• search

ಶಿಕ್ಷಣ ವ್ಯವಸ್ಥೆ ವ್ಯಾಪಾರದ ಸರಕಾಗಿದೆ, ಮನುಷ್ಯತ್ವ ನಶಿಸುತ್ತಿದೆ: ಭಾಗವತ್

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಮಂಗಳೂರು, ಮಾರ್ಚ್ 28: "ವಿವಿಗಳಲ್ಲಿ ಸ್ಮಗ್ಲಿಂಗ್ ಕಲಿಸಲ್ಲ. ಆದರೆ ನಮ್ಮಲ್ಲಿ ಸ್ಮಗ್ಲರ್ ಗಳು ಹೆಚ್ಚುತ್ತಿದ್ದಾರೆ . ಶಿಕ್ಷಣ ವ್ಯಾಪಾರದ ಸರಕಾಗಿದ್ದರಿಂದ ಮನುಷ್ಯತ್ವ ನಶಿಸುತ್ತಿದೆ ಎಂದು ಆರ್.ಎಸ್.ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

  ವಿಟ್ಲದ ಮೈತ್ರೇಯಿ ಗುರುಕುಲದ 24ನೇ ವರ್ಷದ ಅರ್ಧ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

  ರಾಮಮಂದಿರ ನಿರ್ಮಾಣ ನಮ್ಮ ಆಸೆಯಲ್ಲ, ಸಂಕಲ್ಪ: ಭಾಗವತ್

  ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಮೈತ್ರೆಯೀ ಗುರುಕುಲಂಗೆ ಮೋಹನ್ ಭಾಗವತ್ ಮಂಗಳವಾರ ಸಂಜೆ ಭೇಟಿ ನೀಡಿದ್ದರು. ಗುರುಕುಲದ ಅರ್ಧಮಂಡಲೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋಹನ್ ಭಾಗವತ್, ಇಂದಿನ ಶಿಕ್ಷಣ ಪದ್ಧತಿಯ ಕುರಿತು ಮಾತನಾಡಿದರು.

  Education is now become business, it will not teach humanity: Mohan Bhagwat

  "ಮನುಷ್ಯತ್ವ ಕಲಿಸುವ ಶಿಕ್ಷಣ ನಮ್ಮದಾಗಬೇಕು. ಬರೀ ಜೀವಿಸುವುದಕ್ಕಷ್ಟೇ ಶಿಕ್ಷಣ ಬೇಕಾಗಿಲ್ಲ," ಎಂದು ಅವರು ಅಭಿಪ್ರಾಯ ಪಟ್ಟರು.

  ಸ್ವಾತಂತ್ರ್ಯ ಬಳಿಕ ಶಿಕ್ಷಣ ಸರಕಾರದ ನಿಯಂತ್ರಣಕ್ಕೆ ಬಂತು. ಅದಕ್ಕೂ ಹಿಂದೆ ಶಿಕ್ಷಣ ವ್ಯಾಪಾರದ ವಸ್ತುವಾಗಿರಲಿಲ್ಲ . ಆದರೆ ಈಗ ಶಿಕ್ಷಣ ವ್ಯಾಪಾರದ ಸರಕಾಗಿದ್ದರಿಂದ ಮನುಷ್ಯತ್ವ ನಶಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

  ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

  ಶೇಷ್ಠ ವ್ಯಕ್ತಿಗಳನ್ನು ಸೃಷ್ಠಿಸುವ ಕಾರ್ಯ ವಿಶ್ವವಿದ್ಯಾನಿಲಯಗಳಲ್ಲಿ ಕಡಿಮೆಯಾಗುತ್ತಿದ್ದು, ಕಳ್ಳರು, ಕಳ್ಳ ಸಾಗಾಟಗಾರರನ್ನು ಸೃಷ್ಟಿಸುವ ವಿಶ್ವವಿದ್ಯಾಲಯಗಳು ಹೆಚ್ಚಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು .

  Education is now become business, it will not teach humanity: Mohan Bhagwat

  ವಿದೇಶೀಯರ ಆಳ್ವಿಕೆಯ ಸಂದರ್ಭದಲ್ಲಿ ಅವರಿಗೆ ಬೇಕಾದ ಶಿಕ್ಷಣ ಪದ್ಧತಿಯನ್ನು ದೇಶದಲ್ಲಿ ಜಾರಿಗೆ ತಂದಿದ್ದರು. ಅದರ ಮೂಲಕ ಆ ಶಿಕ್ಷಣದ ಲಾಭವನ್ನು ಅವರು ಬಳಸಿಕೊಂಡರು. ಇಂದಿಗೂ ಆ ವಿದೇಶಿ ಶಿಕ್ಷಣ ಪದ್ಧತಿ ಜಾರಿಯಲ್ಲಿದೆ. ಭಾರತೀಯ ಶಿಕ್ಷಣ ಪದ್ಧಿತಿಯ ಪುನರ್ ರಚನೆ ಪ್ರಸ್ತುತ ಅಗತ್ಯತೆಯ ವಿಚಾರವಾಗಿದೆ ಎಂದವರು ಹೇಳಿದರು.

  ದೇಶದಲ್ಲಿ ವಿದೇಶೀ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿರುವಾಗಲೂ ವಿವೇಕಾನಂದ ಹಾಗೂ ಮಹಾತ್ಮಾ ಗಾಂಧಿಯಂತಹ ಶ್ರೇಷ್ಟರಲ್ಲಿ ಜ್ಞಾನ, ದೇಶಭಕ್ತಿ ಮೂಡಲು ಈ ಮಣ್ಣಿನ ಸಂಸ್ಕಾರ ಶಿಕ್ಷಣವೇ ಕಾರಣ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ಲೇಷಿಸಿದರು.

  ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಅವರೊಂದಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗೂರೂಜಿ, ಅದಿ ಚುಂಚನಗಿರಿ ಮಹಾಸಂಸ್ಥಾನದ ನಿರ್ಮಾಲಾನಂದನಾಥ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

  Education is now become business, it will not teach humanity: Mohan Bhagwat

  ಕಾರ್ಯಕ್ರಮದ ಅಂಗವಾಗಿ ಉದ್ಯಮ ಹಾಗೂ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಮೋಹನ್ ಭಾಗವತ್ ಸನ್ಮಾನಿಸಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  "The education is now become business. It will not teach humanity," said RSS Sarasanghachalak Mohan Bhagwat here in Maitriyi Gurukalam, Vitla of Dakshina Kannada district on March 27th.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more