ಶಾರ್ಟ್ ಸರ್ಕ್ಯೂಟ್, ಮಂಗಳೂರು ಕಾರ್ಪೊರೇಶನ್ ಬ್ಯಾಂಕಿಗೆ ಬೆಂಕಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಎಪ್ರಿಲ್ 14: ಶಾರ್ಟ್ ಸರ್ಕ್ಯೂಟ್ ನಿಂದ ಕಾರ್ಪೊರೇಶನ್ ಬ್ಯಾಂಕ್ ಕಚೇರಿಗೆ ಬೆಂಕಿ ಹತ್ತಿಕೊಂಡ ಘಟನೆ ಶುಕ್ರವಾರ ಮಂಗಳೂರಿನ ಎಂ.ಜಿ ರಸ್ತೆಯಲ್ಲಿ ನಡೆದಿದೆ.

ಕಾರ್ಪೋರೇಶನ್ ಬ್ಯಾಂಕ್ ನ ಕ್ಯಾಶ್ ಕೌಂಟರ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಇದನ್ನ ನೋಡಿದ ಅಲ್ಲಿದ್ದ ಸ್ಥಳೀಯರು ತಕ್ಷಣ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿ ಬೆಂಕಿಯಿಂದಾಗುವ ದೊಡ್ಡ ಅನಾಹುತವನ್ನ ತಪ್ಪಿಸಿದರು. [ಇದು 56 ವಿದೇಶಿಯರ ಮಲಬಾರ್ ಆಟೋ ರಿಕ್ಷಾ ಚಾಲೆಂಜ್]

Fire Breaks Out At Mangaluru’s Corporation Bank Due To Short Circuit


ಬ್ಯಾಂಕ್ ಗೆ ರಜೆ ಇದ್ದ ಕಾರಣ ಯಾವುದೇ ಅನಾಹುತ ಸಂಭವಿಸಲಿಲ್ಲ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಮಂಗಳೂರಿನ ವಿದ್ಯಾರ್ಥಿಗಳಿಗೆ 'ನಾಸಾ'ದಲ್ಲಿ ವಿಶೇಷ ತರಬೇತಿ

ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜಿನ 51 ವಿದ್ಯಾರ್ಥಿಗಳು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ದಲ್ಲಿ ನಡೆದ 14 ದಿನಗಳ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. [ಹೈಟೆನ್ಶನ್ ತಂತಿ ತಗಲಿ ಮಂಗಳೂರಿನಲ್ಲಿ ಯುವಕ ಸಾವು]

Fire Breaks Out At Mangaluru’s Corporation Bank Due To Short Circuit

ಈ ಮೂಲಕ 'ಎಜುಕೇಶನಲ್ ಟೂರ್' ಹೆಸರಿನಲ್ಲಿ ಕಾಲೇಜು ತಮ್ಮ ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶ ನೀಡಿತು. 51 ವಿದ್ಯಾರ್ಥಿಗಳ ಜೊತೆಗೆ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಉಷಾ ಪ್ರಭಾ ಎನ್.ನಾಯಕ್ ಹಾರ್ವರ್ಡ್ ವಿಶ್ವವಿದ್ಯಾಲಯ, ಬೋಸ್ಟನ್ ನಲ್ಲಿರುವ ಪ್ರೀಮಿಯರ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಆಫ್ ದಿ ವರ್ಲ್ಡ್, ಎಂಐಟಿ, ನ್ಯೂಯಾರ್ಕ್‌, ವಾಷಿಂಗ್ಟನ್ ಡಿಸಿ, ಯುನಿವರ್ಸಲ್ ಸ್ಟೂಡಿಯೋ, ಡಿಸ್ನಿ ವಲ್ಡ್, ಓರ್ಲಾಂಡೋ ಮತ್ತು ಮಿಯಾಮಿಗೆ ಭೇಟಿ ನೀಡಿದರು.

Fire Breaks Out At Mangaluru’s Corporation Bank Due To Short Circuit

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mangaluru: A low magnitude fire mishap spread panic on the Corporation Bank of the MG Road branch here in the late hours today. The fire have been caused due to a short circuit.
Please Wait while comments are loading...