ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣಪತಿ ಆತ್ಮಹತ್ಯೆ, ಮನೋವೈದ್ಯರಿಂದ ಮಾಹಿತಿ ಸಂಗ್ರಹ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 11 : ಮಂಗಳೂರು ಐಜಿ ಕಚೇರಿ(ಪಶ್ಚಿಮ ವಲಯ) ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಮಂಗಳೂರಿನಲ್ಲಿ ಮಾಹಿತಿ ಸಂಗ್ರಹಿಸಿದ್ದಾರೆ. ಮನೋರೋಗ ತಜ್ಞ ಡಾ.ಕಿರಣ್ ಅವರಿಂದ ಸಿಐಡಿ ತಂಡ ಮಾಹಿತಿ ಸಂಗ್ರಹಿಸಿದೆ.

ಸಿಐಡಿ ಎಡಿಜಿಪಿ ಪ್ರತಾಪ್ ರೆಡ್ಡಿ, ಐಜಿಪಿ ಹೇಮಂತ್ ನಿಂಬಾಳ್ಕರ್ ನೇತೃತ್ವದದ ತಂಡ ಭಾನುವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿ ಗಣಪತಿ ಅವರಿಗೆ ಚಿಕಿತ್ಸೆ ನೀಡಿದ್ದ ಮನೋರೋಗ ತಜ್ಞ ಡಾ. ಕಿರಣ್ ಅವರ ಜೊತೆ ಅರ್ಧ ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿತು. [ತಲೆನೋವು, ಖಿನ್ನತೆ, ಮರೆವಿಗೆ ಚಿಕಿತ್ಸೆ ಪಡೆದಿದ್ದ ಗಣಪತಿ]

Hemanth Nimbalkar

ಎಂ.ಕೆ.ಗಣಪತಿ ಅವರು ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದ ವಿವರ, ಸೇವಿಸುತ್ತಿದ್ದ ಮಾತ್ರೆಗಳ ಬಗ್ಗೆ ತಂಡ ವಿವರ ಪಡೆದಿದೆ. ವೈದ್ಯರ ಜೊತೆ ಚರ್ಚೆ ನಡೆಸಿದ ಎಲ್ಲಾ ಮಾಹಿತಿಯನ್ನು ವಿಡಿಯೋ ದಾಖಲೀಕರಣ ಮಾಡಲಾಗಿದೆ ಎಂದು ತಿಳಿದುಬಂದಿದೆ. [ಜಾರ್ಜ್ ವಿರುದ್ಧ FIR ದಾಖಲಿಸಿ : ಓದುಗರ ಒಕ್ಕೊರಲ ಕೂಗು]

ಶನಿವಾರ ಸಂಜೆ ಮಂಗಳೂರು ನಗರಕ್ಕೆ ಆಗಮಿಸಿದ್ದ ತಂಡ ಐಜಿಪಿ ಕಚೇರಿಯಲ್ಲಿರುವ ಡಿವೈಎಸ್‌ಪಿ ಕಚೇರಿಯ ಕಡತಗಳನ್ನು ಪರಿಶೀಲಿಸಿತ್ತು. ಭಾನುವಾರ ನಗರದಲ್ಲಿ ಗಣಪತಿಯವರಿಗೆ ಸಂಬಂಧಿಸಿದ ಮಾಹಿತಿ ಕಲೆ ಹಾಕಿದ ಬಳಿಕ ಸಂಜೆ ಮಡಿಕೇರಿಗೆ ವಾಪಸ್ ಆಯಿತು. [ಗಣಪತಿ ಆತ್ಮಹತ್ಯೆ : ಯಾರು, ಏನು ಹೇಳಿದರು?]

ಮಂಗಳೂರಿನಲ್ಲಿರುವ ಬಿಜೈನಲ್ಲಿ ಎಂ. ಕೆ ಗಣಪತಿಯವರ ಫ್ಲ್ಯಾಟ್‌ ಇದೆ. ಆದರೆ, ಕುಟುಂಬ ಸದಸ್ಯರು ಮಡಿಕೇರಿಯಲ್ಲಿರುವ ಕಾರಣ ಫ್ಲ್ಯಾಟ್‌ಗೆ ಸಿಐಡಿ ಅಧಿಕಾರಿಗಳು ಭೇಟಿ ಕೊಟ್ಟಿಲ್ಲ. ಕುಟುಂಬ ಸದಸ್ಯರು ಮಡಿಕೇರಿಯಿಂದ ವಾಪಸ್ ಆದ ಬಳಿಕ ಮತ್ತೊಮ್ಮೆ ಸಿಐಡಿ ತಂಡ ಆಗಮಿಸಿ ವಿವರ ಪಡೆದುಕೊಳ್ಳಲಿದೆ.

English summary
The investigation team lead by CID IGP Hemanth Nimbalkar visited Mangaluru on July 10 and investigated the Psychiatrist Dr. Kiran who treated DySP MK Ganapathi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X