ನಕಲಿ ಪ್ರಮಾಣಪತ್ರ ಜಾಲ ಭೇದಿಸಿದ ಮಂಗ್ಳೂರು ಪೊಲೀಸರು

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು,ಫೆ.10: ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಇವರು ಮಂಗಳೂರಿನ ಇನ್ ಸ್ಟಿಟ್ಯೂಷನ್ ಆಫ್ ಮ್ಯಾನೇಜ್ ಮೆಂಟ್ ಆಂಡ್ ಇಂಜಿನಿಯರಿಂಗ್ ಕಾಲೇಜಿನ ಕಚೇರಿಯಲ್ಲಿ ನಕಲಿ ಅಂಕಪಟ್ಟಿ ತಯಾರಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಪೆರ್ಮಾನೂರಿನ ನಿವಾಸಿ, ಮೆಕ್ಯಾನಿಕಲ್ ಇಂಜಿನಿಯರ್ ಅಸ್ಕಾನ್ ಖಾನ್ (22) ಹಾಗೂ ಕೂಲೂರು ರಾಯಿಕಟ್ಟೆಯ ಎಂ.ಕಾಂ. ಪದವೀಧರ ಗೌತಮ್ ಆರ್ (32) ಹಣಕ್ಕಾಗಿ ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಆರೋಪಿಗಳು. ಇವರು ವಿವಿಧ ವಿಶ್ವವಿದ್ಯಾನಿಲಯಗಳ ಹಾಗೂ ಶಿಕ್ಷಣ ಸಂಸ್ಥೆಗಳ. ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದರು.[ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬಂತು ಮೊಬೈಲ್ ಆಪ್]

Mangaluru

ಬಂಧಿತ ಆರೋಪಿಗಳಿಂದ 3 ಲ್ಯಾಪ್ ಟಾಪ್, 18 ನಕಲಿ ಸೀಲ್, ನಕಲಿ ಅಂಕಪಟ್ಟಿ ತಯಾರಿಸುವ ಪ್ರಿಂಟರ್ ಹಾಗೂ ಪೇಪರ್, ಹೋಲೊಗ್ರಾಂ ಸ್ಟಿಕ್ಕರ್ ವಶಪಡಿಸಿಕೊಳ್ಳಲಾಗಿದೆ. ಸಿಸಿಬಿ ಘಟಕದ ಇನ್ ಸ್ಪೆಕ್ಟರ್ ವೆಲೆಂಟೈನ್ ಡಿಸೋಜ, ಪಿಎಸ್ಐ ಶ್ಯಾಮ್ ಸುಂದರ್ ನೇತೃತ್ವದ ಮಂಗಳೂರು ಸಿಸಿಬಿ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎಂ.ಚಂದ್ರಶೇಖರ್ ತಿಳಿಸಿದರು.[2016ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ]

ಯಾವ ಪ್ರಮಾಣಪತ್ರಕ್ಕೆ ಎಷ್ಟು ಬೆಲೆ?

ಬಂಧಿತ ಆಸ್ಕಾನ್ ಅವರೇ 2015ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿದ ಈತ ಮಂಗಳೂರು ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಆಂಡ್ ಇಂಜಿನಿಯರಿಂಗ್ ಸಂಸ್ಥೆ ಆರಂಭಿಸಿದ್ದನು. ಇದು ಯಾವುದೇ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿರಲಿಲ್ಲ.

ಇವರಿಬ್ಬರು ಸೇರಿಕೊಂಡು ಎಸ್ಎಸ್ಎಲ್ ಸಿ ಮತ್ತು ಪಿಯುಸಿ ನಕಲಿ ಪ್ರಮಾಣ ಪತ್ರಕ್ಕೆ 10 ಸಾವಿರ ರೂ, ಪದವಿ, ಡಿಪ್ಲೋಮ ಪ್ರಮಾಣ ಪತ್ರಕ್ಕೆ 35 ಸಾವಿರ ರೂ, ಎಂಬಿಎ ಪ್ರಮಾಣಪತ್ರಕ್ಕೆ 45 ಸಾವಿರ ರೂ ತೆಗೆದುಕೊಳ್ಳುತ್ತಿದ್ದರು. ಆರೋಪಿಗಳು ಸುಮಾರು 200 ಜನರಿಗೆ ವಿವಿಧ ಕೋರ್ಸ್ ಗಳ ನಕಲಿ ಪ್ರಮಾಣಪತ್ರ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Fake certificate racket, ccb police arrested 2 Askhan Khan (22), Goutham R (32) people in Mangaluru on Tuesday, Febrauray 09th.
Please Wait while comments are loading...