ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರೋಬ್ಬರಿ 3 ಹೆಬ್ಬಾವು ಹಿಡಿದ ಮಂಗಳೂರು ಯುವಕರು!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ, 19: ಹಾವು ಎಂಬ ಹೆಸರು ಹೇಳಿದ ಕೂಡಲೇ ಬೆಚ್ಚಿಬೀಳುತ್ತೇವೆ. ಆದರೆ ಮಂಗಳೂರಿನ ಯುವಕರು ಬರೋಬ್ಬರಿ ಮೂರು ಹೆಬ್ಬಾವುಗಳನ್ನು ಹಿಡಿದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

ಸುಮನ್, ಹರ್ಷಿತ್, ಶ್ರವಣ್, ಆಶಿತ್, ಅಭಿಲಾಷ್ ಎಂಬುವರೇ ಮೂರು ಹೆಬ್ಬಾವುಗಳನ್ನು ಹಿಡಿದ ಯುವಕರು. ನಗರದ ಬೋಳೂರು ಸೊವರೀನ್ ಹೆಂಚಿನ ಕಾರ್ಖಾನೆಯ ಆವರಣದಲ್ಲಿದ್ದ ಮೂರು ಹೆಬ್ಬಾವನ್ನು ಹಿಡಿದ ಯುವಕರು ಇದನ್ನು ಪಿಲಿಕುಳ ನಿಸರ್ಗ ಧಾಮಕ್ಕೆ ಒಪ್ಪಿಸಿದ್ದು, ಜನರು ನಿರಾತಂಕವಾಗಿದ್ದಾರೆ.[ಹುಲಿ, ಮೇಕೆಯ ಹಾಡು..."ಯೇ ದೋಸತಿ ಹಮ್ ನಹಿ ಛೋಡೆಂಗೆ"]

Mangaluru

ಬೋಳೂರು ಸೊವರೀನ್ ಹೆಂಚಿನ ಕಾರ್ಖಾನೆಯಲ್ಲಿ ಹಲವಾರು ಮರದ ಸಾಮಗ್ರಿಗಳು ಇದ್ದವು. ಇಲ್ಲಿ ಕೆಲ ದಿನಗಳಿಂದ ಹೆಬ್ಬಾವುಗಳು ಸುತ್ತಾಡುತ್ತಿದ್ದವು. ಸ್ಥಳೀಯ ಮಹಿಳೆಯೊಬ್ಬರು ತೆಂಗಿನಕಾಯಿ ಆರಿಸಲೆಂದು ಹೋದ ವೇಳೆ ಹಲವಾರು ಬಾರಿ ಹೆಬ್ಬಾವುಗಳನ್ನು ನೋಡಿದ್ದರು. ಕಾರ್ಖಾನೆಯ ಕಾರ್ಮಿಕರು ಕೂಡಾ ಹೆಬ್ಬಾವುಗಳನ್ನು ಗಮನಿಸಿದ್ದರು.[ಮಂಡ್ಯದಲ್ಲಿ ಮನುಷ್ಯ ರೂಪದ ಕುರಿಮರಿ ಜನನ!]

ಮಾಲೀಕರ ಮಾತಿನ ಮೇರೆಗೆ ಹೆಬ್ಬಾವಿನ ಕಾರ್ಯಾಚರಣೆಗೆ ಇಳಿದ ಸ್ಥಳೀಯ ಯುವಕರಾದ ಸುಮನ್, ಹರ್ಷಿತ್, ಶ್ರವಣ್, ಆಶಿತ್, ಅಭಿಲಾಷ್ ಮೂರು ಹೆಬ್ಬಾವುಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹಿಡಿದ ಹೆಬ್ಬಾವುಗಳನ್ನು ಪಿಲಿಕುಳ ನಿಸರ್ಗ ಧಾಮಕ್ಕೆ ಒಪ್ಪಿಸಿದ್ದಾರೆ.[ಏಳು ಕೋಟಿ ಬೆಲೆಬಾಳುವ ಕೋಣವನ್ನು ನೋಡಿದ್ದೀರಾ?]

ಸುಮನ್ ಮತ್ತು ಹರ್ಷಿತ್ ಇದುವರೆಗೆ ಸುಮಾರು 60-70 ಹೆಬ್ಬಾವುಗಳನ್ನು ಹಿಡಿದಿದ್ದು, ಈ ತಿಂಗಳಲ್ಲಿ ಇಲ್ಲಿಯ ತನಕ ಒಟ್ಟು 16 ಹೆಬ್ಬಾವುಗಳನ್ನು ಹಿಡಿದ ಹೆಮ್ಮೆ ಇವರಿಗೆ. ಹೆಬ್ಬಾವುಗಳನ್ನು ಹಿಡಿದ ಯುವಕರ ಕೆಲಸವನ್ನು ಸ್ಥಳೀಯರು ಶ್ಲಾಘಿಸಿದರು.

English summary
Five boys Suman, Harshit, Shravan, Ashit, Abhilash caught three pythons in Mangaluru city and later handed over the snakes to Pilikula Nisargadhama, a biological park in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X