ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ಸಾಗಾಟ ಜಾಲ ಪತ್ತೆ

Posted By:
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 15: ಗುರುವಾರ ನವಮಂಗಳೂರು ಬಂದರಿಗೆ ವಿದೇಶದಿಂದ ಬಂದ ಕಂಟೇನರ್ ಒಂದರಲ್ಲಿ ಭಾರಿ ಪ್ರಮಾಣದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳು ಪತ್ತೆಯಾಗಿದೆ.

ಶ್ರೀಲಂಕಾದಿಂದ ಬಂದಿರುವ ಕಂಟೇನರ್ ನಲ್ಲಿ ಭಾರಿ ಪ್ರಮಾಣದಲ್ಲಿ ಮಾದಕ ವಸ್ತು ಪತ್ತೆಯಾಗಿದ್ದು ಅದನ್ನು ಕೇಂದ್ರ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ . ಶ್ರೀಲಂಕಾದ ಕೊಲಂಬೊದಿಂದ ಹಡಗಿನ ಮೂಲಕ ಕೆಲವು ದಿನಗಳ ಹಿಂದೆ ಬಂದ ಕಂಟೇನರ್ ನಲ್ಲಿ ಇದು ಪತ್ತೆಯಾಗಿದೆ.

Excise department seize huge Marijuana in shipping container at Mangaluru

ಇಂದು ಕಂಟೇನರ್ ನ ಎಸಿ ರಿಪೇರಿಗೆ ತೆರಳಿದ ತಾಂತ್ರಿಕ ಸಿಬ್ಬಂದಿಗಳು ಕಂಟೇನರ್ ನಲ್ಲಿ ಭಾರಿ ಪ್ರಮಾಣದ ಮಾದಕ ವಸ್ತು ಇರುವುದು ಪತ್ತೆ ಮಾಡಿದ್ದಾರೆ . ಈ ಕುರಿತು ಮಾಹಿತಿ ಪಡೆದ ಕೇಂದ್ರ ಅಬಕಾರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

Excise department seize huge Marijuana in shipping container at Mangaluru

ಅಂತರರಾಷ್ಟ್ರೀಯ ಅಕ್ರಮ ಮಾದಕ ವಸ್ತು ಸಾಗಾಟದ ಜಾಲ ಇದಾಗಿದ್ದು ಈ ಕುರಿತು ತನಿಖೆ ತೀವ್ರಗೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Excise department seize huge Marijuana in shipping container at New Mangalore port here on September 14. It is said that the container had reached from Sri Lanka to Mangaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ