ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲಿನ ಫೋಟೋ ತೆಗೆಯಲು ಹೋಗಿ ವಿದ್ಯಾರ್ಥಿನಿ ಸಾವು

|
Google Oneindia Kannada News

ಮಂಗಳೂರು, ಸೆ. 29 : ರೈಲಿನ ಫೋಟೋ ತೆಗೆಯಲು ಹೋದ ವಿದ್ಯಾರ್ಥಿನಿಯೊಬ್ಬಳು ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಪುತ್ತೂರು ವಿವೇಕಾನಂದ ಕಾಲೇಜು ಬಳಿ ಭಾನುವಾರ ನಡೆದಿದೆ. ಒಟ್ಟು ನಾಲ್ವರು ವಿದ್ಯಾರ್ಥಿನಿಯರು ಫೋಟೋ ತೆಗೆಯಲು ಹೋಗಿದ್ದು ಇನ್ನೊಬ್ಬಳು ಗಾಯಗೊಂಡಿದ್ದಾಳೆ.

ಮೃತಪಟ್ಟ ವಿದ್ಯಾರ್ಥಿನಿಯನ್ನು ಮಂಗಳೂರಿನ ದೇರೆಬೈಲ್‌ ಕೊಂಚಾಡಿ ನಿವಾಸಿ ವರ್ಷಾ (20) ಎಂದು ಗುರುತಿಸಲಾಗಿದೆ. ಈಶ್ವರಮಂಗಳ ನಿವಾಸಿ ರಚನಾ (20) ಗಾಯಗೊಂಡ ವಿದ್ಯಾರ್ಥಿನಿಯಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭಾನುವಾರ ಮಧ್ಯಾಹ ಎಲ್ಲರೂ ರೈಲಿನ ಫೋಟೋ ತೆಗೆಯಲು ಹೋದಾಗ ಈ ಘಟನೆ ನಡೆದಿದೆ.

Puttur

ಫೋಟೋ ತೆಗೆಯಲು ಹೋಗಿದ್ದರು : ವರ್ಷಾ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ವ್ಯಾಸಂಗ ಮಾಡುತ್ತಿದ್ದರು. ಭಾನುವಾರ ವರ್ಷಾ, ರಚನಾ ಹಾಗೂ ಇತರ ಇಬ್ಬರು ಪುತ್ತೂರು ವಿವೇಕಾನಂದ ಕಾಲೇಜಿನ ಸಮೀಪದ ರೈಲ್ವೆ ಹಳಿ ಬಳಿ ಫೋಟೋ ತೆಗೆಯಲು ಹೋಗಿದ್ದರು. ರಚನಾ ಮತ್ತು ವರ್ಷಾ ರೈಲ್ವೆ ಹಳಿಯ ಮೇಲೆ ನಿಂತು ಫೋಟೋ ತೆಗೆದುಕೊಳ್ಳುತ್ತಿದ್ದರು.

ಈ ಸಂದರ್ಭದಲ್ಲಿ ರೈಲು ಆಗಮಿಸಿದೆ, ಇದನ್ನು ಗಮನಿಸಿದ ಸಹಪಾಠಿಗಳು ತಪ್ಪಿಸಿಕೊಳ್ಳುವಂತೆ ರಚನಾ ಮತ್ತು ವರ್ಷಾಗೆ ಹೇಳಿದರು. ಈ ಸಂದರ್ಭದಲ್ಲಿ ರಚನಾ ಹಳಿಯಿಂದ ಪಕ್ಕಕ್ಕೆ ಜಿಗಿದಿದ್ದು ಆಕೆ ಗಾಯಗೊಂಡಿದ್ದಾಳೆ. ಆದರೆ, ವರ್ಷಾ ರೈಲು ಬರುತ್ತಿದ್ದಂತೆ ಗಾಬರಿಗೊಂಡಿದ್ದು, ಹಳಿಯಿಂದ ತಪ್ಪಿಸಿಕೊಳ್ಳುವಾಗ ಅವಳ ಚೂಡಿದಾರದ ವೇಲ್ ಹಳಿಗೆ ಸಿಲುಕಿತ್ತು.

ವರ್ಷಾ ತಪ್ಪಿಸಿಕೊಳ್ಳುವುದಕ್ಕೂ ಮೊದಲೇ ರೈಲು ಆಕೆಗೆ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಆಕೆ ಮೃತಪಟ್ಟಿದ್ದಾಳೆ. ಹಳಿಯಿಂದ ಜಿಗಿದ ರಚನಾ ಕೈಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೃತ ವಿದ್ಯಾರ್ಥಿನಿ ವರ್ಷಾಳ ತಂದೆ ದಯಾನಂದ ಆಳ್ವ ಅವರು ಮಣಿಪಾಲ ಗ್ರೂಪ್‌ನ ಭದ್ರತಾ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. [ಚಿತ್ರಗಳು : ಐಸಾಕ್ ರಿಚರ್ಡ್ ಮಂಗಳೂರು]

English summary
In a tragic accident a 20- year-old girl lost her life when she was hit by a moving train near Vivekananda College of Puttur on Sunday, September 28. The deceased has been identified as Varsha (20). Railway police said Varsha and her friendra taking photographs of train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X