಲ್ಲಿ ನಡೆದಿದೆ.

ಮಂಗಳೂರು: ಮಾಲಿನ್ಯದಿಂದ ಕಪ್ಪಾಯಿತು ಫಲ್ಗುಣಿ ನದಿ

ಸೋಮವಾರ ಸಂಜೆ ಮನೆಯಿಂದ ಹೋದವರು ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಮಕ್ಕಳ ಪೋಷಕರು ಹುಡುಕಾಟ ನಡೆಸಿದ ವೇಳೆ ನದಿಯ ದಡದ ಮೇಲೆ ಮಕ್ಕಳ ಬಟ್ಟೆಗಳು ಪತ್ತೆಯಾಗಿವೆ.

Five children drowned in Falguni river Bantwala

ಅಸ್ಲಾಮ್ ( 17), ರಮೂಜ್ (17), ಅಜಮಾತ್ (18), ಮುಬಾಶಿರ್ (17) ಹಾಗೂ ಸಮಾದ್ (17) ನೀರುಪಾಲಾದ ಮಕ್ಕಳು. ಮುಂಜಾನೆ ಸಮಾದ್ ಮೃತದೇಹ ಪತ್ತೆಯಾಗಿದ್ದು, ಇನ್ನುಳಿದ ನಾಲ್ವರ ಮಕ್ಕಳ ಮೃತ ದೇಹಕ್ಕಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
5 children died after drown into water in Falguni river in Mularapatna, Bantwala taluk. One children dead body are found on Tuesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ