ಮಂಗಳೂರು : ನಾಡದೋಣಿ ಮುಳುಗಡೆ, ಇಬ್ಬರ ಸಾವು

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಆಗಸ್ಟ್ 06 : ಉಳ್ಳಾಲದ ಅಳಿವೆಬಾಗಿನಲ್ಲಿ ನಾಡ ಡೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರನೊಬ್ಬ ನೀರು ಪಾಲಾಗಿದ್ದಾನೆ. ಆತನನ್ನು ರಕ್ಷಣೆ ಮಾಡಲು ಬಂದವನು ಮೃತಪಟ್ಟಿದ್ದಾನೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಪಟ್ಟ ಮೀನುಗಾರನನ್ನು ಡೆಲ್ಲಿ ಚಂದನ್ (40) ಎಂದು ಗುರುತಿಸಲಾಗಿದೆ. ಚಂದನ್ ಮೂಲತಃ ತಮಿಳುನಾಡಿನವನು. ಈತನನ್ನು ರಕ್ಷಣೆ ಮಾಡಲು ಬಂದ ಫಯಾಜ್ ಎಂಬ ಉಳ್ಳಾಲದ ಕೋಟೆ ಪುರದ ನಿವಾಸಿಯೂ ಸಾವನ್ನಪ್ಪಿದ್ದಾನೆ.[ಮಂಗಳೂರು-ಲಕ್ಷದ್ವೀಪದ ನಡುವಿನ ಸಂಬಂಧ ಮತ್ತಷ್ಟು ವೃದ್ಧಿ]

mangaluru boat accident

ಶನಿವಾರ ಮಧ್ಯಾಹ್ನ ನಾಡದೋಣಿ ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಕಡಲಿನಲ್ಲಿ ಉಂಟಾದ ಏರಿಳಿತಗಳಿಂದ ಆಯತಪ್ಪಿ ದೋಣಿಯು ನೀರು ಪಾಲಾಗಿದೆ. ದೋಣಿಯಲ್ಲಿ ಮೆಹನಜ್ (46), ಕುಮಾರ್ (30) ಮತ್ತು ಡೆಲ್ಲಿ ಚಂದನ್ ಇದ್ದರು.['ಉಡುಪಿ ಮಲ್ಪೆ ಬೀಚ್' ವೈಫೈ ಪಡೆದ ದೇಶದ ಮೊದಲ ಬೀಚ್]

ದೋಣಿ ಮುಳುಗುವುದನ್ನು ನೋಡಿದ ಸ್ಥಳೀಯರು ರಕ್ಷಣೆಗೆ ಧಾವಿಸಿದರು. ದೋಣಿಯಲ್ಲಿದ್ದ ಮೆಹನಜ್ ಮತ್ತು ಕುಮಾರ್ ಅವರನ್ನು ರಕ್ಷಣೆ ಮಾಡಿದರು. ಡೆಲ್ಲಿ ಚಂದನ್ ಮೃತಪಟ್ಟರೆ, ಅವರನ್ನು ರಕ್ಷಣೆ ಮಾಡಲು ಹೋದ ಫಯಾಜ್ ಕೂಡಾ ಮೃತಪಟ್ಟಿದ್ದಾನೆ.

ದೋಣಿಯಲ್ಲಿದ್ದವರನ್ನು ರಕ್ಷಣೆ ಮಾಡಲು ಹೋದ ಫಯಾಜ್ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಕರಾವಳಿ ರಕ್ಷಣಾ ಪಡೆಯವರು ಕುಮಾರ್‌ನನ್ನು ವೈಮಾನಿಕ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಡೆಲ್ಲಿ ಚಂದನ್ ಶವ ಸಿಕ್ಕಿಲ್ಲ, ಹುಡುಕಾಟ ಮುಂದುವರೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A fishing boat capsized at Alivebagilu near Ullal on the afternoon of Saturday, August 6. The boat had three fishermen out of which two are safe while the third is missing.
Please Wait while comments are loading...