ಬಿಎಸ್ ವೈಗೆ ಸುತ್ತಾಡುವುದೇ ಕೆಲಸ: ಸಿದ್ದರಾಮಯ್ಯ ವ್ಯಂಗ್ಯ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ .19: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರಿಗೆ ರಾಜ್ಯ ಸರಕಾರವನ್ನು ಟೀಕಿಸುವುದೇ ಕೆಲಸ. ಅವರು ಸುತ್ತಾಡುವುದನ್ನು ಬಿಟ್ಟು ದಿಲ್ಲಿಯಲ್ಲಿ ಮಾತನಾಡಲಿ. ಬರ ಪರಿಹಾರಕ್ಕೆ ಸಂಬಂಧಿಸಿ ರಾಜ್ಯಕ್ಕೆ ಹೆಚ್ಚು ಅನುದಾನ ಸಿಗುವಂತೆ ಮಾಡಲು ಶ್ರಮಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಗಳೂರು ಮತ್ತು ಕಾಸರಗೋಡಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.[ಘಂಟಾನಾದ ಸಾಲ್ದು, ಸಂಬಳ ಏರಿಕೆ ಮಾಡಿ: ಅರ್ಚಕರ ಬೇಡಿಕೆ]

Ex cm B.S.Yaddyurappa waster her own time,CM Siddaramaiah

ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಕೇವಲ ವದಂತಿ ಎಂದ ಸಿದ್ದರಾಮಯ್ಯ, ಎತ್ತಿನಹೊಳೆ ಯೋಜನೆ ವಿರುದ್ಧದ ಹೋರಾಟ ರಾಜಕೀಯ ಪ್ರೇರಿತ ಎಂದು ಅವರು ಹೇಳಿದರು.

ಬರ ಪರಿಹಾರಕ್ಕೆ ಕೇಂದ್ರದ ಕೊಡುಗೆ ಕುರಿತಂತೆ ರಾಜ್ಯ ಸರಕಾರವನ್ನು ಟೀಕಿಸುತ್ತಿರುವ ಬಿಎಸ್ ವೈ ವಿರುದ್ಧ ಮುಖ್ಯಮಂತ್ರಿ ಕಿಡಿಕಾರಿದರು. ಸಚಿವ ರಮೇಶ್ ಜಾರಕಿಹೊಳಿ ಮನೆಗೆ ಐಟಿ ಅಧಿಕಾರಿಗಳ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಧಿಕಾರಿಗಳ ನಡೆ ನಡೆಯಲಿ ಸತ್ಯಾಂಶ ಹೊರಬೀಳಲಿ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ex cm B.S.Yaddyurappa waster her own time says Chief minister Siddaramaiah at Mangalore airport. Instead, the central government should talk with drought relief Siddaramaiah said.
Please Wait while comments are loading...