ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಉಡುಪಿಯ ನೇಹಾ ಶೆಟ್ಟಿ ಇದೀಗ ಬ್ಯಾಡ್ಮಿಂಟನ್ ಮಿನುಗುತಾರೆ

By ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಉಡುಪಿ, ಅಕ್ಟೋಬರ್, 05 : ಹನ್ನೆರಡು ವರ್ಷದ ಉಡುಪಿ ಮೂಲದ ನೇಹಾ ಶೆಟ್ಟಿ ಕ್ರೀಡಾಲೋಕದ ಬ್ಯಾಡ್ಮಿಂಟನ್ ನಲ್ಲಿ ಹಲವಾರು ಉನ್ನತ ಮಟ್ಟದ ಪ್ರಶಸ್ತಿಗಳನ್ನು ಗಳಿಸಿ ತುಳು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ.

  ನೇಹಾ ಉಡುಪಿಯ ವಳಕಾಡಿನ ಮೂಲ ನಿವಾಸಿಯಾಗಿದ್ದ ನರೇಶ್ ಶೆಟ್ಟಿ ಹಾಗೂ ವಿಜಯಾ ಎನ್. ಶೆಟ್ಟಿ ಅವರ ಮಗಳು. ಪ್ರಸ್ತುತ ದೋಹಾ ಕತಾರ್ ನಲ್ಲಿ ನೆಲೆಸಿದ ನೇಹಾ ಪ್ರಸಕ್ತ ಡಿಪಿಎಸ್-ಎಂಪಿಎಸ್ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟು ಶಿಕ್ಷಕರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.[ಉದ್ಯಾನಗರಿಯಲ್ಲಿ ಕಮರಿಹೋಗುತ್ತಿದೆಯಾ ಆಟದ ಕನಸು?]

  Emerging Badminton player Udupi origin Neha shetty

  ಸಾಧಕಿ ನೇಹಾ ಶೆಟ್ಟಿ 2014 ರಿಂದ ಖತಾರ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ನಲ್ಲಿ ಮನೋಜ್ ಶಹಿಬ್ಜನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ನಾಡಿಗೆ ಇನ್ನಷ್ಟು ಪ್ರಶಸ್ತಿ ತಂದುಕೊಡುವ ಹುಮ್ಮಸ್ಸಿನಲ್ಲಿರುವ ನೇಹಾ ಇದೇ ಮೊದಲ ಬಾರಿ ಖತಾರ್ ನಿಂದ ಬೇರೆಡೆ ನಡೆದ ಜಿಸಿಸಿ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಿ ಯಶಸ್ಸು ಗಳಿಸಿದ್ದಾಳೆ.

  ಯಶಸ್ಸು ಪಡೆದ ಸಂತಸದಲ್ಲಿರುವ ನೇಹಾ,' ಇದು ನನ್ನ ಜೀವನದ ಒಂದು ಅಮೂಲ್ಯ ಹಂತ. ನನ್ನ ಈ ಯಶಸ್ಸಿಗೆ ಹೆತ್ತವರು, ಗುರು-ಹಿರಿಯರ ಆಶೀರ್ವಾದ ಹಾಗೂ ಸ್ನೇಹಿತರ ಶುಭ ಹಾರೈಕೆಗಳೇ ಕಾರಣ' ಎಂದು ಮನತುಂಬಿ ನುಡಿಯುತ್ತಾಳೆ.

  Emerging Badminton player Udupi origin Neha shetty

  ಯಾವ ಯಾವ ಟೂರ್ನಿಯಲ್ಲಿ ಭಾಗವಹಿಸಿ ಜಯಶಾಲಿಯಾಗಿದ್ದಾರೆ?

  * ಕತಾರ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಜಿಸಿಸಿ ಮಟ್ಟದಲ್ಲಿ ಅದ್ಭುತ ಸಾಧನೆ

  * ಕುವೈತ್ ನಲ್ಲಿ 12 ವರ್ಷದೊಳಗಿನ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯದಲ್ಲಿ ಗೆದ್ದಿದ್ದಾರೆ.

  * 2013 ರಲ್ಲಿ ಕಿಂಗ್ಸ್ ಕ್ವಾರ್ಟರ್ ಬ್ಯಾಡ್ಮಿಂಟನ್ ಓಪನ್ ನ ಸಿಂಗಲ್ಸ್ ನಲ್ಲಿ ಪ್ರಥಮ

  * 2014ರಲ್ಲಿ ಕಿಂಗ್ಸ್ ಕ್ವಾರ್ಟರ್ ಬ್ಯಾಡ್ಮಿಂಟನ್ ಓಪನ್ ನ ಸಿಂಗಲ್ಸ್ ನಲ್ಲಿ ದ್ವಿತೀಯ, ಡಬಲ್ಸ್ ನಲ್ಲಿ ಪ್ರಥಮ

  * ಜಿಸಿಸಿ ಓಪನ್ ಕ್ವಾರ್ಟರ್ ಡಬಲ್ಸ್ ನಲ್ಲಿ ದ್ವಿತೀಯ

  * 2015ರಲ್ಲಿ ಕ್ವಾರ್ಟರ್ ಓಪನ್ ನಲ್ಲಿ ಸಿಂಗಲ್ಸ್ ದ್ವಿತೀಯ, ಮತ್ತು ಕ್ವಾರ್ಟರ್ ಓಪನ್ ನಲ್ಲಿ ಪ್ರಥಮ ಸ್ಥಾನ

  * 12 ವರ್ಷದೊಳಗಿನ ಸಿಂಗಲ್ಸ್ ಪಂದ್ಯಾಟದ ಫೈನಲ್ ನಲ್ಲಿ ಅಗ್ರ ಕ್ರಮಾಂಕದ ಆಟಗಾರ್ತಿ ರೀಮ್ ಸಿರಜ್ ಅವರನ್ನು3 ಸೆಟ್ಸ್ ಗಳಿಂದ
  ಸೋಲಿಸಿದರು. (12-21, 21-16, 21-6)

  * 14 ವರ್ಷದೊಳಗಿನ ಹುಡುಗಿಯರ ಡಬಲ್ಸ್ ವಿಭಾಗದ ಫೈನಲ್ ನಲ್ಲಿ ಸಾಧ್ವಿ ಕೃಷ್ಣರನ್ನು ಸೋಲಿಸಿದ್ದಾರೆ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Neha Shetty is one of the famous Badmiton player in Junior section. She is resident of Udupi, She is won many prizes in International tournaments.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more