ಎಂಡೋಸಲ್ಫ್ರಾನ್ ಸಂತ್ರಸ್ತರಿಗೆ ಏಪ್ರಿಲ್ ನಿಂದ ಪೌಷ್ಟಿಕ ಆಹಾರ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್ 9: ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಮುಂದಿನ 2017ರ ಏಪ್ರಿಲ್‌ನಿಂದ ಪೌಷ್ಟಿಕಾಂಶವಿರುವ ಆಹಾರವನ್ನು ಒದಗಿಸಲು ಸಮೀಕ್ಷೆ ನಡೆಸಿ ಆಹಾರ ಪಟ್ಟಿ ಸಿದ್ದಪಡಿಸಲಾಗಿದೆ.

ಪೌಷ್ಟಿಕ ಆಹಾರದಲ್ಲಿ ಮೀನಿನ ಪದಾರ್ಥ(ಫಿಶ್ ಕರಿ), ಮೊಟ್ಟೆ, ತರಕಾರಿ ಇಡ್ಲಿ, ದವಸ ದಾನ್ಯಗಳಿಂದ ಮಾಡಿದ ದೋಸೆ, ರಾಗಿ ಮತ್ತು ಸೇಬು, ಪಪ್ಪಾಯಿ, ಕಲ್ಲಂಗಡಿಗಳು ಇವೆ.[ಸರ್ಕಾರ ಅನುಮತಿ ಕೊಟ್ಟರೆ ಬೀದರ್ ನಲ್ಲಿ ಪತಂಜಲಿ ಫುಡ್ ಪಾರ್ಕ್]

Endosulfan victims to get new food chart from April 2017

ದ.ಕ ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಡೈಯೆಟೇಶಿಯನ್ ಜೊತೆ ಸಮಾಲೋಚನೆ ನಡೆಸಿ ಜಿಲ್ಲೆಯಲ್ಲಿರುವ ಎಂಡೋಸಲ್ಫಾನ್ ಆರೋಗ್ಯ ಕೇಂದ್ರಗಳಾದ ಕೊಕ್ಕಡ ಮತ್ತು ಕೊಯ್ಲಾ ಹಳ್ಳಿಗಳಲ್ಲಿ ಆರೈಕೆ ಕೇಂದ್ರಗಳಲ್ಲಿ ಈ ಮೇಲೆ ತಿಳಿಸಲಾದ ಪೌಷ್ಟಿಕಾಂಶವಿರುವ ಆಹಾರ ಪಟ್ಟಿಯನ್ನು 2017ರ ಏಪ್ರಿಲ್ ತಿಂಗಳಿನಿಂದ ಅನುಸರಿಸುವಂತೆ ಸಮೀಕ್ಷೆ ನಡೆಸಲಾಗಿದೆ.

ಪ್ರಸ್ತುತವಾಗಿ ಈ ಎರಡು ಆರೈಕೆ ಕೇಂದ್ರಗಳು ಈಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಂತರ್ಗತ ಒಪ್ಪಂದದ ಮೇರೆಗೆ ಕಾರ್ಯನಿರ್ವಹಿಸುತ್ತಿದೆ. ಈ ಒಪ್ಪಂದ ಮುಂದಿನ ಮಾರ್ಚ್ ತಿಂಗಳಿನಲ್ಲಿ ಕೊನೆಗೊಳ್ಳಲಿದ್ದು ನಂತರ ಏಪ್ರಿಲ್ ತಿಂಗಳಿನಿಂದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಒದಗಿಸಲಾಗುವುದು.[ಅಂಚೆ ಇಲಾಖೆಯಿಂದ ಬೇಳೆಕಾಳು ಮಾರಾಟ]

ಕೇವಲ ಆಹಾರ ಪಟ್ಟಿ ಮಾತ್ರವಲ್ಲದೆ ಈ ಎರಡು ಆರೈಕೆ ಕೇಂದ್ರಗಳಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಸಾರಿಗೆ ಸೌಲಭ್ಯ ಮತ್ತು ಸೂಕ್ತ ತರಬೇತಿ ನೀಡುವುದಾಗಿ ಎಂಡೋಸಲ್ಫಾನ್ ಕಾರ್ಯಕರ್ತರು ತಿಳಿಸಿದ್ದಾರೆ. ಇಂತಹ ಸೌಲಭ್ಯದ ಅನುಮೋದನೆಯನ್ನು 2011ರಲ್ಲಿ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿರಲಿಲ್ಲ. ಇದೇ ವರ್ಷದಲ್ಲಿ ರು 1.25ಕೋಟಿ. ಎಂಡೋಸಲ್ಫಾನ್ ಸಂತ್ರಸ್ತರ ಅಭಿವೃದ್ಧಿಗಾಗಿ ಮೀಸಲಿಡಲಾಗಿತ್ತು.
ಆದರೇ ಈ ಬಾರಿ ಏಪ್ರಿಲ್ ತಿಂಗಳಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾರ್ಗದರ್ಶನದಂತೆ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ವಿಶೇಷ ಶಿಕ್ಷಕರನ್ನೂ ನೇಮಕ ಮಾಡಲಾಗುವುದು.

ಈ ಕುರಿತು ಮಾಹಿತಿ ನೀಡಿದ ಜಿಲ್ಲೆಯ ನೋಡಲ್ ಅಧಿಕಾರಿ ಅರುಣ್ ಕುಮಾರ್ ಎಸ್ ಬಿ, ಆಹಾರ ಪಟ್ಟಿಯಲ್ಲಿ ಸೂಚಿಸಲಾದ ಪೌಷ್ಟಿಕಾಂಶಗಳನ್ನು ಅತೀ ಶೀಘ್ರದಲ್ಲಿ ಬಿಡುಗಡೆ ಮಾಡುವುದು ಮಾತ್ರವಲ್ಲದೆ ಮುಂದಿನ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯ ಎರಡು ಆರೈಕೆ ಕೇಂದ್ರಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು. ಇನ್ನೂ ಜಿಲ್ಲಾಧಿಕಾರಿ ಕೆ. ಜಗದೀಶ್ ಅವರು ಶೀಘ್ರದಲ್ಲೇ ಈ ಒಪ್ಪಂದಕ್ಕೆ ಅನುಮೋದನೆ ನೀಡಲಿರುವರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Endosulfan victims, who visit the centers in Dakshina Kannada, will get fish curry and egg on alternate days for lunch. They will be served vegetable idli, multigrain dosa, ragi and a bowl of apple, papaya, and watermelon.
Please Wait while comments are loading...