ಫೇಸ್ ಬುಕ್ ಪ್ರಿಯಕರನಿಗಾಗಿ ಗಂಡ, ಮಕ್ಕಳನ್ನು ತೊರೆದ ಪತ್ನಿ

Posted By:
Subscribe to Oneindia Kannada

ಮಂಗಳೂರು: ಹದಿಹರೆಯದವರಿಗೆ ಮಾತ್ರವಲ್ಲ ಮದ್ಯ ವಯಸ್ಕರೂ ಫೇಸ್ ಬುಕ್ ಮೂಲಕ ಲವ್ ನ ಸೆಳೆತಕ್ಕೊಳಗಾಗುತ್ತಿದ್ದಾರೆ. 34 ರ ಹರೆಯದ ಮಹಿಳೆಯೋರ್ವರು ಫೇಸ್ ಬುಕ್ ಪ್ರಿಯಕರನಿಗಾಗಿ ಪತಿ, ಮಕ್ಕಳನ್ನು ತೊರೆದ ಪ್ರಕರಣವೊಂದು ಬೆಳ್ತಂಗಡಿಯಿಂದ ವರದಿಯಾಗಿದೆ.

ಒಬ್ಬಳು ಮಗಳು 9 ನೇ ತರಗತಿಯಲ್ಲಿ , ಇನ್ನೊಬ್ಬಳು 4 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪತಿ ರಬ್ಬರ್ ಟ್ಯಾಪಿಂಗ್ ಉದ್ಯೋಗಿ. ತನ್ನ ಹೆಸರನ್ನು ಫೇಸ್ ಬುಕ್ ನಲ್ಲಿ ಗೀತಾ ಎಂದು ಪರಿಚಯಿಸಿದ್ದು, ಮಾತ್ರವಲ್ಲ ವಯಸ್ಸು 28 ಎಂದು ನಮೂದಿಸಿದ್ದಳು. ವಾಸ್ತವದಲ್ಲಿ ಈಕೆ ಕ್ರೈಸ್ತ ಮಹಿಳೆ.

Facebook love trap: married women ran away to marry a youth man in Kannur

ಫೇಸ್ ಬುಕ್ ನಲ್ಲಿ ಕೇರಳ ಕಣ್ಣೂರಿನ ಕೈತೆರಿಯ ಯುವಕನೊಬ್ಬನ ಪರಿಚಯ ಪ್ರೇಮದ ಹಂತಕ್ಕೆ ತಿರುಗಿತ್ತು. ತನಗೆ ಮದುವೆಯಾಗಿ ಮಕ್ಕಳಿದ್ದಾರೆ ಎಂಬ ವಿಷಯವನ್ನು ಮುಚ್ಚಿಟ್ಟಿದ್ದು ಮಾತ್ರವಲ್ಲ ಗೀತಾ ಎಂಬ ಹೆಸರನ್ನು ಸಾಬೀತು ಪಡಿಸಲು ಗೀತಾ ಎಂಬ ಶಿಕ್ಷಕಿಯ ಹತ್ತನೇ ತರಗತಿಯ ಸರ್ಟಿಫಿಕೇಟ್ ಗೆ ತನ್ನ ಫೋಟೋ ಅಂಟಿಸಿ ನಕಲಿ ಸರ್ಟಿಫಿಕೇಟ್ ಕೂಡ ಸಿದ್ದ ಪಡಿಸಿದ್ದಳು.

ಕೇರಳಕ್ಕೆ ತೆರಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿಯನ್ನೂ ಮಾಡಿಕೊಂಡಿದ್ದಾಯ್ತು. ಆದರೆ, ಬೆಳ್ತಂಗಡಿ ಪೊಲೀಸರು ಹುಡುಕಿ ತೆಗೆದಾಗ ಸತ್ಯ ಬಯಲಾಗಿತ್ತು.

ಏ. 7 ರಂದು ಗೀತಾ ಕಾಣೆಯಾದ ಬಗ್ಗೆ ಆಕೆಯ ಪತಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಹುಡುಕಾಟ ನಡೆಸಿದಾಗ ಕೇರಳದಲ್ಲಿರುವುದು ಗೊತ್ತಾಯಿತು. ಈಗ ಮರಳಿ ಊರಿಗೆ ಕರೆತರುವ ಕಾರ್ಯ ಮುಂದುವರೆದಿದೆ. ಕೇರಳದ ಯುವಕನಿಗೆ ಮಹಿಳೆಯ ವಂಚನೆಯೂ ಗೊತ್ತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Married women from Belthangadi has deceived a youth through Facebook saying she was not married and finally left her kids and husband to marry the same youth in Kannur. On the basis of missing complaint registered by her husband, police discovered the truth and brought her back to Mangaluru.
Please Wait while comments are loading...