ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್ಸಾರ್ಟೀಸಿ ಬಸ್ ಗಳಲ್ಲಿ ನಕಲಿ ನೋಟಿನ ಹಾವಳಿ, ಕಂಡಕ್ಟರ್ ಕಂಗಾಲು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 20: ಮಂಗಳೂರು - ಭಟ್ಕಳ ರೂಟ್ ನ ಬಸ್ ನಲ್ಲಿ ನಕಲಿ ನೋಟ್ ಗಳು ಚಲಾವಣೆಯಾಗುತ್ತಿದ್ದು, ಕೆಎಸ್ ಆರ್ ಟಿಸಿ ಬಸ್ ನಿರ್ವಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.

ದೇಶದಲ್ಲಿ ಕಪ್ಪು ಹಣ, ಭ್ರಷ್ಟಾಚಾರ ನಿಯಂತ್ರಣ, ನಕಲಿ ನೋಟು ಜಾಲ, ಅಕ್ರಮ ದಂಧೆಯನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ 500 ಹಾಗೂ 1000 ಸಾವಿರ ರೂಪಾಯಿ ನೋಟುಗಳ ನಿಷೇಧ ಮಾಡಿದ್ದರು. ಆದರೂ ನಕಲಿ ನೋಟುಗಳ ದಂಧೆ ನಿಯಂತ್ರಣಕ್ಕೆ ಬಾರದೆ ಕೆಎಸ್ ಆರ್ ಟಿಸಿ ಬಸ್ ನಿರ್ವಾಹಕರಿಗೆ ಸಮಸ್ಯೆ ತಂದೊಡ್ಡಿದೆ.

ಕೊಡಗಿನಲ್ಲಿ 500 ರೂಪಾಯಿಯ ನಕಲಿ ನೋಟು ಪತ್ತೆಕೊಡಗಿನಲ್ಲಿ 500 ರೂಪಾಯಿಯ ನಕಲಿ ನೋಟು ಪತ್ತೆ

ನೋಟು ನಿಷೇಧದ ನಂತರ ಚಲಾವಣೆಗೆ ಬಂದ 2000 ರುಪಾಯಿ ಮತ್ತು 500 ರುಪಾಯಿ ಹೊಸ ನೋಟುಗಳು ಕೂಡ ಈಗ ನಕಲು ಮಾಡಿದ್ದು, ನಕಲಿ ನೋಟುಗಳ ಚಲಾವಣೆ ವ್ಯಾಪಕವಾಗಿ ನಡೆಯತ್ತಿದೆ. ಮಂಗಳೂರು - ಭಟ್ಕಳ ಮಧ್ಯೆ ರಾತ್ರಿ ಹೊತ್ತು ಸಂಚರಿಸುವ ಕೆಎಸ್ ಆರ್ ಟಿಸಿ ಐರಾವತ ಬಸ್ ಗಳಲ್ಲಿ ಈ ಕಳ್ಳ ನೋಟುಗಳ ಜಾಲ ಜೋರಾಗಿದ್ದು, ಇದಕ್ಕೆ ಬಸ್ ನಿರ್ವಾಹಕರು ಬಲಿಯಾಗುತ್ತಿದ್ದಾರೆ.

Fake currency

ಐರಾವತ ಹಾಗೂ ದೂರದ ಊರುಗಳಿಗೆ ತೆರಳುವ ಬಸ್ ಗಳಲ್ಲಿ ಮಾತ್ರ ಈ ರೀತಿಯ ವಂಚನೆ ನಡೆಯುತ್ತಿದ್ದು, ಬಸ್ ಗಳಲ್ಲಿ ನಕಲಿ ನೋಟು ಪತ್ತೆ ಮೆಷಿನ್ ಗಳು ಇಲ್ಲದ ಕಾರಣ ಸುಲಭವಾಗಿ ನಿರ್ವಾಹಕರು ಈ ವಂಚನೆಯ ಜಾಲಕ್ಕೆ ಬಲಿಯಾಗುತ್ತಿದ್ದಾರೆ.

ರಾತ್ರಿ ವೇಳೆ ಸಂಚರಿಸುವ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇದೇ ಸಮಯ ನೋಡಿ ಕಳ್ಳ ನೋಟುಗಳ ಚಲಾವಣೆಯಾಗುತ್ತಿದೆ. ಪ್ರಯಾಣಿಕರು ಬಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ನಿರ್ವಾಹಕರಿಗೆ ನಕಲಿ ನೋಟಗಳನ್ನು ಪತ್ತೆ ಹಚ್ಚಲು ಸಮಯ ಕೂಡ ಇರುವುದಿಲ್ಲ.

ಆದರೆ, ಸಂಗ್ರಹಿಸಲಾದ ಟಿಕೆಟ್ ಹಣ ಪಾವತಿಸುವ ವೇಳೆ ಕೌಂಟಿಂಗ್ ಮಷಿನ್ ನಲ್ಲಿ 2 ಸಾವಿರ ರುಪಾಯಿ ನಕಲಿ ನೋಟುಗಳು ಪತ್ತೆಯಾಗುತ್ತಿದ್ದು , ಈ ಮೊತ್ತವನ್ನು ಅಧಿಕಾರಿಗಳ ಸೂಚನೆ ಮೇರೆಗೆ ನಿರ್ವಾಹಕರೇ ತಮ್ಮ ಸಂಬಳದಿಂದ ಭರಿಸಬೇಕಾಗುತ್ತದೆ.

ದೂರಕ್ಕೆ ಪ್ರಯಾಣಿಸುವ ವೇಳೆ ಕೆಲವು ಪ್ರಯಾಣಿಕರು ಜಂಕ್ಷನ್ ಗಳಲ್ಲಿ ಬಸ್ ಹತ್ತಿ, ಇಳಿಯುತ್ತಾರೆ. ಈ ಸಂದರ್ಭದಲ್ಲಿ ಅವರು ನಿರ್ವಾಹಕರಿಂದಲೇ ಟಿಕೆಟ್ ಪಡೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡುವುದು ಸುಲಭವಾಗಿದೆ. ಈ ಹಿನ್ನೆಲೆಯಲ್ಲಿ ದೂರ ಊರುಗಳಲ್ಲಿ ಪ್ರಯಾಣ ಮಾಡುವ ಬಸ್ ಗಳಲ್ಲಿ ನಕಲಿ ನೋಟುಗಳನ್ನು ಪತ್ತೆ ಹಚ್ಚುವ ಮಷಿನ್ ಆಳವಡಿಕೆ ಮಾಡಿದರೆ ಉತ್ತಮ ಎನ್ನುತ್ತಾರೆ ಬಸ್ ನ ನಿರ್ವಾಹಕರು.

ಕೆಎಸ್ ಆರ್ ಟಿಸಿಗೆ ಹೊಸದಾಗಿ ಸೇರುವ ಸಿಬ್ಬಂದಿಗೆ ಸಿಗುವ ಸಂಬಳ ಅತಿ ಕಡಿಮೆ ಇರುತ್ತದೆ. ಈ ಮಧ್ಯೆ ನಕಲಿ ನೋಟುಗಳ ಸಿಕ್ಕಿ ಬಿದ್ದರಂತೂ ಅವರ ಪರಿಸ್ಥಿತಿ ಶೋಚನಿಯವಾಗಿರುತ್ತದೆ. 2 ಸಾವಿರ ರುಪಾಯಿಯ ಒಂದು ನಕಲಿ ನೋಟು ಸಿಕ್ಕಿದರೂ ನಿರ್ವಾಹಕ ತನ್ನ ಸಂಬಳದಿಂದ ಭರಿಸಬೇಕು.

ಅಲ್ಲದೇ ಈಗ ಚಲಾವಣೆಯಲ್ಲಿರುವ ನೋಟುಗಳ ಹೊಸದಾದ್ದರಿಂದ ನಕಲಿ ಯಾವುದು ಎಂಬ ವ್ಯತ್ಯಾಸವೇ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಬಸ್ ನಿರ್ವಾಹಕರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ವ್ಯವಹಾರಗಳಿರುವ ಪ್ರದೇಶಗಳಲ್ಲಿ ನಕಲಿ ನೋಟು ಪತ್ತೆ ಯಂತ್ರವನ್ನು ಆಳವಡಿಸಿದರೆ ಉತ್ತಮ ಎಂಬ ಮಾತುಗಳು ಕೇಳಿ ಬರುತ್ತಿವೆ.

English summary
Fake currency problem to KSRTC bus conductors in Mangaluru- Bhatkala route. New notes cannot be identified. So, conductors urging to issue note machine to find out fake currency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X