ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಲಿ ಸೈಟಿಗೆ ಹೊಸ ಸ್ಪರ್ಶ, ಇದು ನವೀನ್ ಚಂದ್ರ ಚಮತ್ಕಾರ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಅಕ್ಟೋಬರ್ 07 : ನಗರದ ಮಧ್ಯೆ ಖಾಲಿ ಜಾಗ ಸಿಕ್ಕಿದರೆ ಅಲ್ಲಿ ಕಸ ಹಾಕುತ್ತಾರೆ ಪ್ರಜ್ಞಾವಂತ ಜನರು. ಅದರಲ್ಲಿ ಸರ್ಕಾರಿ ಜಾಗ ಸಿಕ್ಕಿ ಬಿಟ್ಟರೆ ಅದು ತ್ಯಾಜ್ಯದ ಗುಂಡಿಯಾವುದು ಖಂಡಿತ. ಆದರೆ, ಮಂಗಳೂರು ನಗರದಲ್ಲಿರುವ ಪುಟ್ಟ ಜಾಗ ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಲು ಸಿದ್ಧ ವಾಗುತ್ತಿದೆ.

ಮಂಗಳೂರಿನ ಬಲ್ಲಾಳ್ ಬಾಗ್‌ನಲ್ಲಿ ಇರುವ ಪುಟ್ಟ ಸರ್ಕಾರಿ ಜಾಗ ಪಾಳುಬಿದ್ದಿತ್ತು. ಇದನ್ನು ಕಸದ ಗುಂಡಿಯಾಗದಂತೆ ಎಚ್ಚರವಹಿಸಿ ಸಾಂಸ್ಕೃತಿಕ ಚಟುವಟಿಕೆಗಳ ತಾಣವಾವಾಗಿ ಮಾಡಲು ಪ್ರಯತ್ನ ನಡೆಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ನವೀನ್ ಚಂದ್ರ. [ಮಂಗಳೂರಿನ ಸೆಂಟ್ರಲ್ ರೈಲ್ವೆ ಆವರಣದಲ್ಲಿ ಓಡಾಡಲು ಅಡ್ಡಿಯಿಲ್ಲ]

land

ಕಸದ ತೊಟ್ಟಿಯಾಗುತ್ತಿದ್ದ ಜಾಗಕ್ಕೆ ನವೀನ್ ಚಂದ್ರ ಅವರು ಕಲಾತ್ಮಕವಾದ ಗೋಡೆ ಕಟ್ಟಿಸಿದ್ದಾರೆ.ಮುಂದಿನ ಹಂತದಲ್ಲಿ ಗೋಡೆಯ ಮೇಲೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ಸ್ವಚ್ಛ ಭಾರತ ಅಭಿಯಾನದ ಚಿತ್ರಗಳನ್ನು ಬಿಡಿಸಲು ಅವರು ಯೋಜನೆ ರೂಪಿಸಿದ್ದಾರೆ. [ಮಂಗಳೂರು : ಜಿಲ್ಲಾಧಿಕಾರಿಗಳಿಗೆ ದೂರು ಕೊಡುವುದು ಹೇಗೆ?]

dakshina kannada

ನಿವೇಶನದಲ್ಲಿರುವ ಬಾದಾಮಿ ಗಿಡಕ್ಕೆ ಕಟ್ಟೆ ಕಟ್ಟಲಾಗಿದೆ. ನಿವೇಶನದ ಒಂದು ಬದಿಯ ಆವರಣ ಗೋಡೆಯಲ್ಲಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ವಾರದ ಕೊನೆಯ ದಿನದಲ್ಲಿ ಪುಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುವ ಉದ್ದೇಶವಿದೆ ಎಂದು ಹೇಳುತ್ತಾರೆ ನವೀನ್ ಚಂದ್ರ.

district news

ಹಳೆಯ ಕಲ್ಲುಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಈ ನಿವೇಶನವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಗೋಡೆಗಳಲ್ಲಿ ಚಿತ್ರವನ್ನು ಮೋಹನ್ ಪ್ರಭು ಅವರು ಬಿಡಿಸಲಿದ್ದಾರೆ. ಪರಿಸರವನ್ನು ಸ್ವಚ್ಛವಾಗಿಡುವ ಮತ್ತು ಸುತ್ತಲಿನ ಜನರು ವಾಕಿಂಗ್ ತೆರಳುವ ಸಂದರ್ಭದಲ್ಲಿ ಉಪಯೋಗವಾಗಲಿ ಎಂದು ಇದನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎನ್ನುತ್ತಾರೆ ನವೀನ್ ಚಂದ್ರ.

English summary
Empty site will become garbage dumping yard in city. But, in Mangaluru city BJP corporator K.Naveenchandra has develop empty as small park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X