ಮಾನವೀಯತೆ ಮರೆತ ಜನರಿಗೆ ಏನು ಹೇಳಬೇಕು?

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜೂನ್ 23 : ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರ ವಿಕೃತ ವರ್ತನೆ ಬೆಚ್ಚಿ ಬೀಳಿಸುವಂತಿದೆ. ಭೀಕರ ಅಪಘಾತಗಳು ಆದಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ವಿಕೃತರು ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ತಮ್ಮ ವಿಕೃತ ಮನಸ್ಥಿತಿಯನ್ನು ತೋರ್ಪಡಿಸುತ್ತಿದ್ದಾರೆ. ಮಾನವೀಯತೆ ಎಂಬುದು ಮರೆಯಾಗಿದೆ.

ಕುಂದಾಪುರದಲ್ಲಿ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ 8 ಕಂದಮ್ಮಗಳು ಮೃತಪಟ್ಟ ಸಂದರ್ಭದಲ್ಲೂ ವಾಟ್ಸಾಪ್‌ನಲ್ಲಿ ಕೆಲ ವಿಕೃತ ಸಂದೇಶಗಳು ಹರಿದಾಡಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. [ಕುಂದಾಪುರ : ಭೀಕರ ಅಪಘಾತ, 8 ಶಾಲಾ ಮಕ್ಕಳ ದುರ್ಮರಣ]

fake news

ಕುಂದಾಪುರದಲ್ಲಿ ಅಪಘಾತ ನಡೆದ ತಕ್ಷಣ ಗಾಯಗೊಂಡಿದ್ದ ಪುಟಾಣಿಗಳನ್ನು ಆಸ್ಪತ್ರೆಗೆ ಕರೆತರಲಾಯಿತು. ಘಟನೆಯ ಬಗ್ಗೆ ತಿಳಿದ ಕೂಡಲೇ ಉಡುಪಿ ಜಿಲ್ಲೆ ದಿಗ್ಭ್ರಾಂತಗೊಂಡಿತ್ತು. ಜನರೆಲ್ಲರೂ ಪುಟಾಣಿಗಳನ್ನು ಕರೆತಂದಿದ್ದ ಆಸ್ಪತ್ರೆಗೆ ದೌಡಾಯಿಸಿದ್ದರು. [ಸೌಹಾರ್ದತೆ, ಸಮಯಪ್ರಜ್ಞೆ ಮೆರೆದ ಬಂಟ್ವಾಳದ ಅಬ್ದುಲ್ ನನ್ನು ಶ್ಲಾಘಿಸಿ]

ಈ ಸಂದರ್ಭ ಬಹುತೇಕರಿಗೆ ವಾಟ್ಸಾಪ್‌ನಲ್ಲಿ ತುರ್ತಾಗಿ ರಕ್ತ ಬೇಕು ಎನ್ನುವ ಸಂದೇಶಗಳು ಬಂದಿವೆ. ಇತ್ತ ದುಃಖದ ಮಡುವಿನಲ್ಲಿದ್ದ ಜನರಿಗೆ ಈ ಸಂದೇಶಗಳನ್ನು ನಂಬಬೇಕೋ? ಬಿಡಬೇಕೋ? ಎಂದು ತಿಳಿದಿಲ್ಲ. ದುಃಖದ ನಡುವೆಯೂ ಕೆಲವರು ಇದನ್ನು ಬೇರೆಯವರಿಗೆ ಕಳುಹಿಸಿದ್ದಾರೆ. ಆದರೆ, ಅದರಲ್ಲಿದ್ದ ಸಂಖ್ಯೆಗೆ ಕರೆ ಮಾಡಿದರೆ ಅವು ಅಸ್ತಿತ್ವದಲ್ಲೇ ಇರಲಿಲ್ಲ. [ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?]

ಯಾವುದೋ ಸಮಯದಲ್ಲಿ ನಡೆದ ಘಟನೆಗಳ ಫೋಟೊಗಳನ್ನು ಇನ್ಯಾವುದೋ ಘಟನೆಯ ಚಿತ್ರವೆಂದು ಹಾಕಿ, ಅಪಘಾತದ ಸ್ಥಳದ, ಗಾಯಾಳುಗಳ ಭೀಕರ ಫೋಟೊ, ವೀಡಿಯೊಗಳನ್ನು ಹಾಕುವುದು, ತುರ್ತಾಗಿ ರಕ್ತ ಬೇಕು ಎನ್ನುವ ಸುಳ್ಳು ಸಂದೇಶಗಳನ್ನು ಕಳುಹಿಸುವ ವಿಕೃತ ಪ್ರವೃತ್ತಿಯನ್ನು ಕೆಲವರು ಬೆಳೆಸಿಕೊಂಡಿದ್ದಾರೆ.

ಈಗ ಹರಿದಾಡುತ್ತಿರುವ ಇಂತಹ ಸಂದೇಶಗಳಿಂದಾಗಿ ನಿಜವಾಗಿಯೂ ರಕ್ತದ ಅವಶ್ಯಕತೆ ಇರುವವರು ಕಳುಹಿಸಿದ ಸಂದೇಶಗಳನ್ನೂ ನಂಬಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಜನರು ಮಾನವೀಯತೆಯನ್ನು ಏಕೆ ಮರೆತಿದ್ದಾರೆ? ಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕಿದೆ.

ಈಗಾಗಲೇ ವಾಟ್ಸಾಪ್, ಫೇಸ್‌ಬುಕ್ ಅದೆಷ್ಟೋ ಅಮಾಯಕರ ಜೀವದ ಜೊತೆ ಚೆಲ್ಲಾಟವಾಡಿ ಬಲಿ ತೆಗೆದುಕೊಂಡಿವೆ. ಆದರೂ ಇಂತಹ ವಿಚಿತ್ರ ಕೃತ್ಯಗಳಿಗೆ ಕಡಿವಾಣ ಬಿದ್ದಿಲ್ಲ. ಇಂತಹ ಹೃದಯವಿದ್ರಾವಕ ದುರಂತ ಸಂಭವಿಸಿದ ಸಂದರ್ಭದಲ್ಲೂ ವಿಕೃತರ ಮನಸ್ಸು ಕರಗುವುದಿಲ್ಲವೆಂದಾದರೆ ಬಹುಶಃ ಇದನ್ನು ಕಳುಹಿಸುವವರ ಮನುಷ್ಯತ್ವಕ್ಕೆ ಏನನ್ನಬೇಕು?.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We are losing our sense of humanity by spreading fake news in social media. Why people lose their humanity?
Please Wait while comments are loading...